Kumta-ತದಡಿ ಬಂದರಿನಲ್ಲಿ ಬೋಟ್ ಮುಳುಗಡೆ- ನಾಲ್ವರು ಮೀನುಗಾರರ ರಕ್ಷಣೆ-ವಿಡಿಯೋ ನೋಡಿ

ತದಡಿ ಅಳಿವೆಯಲ್ಲಿ ಹೂಳಿನಲ್ಲಿ ಸಿಲುಕಿ ಮುಳುಗಡೆಯಾದ ಶ್ರೀದೇವಿ ಮೀನುಗಾರಿಕಾ ಬೋಟ್ ತದಡಿ ಅಳಿವೆಯಲ್ಲಿ ಹೂಳಿನಲ್ಲಿ ಸಿಲುಕಿ ಮುಳುಗಡೆಯಾದ ಶ್ರೀದೇವಿ ಮೀನುಗಾರಿಕಾ ಬೋಟ್
ತದಡಿ ಅಳಿವೆಯಲ್ಲಿ ಹೂಳಿನಲ್ಲಿ ಸಿಲುಕಿ ಮುಳುಗಡೆಯಾದ ಶ್ರೀದೇವಿ ಮೀನುಗಾರಿಕಾ ಬೋಟ್

Kumta-ತದಡಿ ಬಂದರಿನಲ್ಲಿ ಬೋಟ್ ಮುಳುಗಡೆ- ನಾಲ್ವರು ಮೀನುಗಾರರ ರಕ್ಷಣೆ-ವಿಡಿಯೋ ನೋಡಿ

Auro wash karwar,uttarakannada
Auro wash karwar,uttarakannada

ವಿಡಿಯೊ ನೋಡಲು ಕೆಳಭಾಗದ ಕೊನೆಗೆ ಹೋಗಿ

ಕಾರವಾರ :-ಉತ್ತರ ಕನ್ನಡ ಜಿಲ್ಲೆಯ ಕುಮಟಾ (kumta)ತಾಲೂಕಿನ ತದಡಿಯ ಅಳಿವೆಯಲ್ಲಿ  ಮೀನುಗಾರಿಕೆಗೆ ತೆರಳುತಿದ್ದ ಬೋಟ್ ಮುಳುಗಡೆಯಾಗಿ ನಾಲ್ವರು ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ತದಡಿಯ ಬಂದರಿನಿಂದ ಮೋಹನ್ ಕಿಮಾನಿ‌ ಎಂಬುವವರಿಗೆ ಸೇರಿದ ಶ್ರೀದೇವಿ ಹೆಸರಿನ ಬೋಟ್ ಮೀನುಗಾರಿಕೆಗೆ ತೆರಳುವಾಗ ತದಡಿ ಅಳಿವೆಯಲ್ಲಿ ಹೂಳಿನಲ್ಲಿ ಸಿಲುಕಿಕೊಂಡು ತಳಭಾಗದಲ್ಲಿ ಡ್ಯಾಮೇಜ್ ಆಗಿದ್ದು,ಬೋಟ್ ಅಳವೆಯಲ್ಲೇ ಮುಳುಗಡೆಯಾಗಿದೆ. ಇದನ್ನೂ ಓದಿ:-Kumta|ಕುಮಟಾ ಗಾಂಜಾ ಸೇವನೆ: 16 ಜನ ಪೊಲೀಸರ ವಶಕ್ಕೆ

Advertisement

ಅದೃಷ್ಟವಶಾತ್ ಸ್ಥಳೀಯ ಮೀನುಗಾರರು ಬೋಟಿನಲ್ಲಿ ಇದ್ದ ನಾಲ್ವರು ಮೀನುಗಾರರನ್ನು ರಕ್ಷಿಸಿದ್ದಾರೆ.ಬೋಟ್ ಮುಳುಗಡೆಯಾಗಿ 15 ಲಕ್ಷಕ್ಕೂ ಹೆಚ್ಚು ನಷ್ಟವಾಗಿದ್ದು ,ಬೋಟ್ ಜೊತೆಗೆ ಬಲೆ ಸೇರಿದಂತೆ ಹಲವು ವಸ್ತುಗಳು ಸಮುದ್ರಪಾಲಾಗಿದೆ. ತದಡಿ ಬಂದರಿನ ಬಳಿ ಹಲವು ವರ್ಷದಿಂದ ಹೂಳು ತುಂಬಿಕೊಂಡಿದ್ದು ,ಆಗಾಗ ಬೋಟುಗಳು ಹಾನಿಯಾಗುವ ಜೊತೆ ಮುಳಗಿ ಹೋಗುತ್ತಿದೆ.ಹೀಗಾಗಿ ಮೀನುಗಾರಿಕಾ ಇಲಾಖೆಯವರು ಹೂಳನ್ನು ತೆಗೆಯುವಂತೆ ಮೀನುಗಾರರು ಆಗ್ರಹಿಸಿದ್ದಾರೆ.

ವಿಡಿಯೋ ನೋಡಿ:-

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement