Sirsi:ಬಾವಿಯಲ್ಲಿ ಅನಿಲ ಯುಕ್ತ ನೀರು ಸ್ಫೋಟ-ಮೂವರಿಗೆ ಗಂಭೀರ ಗಾಯ

231

ಕಾರವಾರ :- ಬಾವಿಯೊಂದರಲ್ಲಿ(well) ಅನಿಲಯುಕ್ತ ನೀರನ್ನು ಸ್ವಚ್ಛ ಮಾಡಲು(Carbonated water)
ತೆರಳಿದ್ದ ಕಾರ್ಮಿಕರು ಪರೀಕ್ಷೆಗೆಂದು ಮೇಣದ ಬತ್ತಿ ಹೊತ್ತಿಸಿ ಅನಿಲ ಸ್ಪೋಟಗೊಂಡು(blast) ಮೂರು ಜನ ಗಂಭೀರ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ(sirsi) ನಗರದ ಕೋಟೆಗಲ್ಲಿಯಲ್ಲಿರುವ ಸೌದಾಗರ ಓಣಿಯಲ್ಲಿ ಗುರುವಾರ ನಡೆದಿದೆ.

ಇದನ್ನೂ ಓದಿ:-ಮಿಂಚಾಂಗ್ ಚಂಡಮಾರುತ: ಕರ್ನಾಟಕದ ಹಲವು ಕಡೆ ಮಳೆ ಎಲ್ಲೆಲ್ಲಿ ಮಳೆ ವಿವರ ನೋಡಿ

ಕಾರ್ಮಿಕರಾದ(labor) ಕಲಗಾರಿನ ವಿನಾಯಕ ಪೂಜಾರಿ, ರವಿ ಲಮಾಣಿ ಹಾಗೂ ಶಿರಸಿ ಗಣೇಶ ನಗರದ ಜಗದೀಶ ಗೌಡ ಸ್ಪೂಟದಿಂದ ಗಾಯಗೊಂಡವರಾಗಿದ್ದಾರೆ.

ಕಾರ್ಮಿಕ ವಿನಾಯಕ ಪೂಜಾರಿ ಸ್ಥಿತಿ ಚಿಂತಾಜನಕವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಸಾಗಿಸಲಾಗಿದೆ.

ಘಟನೆ ಏನು?
ಕೋಟೆಗಲ್ಲಿಯಲ್ಲಿರುವ ಸೌದಾಗರ ಓಣಿಯ ನಗರಸಭೆ ಸಾರ್ವಜನಿಕ ಬಾವಿಯಲ್ಲಿ ಇದ್ದಕ್ಕಿದ್ದಂತೆ ರಾಸಾಯನಿಕ ಯುಕ್ತ ಇಂಧನ ಅನಿಲ ರೂಪದ ನೀರು ಮಿಶ್ರಣವಾಗಿದೆ.ಹೀಗಾಗಿ ಈ ಬಾವಿಯನ್ನು ಹತ್ತಕ್ಕೂ ಹೆಚ್ಚು ಕುಟುಂಬಗಳು ಬಳಸುತಿದ್ದರಿಂದ ಸ್ವಚ್ಛ ಮಾಡಲು ಮೂರು ಜನ ಕಾರ್ಮಿಕರು ತೆರಳಿದ್ದರು.ಬಾವಿಯಲ್ಲಿ ಇಂಧನ ವಾಸನೆ ಬಂದಿದ್ದರಿಂದ ಬಾವಿಗೆ ಇಳಿದರೇ ,ಉಸಿರುಗಟ್ಟುವ ಸಂದರ್ಭ ಇರುವುದರಿಂದ ತಪಾಸಣೆಗಾಗಿ ಬಕೇಟ್ ನಲ್ಲಿ ಮಂಬತ್ತಿ ಹಚ್ಚಿ ಇಳಿಸಿದ್ದು ಈ ವೇಳೆ ದ್ರವ ರೂಪದ ಅನಿಲಕ್ಕೆ ಬೆಂಕಿ ಹೊತ್ತಿಕೊಂಡು ಸ್ಪೂಟವಾಗಿದೆ. ಈ ಸ್ಪೂಟದಿಂದ ಮೂವರಿಗೂ ಗಂಭೀರ ರೂಪದ ಗಾಯವಾಗಿದೆ.

ಇನ್ನು ಸ್ಪೂಟಗೊಳ್ಳುತಿದ್ದಂತೆ ನಗರಸಭೆಯಿಂದ ನೀರು ಬಳಸದಂತೆ ನೋಟಿಸ್ ನನ್ನು ಬಾವಿಗೋಡೆಗೆ ಅಂಟಿಸಿದ್ದು ,ನೀರನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!