ಪಿ.ಯು ಕಾಲೇಜಿನಲ್ಲಿ ವಿದ್ಯಾರ್ಥಿಗಳು ಬಳಸುತಿದ್ದ 250ಮೊಬೈಲ್ ಜಪ್ತಿ! ತಮಗೇ ತಿಳಿಯದೆ ಮಕ್ಕಳು ಬಳಸುತಿದ್ದ ಮೊಬೈಲ್ ನೋಡಿ ಪೋಷಕರು ಶಾಕ್

1023

ಕಾರವಾರ :- ಕರೋನಾ ಬಂದ ನಂತರ ಆನ್ ಲೈನ್ ಕ್ಲಾಸ್ ಗಳಿಗೆ ಮಕ್ಕಳ ಕೈಗಳಲ್ಲಿ ಮೊಬೈಲ್ ಗಳು ಬಂದು ಕುಳಿತಿವೆ. ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ತೊಡಕಾಗಬಾರದು ಎಂದು ಹಲವು ಪೊಷಕರು ತಮ್ಮ ಮಕ್ಕಳಿಗೆ ತಮ್ಮ ಕಷ್ಟಗಳನ್ನು ಬದಿಗೊತ್ತಿ ಮೊಬೈಲ್ ಬಳಸಲು ಕರೀದಿಸಿ ನೀಡಿದರು‌‌. ಆದ್ರೆ ಇದೀಗ ಬೌತಿಕ ತರಗತಿ (ಆಫ್ ಲೈನ್ ಕ್ಲಾಸ್) ಗಳು ಪ್ರಾರಂಭವಾಗಿದೆ. ಆದ್ರೆ ಈ ಮೊಬೈಲ್ ವ್ಯಾಮೋಹ ಮಾತ್ರ ಮಕ್ಕಳನ್ನು ಬಿಟ್ಟು ಹೋಗುತ್ತಿಲ್ಲ‌.
ಆನ್ ಲೈನ್ ತರಗತಿಗೆ ಮಾತ್ರ ಸೀಮಿತವಾಗಿದ್ದ ಮೊಬೈಲ್ ವಿದ್ಯಾರ್ಥಿಗಳ ಕೈಯಲ್ಲಿ ಚಾಟಿಂಗ್,ಗೇಮಿಂಗ್ ,ಅಶ್ಲೀಲ ವಿಡಿಯೋ ವೀಕ್ಷಣೆಗೆ ಬಳಕೆಯಾಗುತ್ತಿದೆ.

ಹೌದು ಇದಕ್ಕೆ ನಿದರ್ಶನ ಎನ್ನುವಂತೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಸರ್ಕಾರಿ ಪಿ‌.ಯು ಕಾಲೇಜಿನಲ್ಲಿ ಕಾಲೇಜಿನ ಪ್ರಾಚಾರ್ಯರು ತರಗತಿ ಸಮಯದಲ್ಲಿ ವಿದ್ಯಾರ್ಥಿಗಳು ಬಳಸುತಿದ್ದ 250 ವಿವಿಧ ಕಂಪನಿಯ ಮೊಬೈಲ್ ಅನ್ನು ವಶಕ್ಕೆ ಪಡೆದಿದ್ದಾರೆ‌. ಇನ್ನು ಈ ಸಂಬಂಧ ವಿದ್ಯಾರ್ಥಿಗಳ ಪೋಷಕರಿಗೆ ಮಾಹಿತಿ ನೀಡಿದಾಗ ಹಲವು ಪೋಷಕರಿಗೆ ತಮ್ಮ ಮಕ್ಕಳ ಬಳಿ ಮೊಬೈಲ್ ಇರುವುದೇ ತಿಳಿದಿರಲಿಲ್ಲ. ಇನ್ನು ಹಲವು ವಿದ್ಯಾರ್ಥಿಗಳ ಮೊಬೈಲ್ ನಲ್ಲಿ ಗೂಗಲ್ ಹಿಸ್ಟರಿ ತೆಗೆದು ನೋಡಿದಾಗ ಅಶ್ಲೀಲ ವಿಡಿಯೊ ಸೇರಿದಂತೆ ಇತರೆ ವಿಡಿಯೋ ನೋಡಿರುವುದು ಗಮನಕ್ಕೆ ಬಂದಿದೆ. ಇನ್ನು ಹಲವರು ಮೊಬೈಲ್ ಮರಳಿ ಪಡೆಯಲು ತಮ್ಮ ಪೋಷಕರು ಎಂದು ಇತರೆ ವ್ಯಕ್ತಿಗಳನ್ನು ಕರೆತಂದು ಪ್ರಾಚಾರ್ಯರ ಕೈಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.

ಕಾಲೇಜು ಪ್ರಾರಂಭವಾದಾಗ ಮಕ್ಕಳು ಅಧ್ಯಯನದ ಕಡೆ ಗಮನ ನೀಡದಿರುವುದು ಗಮನಕ್ಕೆ ಬಂತು.ಇತರೆ ಚಟುವಟಿಕೆಯಲ್ಲಿ ಸಹ ವಿದ್ಯಾರ್ಥಿಗಳು ಹಿಂದೆ ಬಿದ್ದುದ್ದರು‌, ಸದಾ ಮೊಬೈಲ್ ನಲ್ಲಿ ಮಕ್ಕಳು ಕಾಲೇಜಿನಲ್ಲಿ ಕಳೆಯುವುದನ್ನು ನೋಡಿ ಅನಿವಾರ್ಯವಾಗಿ ಕಾಲೇಜಿನಲ್ಲಿ ಮಕ್ಕಳ ಮೊವೈಲ್ ಅನ್ನು ಜಪ್ತಿ ಮಾಡಲಾಯಿತು ಎಂದು ಕಾಲೇಜಿನ ಪ್ರಾಂಶುಪಾಲ ಸತೀಶ್ ನಾಯ್ಕ ರವರು ತಿಳಿಸಿದ್ದಾರೆ.

ಸದ್ಯ ಮಕ್ಕಳಿಗೆ ಎಚ್ಚರಿಕೆ ನೀಡಿ ಮೊಬೈಲ್ ಅನ್ನು ಮರಳಿ ನೀಡಲಾಗಿದೆ‌. ಆದರೇ ಮಕ್ಕಳು ಮೊಬೈಲ್ ಗಳನ್ನು ಅಧ್ಯಯನ ವಿಷಯಕ್ಕೆ ಹೊರತುಪಡಿಸಿ, ಇತರೆ ವಿಷಯಗಳಿಗೆ ಬಳಸುತ್ತಿರುವುದು ಮಾತ್ರ ಆತಂಕ ತರುವಂತೆ ಮಾಡಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!