BREAKING NEWS
Search

Murdedhwara:ಹೆಂಡತಿ ಕತ್ತು ಸೀಳಿ ಹತ್ಯೆಮಾಡಿ ಹೋಟಲ್ ಗೆ ಹೋಗಿ ಕುಳಿತ ಗಂಡ!

116

ಕಾರವಾರ :-ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಗಂಡನೇ ಪತ್ನಿಯನ್ನು ಕತ್ತು ಸೀಳಿ ಕೊಲೆ ಮಾಡಿದ ಘಟನೆ
ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ನಡೆದಿದೆ.

ಮುರುಡೇಶ್ವರದ ನಿವಾಸಿ ನಂದಿನಿ ಲೋಕೇಶ ನಾಯ್ಕ(30)ಹತ್ಯೆಯಾದ ಮಹಿಳೆಯಾಗಿದ್ದು
ಶಿಲ್ಪಿ ಕೆಲಸ ಮಾಡುತ್ತಿದ್ದ ಮುರುಡೇಶ್ವರ ನಾಡವರ ಕೇರಿ ನಿವಾಸಿ ಲೋಕೇಶ ನಾಯ್ಕ (34) ಎಂಬಾತನೇ ಕೊಲೆ‌ ಮಾಡಿದ ಆರೋಪಿಯಾಗಿದ್ದಾನೆ. ಓರ್ವ ಪುತ್ರ ಹಾಗೂ ಪುತ್ರಿಯನ್ನು ಹೊಂದಿದ್ದ ದಂಪತಿಗಳು ಕಳೆದ 3 ದಿನಗಳಿಂದ ಸಬ್ಬತ್ತಿ ಕ್ರಾಸ್‌ನಲ್ಲಿರುವ ಮನೆಯೊಂದರಲ್ಲಿ ಬಾಡಿಗೆಯಲ್ಲಿ ವಾಸವಾಗಿದ್ದರು. ರಾತ್ರಿ ಇಬ್ಬರ ನಡುವೆ ಕಲಹ ಏರ್ಪಟ್ಟು ಏಕಾ ಏಕಿ ಪತ್ನಿಯ ಕತ್ತು ಸೀಳಿದ್ದಾನೆ.ಈವೇಳೆ ಪತ್ನಿ ಮನೆಯಿಂದ ಹೊರಬಂದು ಸಹಾಯ ಕೇಳಿದ್ದು ರಕ್ಷಣೆ ಮಾಡುವುದರೊಳಗೆ ತೀವ್ರ ರಕ್ತಸ್ರಾವವಾಗಿ ಸಾವು ಕಂಡಿದ್ದಾಳೆ.ಕತ್ತುಸೀಳಿ ಪರಾರಿಯಾಗಿದ್ದ ಲೋಕೇಶ ನಾಯ್ಕ‌ನನ್ನು ಖಾಸಗಿ ಹೋಟೆಲೊಂದರಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದು
ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!