ಯಲ್ಲಾಪುರ :- ಏಪ್ರಿಲ್ ೮ ರಂದು ದಾವಣಗೆರೆ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಯಲ್ಲಾಪುರದ ಕು.ತೇಜಸ್ವಿನಿ .ಯು. ಭಟ್ಟ ಇವಳಿಗೆ ಎಂ.ಎಸ್.ಸಿ ಸಸ್ಯಶಾಸ್ತ್ರದಲ್ಲಿ ಪ್ರಥಮ ಸ್ಥಾನ ಪಡೆದದ್ದಕ್ಕಾಗಿ ಎರಡು ಬಂಗಾರದ ಪದಕ ವಿತರಿಸಲಾಯಿತು.
ಅತೀ ಹೆಚ್ಚು ಅಂಕ ಪಡೆದದ್ದಕ್ಕಾಗಿ ಒಂದನ್ನು ಹಾಗೂ ಎಲ್ಲ ಸೆಮಿಸ್ಟರ್ ನಲ್ಲಿ ಅತೀ ಹೆಚ್ಚು ಅಂಕ ಪಡೆದ ಮಹಿಳಾ ವಿದ್ಯಾರ್ಥಿನಿಯಾಗಿ ಎರಡು ಬಂಗಾರದ ಪದಕವನ್ನು ಉಪಕುಲಪತಿಗಳು ವಿತರಿಸಿದರು.
ಈ ಸಂದರ್ಭದಲ್ಲಿ Academy For Creative Teaching ನ ಸಂಸ್ಥಾಪಕ-ನಿರ್ದೇಶಕರು ಹಾಗೂ ಖ್ಯಾತ ಅಂಕಣಕಾರರಾದ ಡಾII ಗುರುರಾಜ ಕರಜಗಿರವರು ಹಾಗೂ ಲೋಕಸಭಾ ಸದಸ್ಯ ಜಿ.ಎಂ.ಸಿದ್ದೇಶ್ವರ ಉಪಸ್ಥಿತರಿದ್ದರು.