Sirsi|ಹಸಮಣೆ ಏರಬೇಕಿದ್ದ ಯುವತಿ ಪ್ರೀತಿಸಿದ ಯುವಕನೊಂದಿಗೆ ಪರಾರಿ| ಮುಂದೇನಾಯ್ತು?
ಕಾರವಾರ :- ಹಸೆಮಣೆ ಏರಬೇಕಿದ್ದ ಯುವತಿಯೊಬ್ಬಳು ಮದುವೆಗೆ ಕೆಲವೇ ಗಂಟೆಗಳಿರುವಾಗ ಪ್ರೀತಿಸಿದ ಯುವಕನೊಂದಿಗೆ ನಾಪತ್ತೆಯಾಗಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದಲ್ಲಿ ನಡೆದಿದೆ. ಮದುವೆ ಸಂಭ್ರಮದಲ್ಲಿದ್ದ ಕುಟುಂಬಕ್ಕೆಇದೀಗ ಬರ ಸಿಡಿಲು ಬಡಿದಂತಾಗಿದೆ.
ಶಿರಸಿ ನಗರದ ನಿವಾಸಿ ಸೀಫಾ ಖಾನ್ ನಾಪತ್ತೆಯಾಗಿರುವ ಯುವತಿ. ಶಿರಸಿ(sirsi) ಕೆ.ಹೆಚ್.ಬಿ ಕಾಲೋನಿಯ MBBS ಓದುತ್ತಿರುವ ಯುವಕನ ಜೊತೆ ಪರಾರಿಯಾಗಿದ್ದಾಳೆ.ಇಂದು ಮಧ್ಯಾಹ್ನ ಶಿರಸಿಯ ಉಸರಿ ರಸ್ತೆಯ ಕಲ್ಯಾಣ ಮಂಟಪದಲ್ಲಿ ಸೀಫಾ ಖಾನ್ ಮದುವೆ ನಿಶ್ಚಯವಾಗಿತ್ತು.
ಮದುವೆಯ ಸಿದ್ಧತೆಗಳಲ್ಲಿ ಕುಟುಂಬಸ್ಥರೆಲ್ಲರೂ ಬ್ಯುಸಿಯಾಗಿದ್ದರು. ಆದರೆ, ವಧುವನ್ನು ಸಜ್ಜುಗೊಳಿಸಲು ಆಕೆಯ ಕೋಣೆಗೆ ಹೋಗಿ ನೋಡಿದಾಗ ಯುವತಿ ಕಾಣಿಸಲಿಲ್ಲ. ಮನೆಯವರು ಸುತ್ತಮುತ್ತ ಹಾಗೂ ಪರಿಚಿತರ ಮನೆಗಳಲ್ಲಿ ಎಷ್ಟೇ ಹುಡುಕಾಡಿದರೂ ಯಾವುದೇ ಸುಳಿವು ಸಿಕ್ಕಿಲ್ಲ.ನಂತರ ಶಿರಸಿಯ ಹೊಸ ಮಾರುಕಟ್ಟೆ ಠಾಣೆಗೆ ಆಕೆಯ ತಂದೆ ಝಹೀರ್ ಖಾನ್ ದೂರು ನೀಡಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ ಸೀಫಾ ಖಾನ್ ಪರಿಚಯಸ್ತ ಯುವಕ ನೊಂದಿಗೆ ಪ್ರೀತಿಸುತಿದ್ದು ಇದಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಇನ್ನು ಬಲವಂತವಾಗಿ ವಿದೇಶದಲ್ಲಿ ಇರುವ ಯುವಕನ ಜೊತೆ ಮದುವೆ ನಿಶ್ಚಯಮಾಡಿದ್ದರು. ಇನ್ನು ಪೋಷಕರ ಬಲವಂತದ ಮದುವೆಗೆ ಒಪ್ಪದ ಸೀಫಾ ಖಾನ್ ಪ್ರೀತಿಸಿದ ಯುವಕನ ಜೊತೆ ಪರಾರಿಯಾಗಿದ್ದಾಳೆ.





