BREAKING NEWS
Search

Tourist rescue: ಮುರ್ಡೇಶ್ವರ ,ಕುಮಟಾದಲ್ಲಿ ಪ್ರವಾಸಿಗರ ರಕ್ಷಣೆ ಓರ್ವ ಸಾವು

84

ಕಾರವಾರ:- ದಸರೆ ರಜೆ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸಿಗರ ದಂಡೇ ಹರಿದುಬರುತಿದ್ದು ಜಿಲ್ಲೆಯ ಮುರ್ಡೇಶ್ವರದಲ್ಲಿ ಮೂರು ಜನ ಪ್ರವಾಸಿಗರನ್ನು ಲೈಪ್ ಗಾರ್ಡಗಳು ರಕ್ಷಣೆ ಮಾಡಿದರೇ ಕುಮಟಾದ ಬಾಡದಲ್ಲಿ ಸಮುದ್ರಕ್ಕಿಳಿದಿದ್ದ ಪ್ರವಾಸಿಗ ನೀರಿನಲ್ಲಿ ಮುಳುಗಿ ಸಾವು ಕಂಡಿದ್ದಾನೆ. ಮುರ್ಡೇಶ್ವರದಲ್ಲಿ ಬಾಗಲುಕೋಟೆಯಿಂದ ಆಗಮಿಸಿದ್ದ ಮೂರು ಜನ ಪ್ರವಾಸಿಗರು ನೀರಿನಲ್ಲಿ ಇಳಿದಾಗ ಅಲೆಗೆ ಸಿಲುಕಿದ್ದು ಈ ವೇಳೆ ಲೈಫ್‌ಗಾರ್ಡ್ ಸಿಬ್ಬಂದಿಗಳಾದ ಶಶಿ, ಪಾಂಡು, ರಾಮಚಂದ್ರರವರು ರಕ್ಷಣೆ ಮಾಡಿ ಪ್ರಥಮ ಚಿಕಿತ್ಸೆ ನೀಡಿ ಬದುಕಿಸಿದ್ದಾರೆ.


ಬಾಗಲುಕೋಟೆ ಮೂಲದ ಬಸವನಗೌಡ ಪಾಟೀಲ್(22), ಶರಣು ಇಂಚಲ್(21), ರವಿಚಂದ್ರನ್(22)ರಕ್ಷಣೆಗೊಳಗಾದ ಪ್ರವಾಸಿಗರಾಗಿದ್ದಾರೆ‌ ಇನ್ನು ಕುಮಟಾದ ಬಾಡ ಕಡಲ ತೀರದ ಪ್ರತ್ತೇಕ ಪ್ರಕರಣದಲ್ಲಿ ಶಿವಮೊಗ್ಗ ಮೂಲದ ಪ್ರಶಾಂತ್ ಗುಪ್ತ ಸಮುದ್ರದಲ್ಲಿ ಮುಳಗಿ ಸಾವು ಕಂಡಿದ್ದು ಶಿವಮೊಗ್ಗ ದಿಂದ 11 ಜನರೊಂದಿಗೆ ಕುಮಟಾ ಕ್ಕೆ ಪ್ರವಾಸ ಬಂದಿದ್ದರು. ಈ ಘಟನೆ ಸಂಬಂಧ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!