Court news|ಬ್ಯಾಂಕ್ ಖಾತೆ ಫ್ರೀಜ್ ಮಾಡಲು ಪೊಲೀಸರು ಕೋರ್ಟ್ ಅನುಮತಿ ಪಡೆಯುವುದು ಕಡ್ಡಾಯವಲ್ಲ: ಹೈಕೋರ್ಟ್ ಆದೇಶ.
ಬೆಂಗಳೂರು- ಕ್ರಿಮಿನಲ್ ಪ್ರಕರಣಗಳ ತನಿಖೆಯ ಸಂದರ್ಭದಲ್ಲಿ ಆರೋಪಿಗಳ ಅಥವಾ ಅನುಮಾನಾಸ್ಪದ ಬ್ಯಾಂಕ್ ಖಾತೆಗಳನ್ನು ಜಪ್ತಿ (ಫ್ರೀಜ್) ಮಾಡುವ ಮುನ್ನ ಪೊಲೀಸರು ನ್ಯಾಯಾಲಯದಿಂದ ಪೂರ್ವಾನುಮತಿ ಪಡೆಯುವ ಅಗತ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಇದನ್ನೂ ಓದಿ:-Karwar| ರಾಜ್ಯದಲ್ಲಿ RSS ಕಾರ್ಯಚಟುವಟಿಕೆಗೆ ಕಡಿವಾಣ- ಅಧಿಕಾರ ಶಾಶ್ವತ ಅಲ್ಲ ಎಂದಿದ್ದೇಕೆ ಸಚಿವ ಲಕ್ಷ್ಮಣ್ ಸವದಿ?
ಅಪರಾಧ ಪ್ರಕ್ರಿಯಾ ಸಂಹಿತೆಯ (CrPC) ಸೆಕ್ಷನ್ 102ರ ಅಡಿಯಲ್ಲಿ (ಹಾಗೂ ನೂತನ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ – BNSS ಅಡಿಯಲ್ಲಿ) ತನಿಖಾಧಿಕಾರಿಗಳಿಗೆ ನೀಡಲಾಗಿರುವ ಅಧಿಕಾರಗಳ ಕುರಿತಾದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈ ಮಹತ್ವದ ಆದೇಶ ಹೊರಡಿಸಿದೆ.
ತನಿಖಾಧಿಕಾರಿಯ ಸ್ವತಂತ್ರ ಅಧಿಕಾರ.
ತನಿಖಾ ಹಂತದಲ್ಲಿ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಅಥವಾ ಅನುಮಾನಾಸ್ಪದ ಹಣಕಾಸು ವಹಿವಾಟು ನಡೆದಿರುವ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವ ಅಧಿಕಾರ ತನಿಖಾಧಿಕಾರಿಗೆ ಇದೆ. ಈ ಪ್ರಕ್ರಿಯೆ ನಡೆಸಲು ಪ್ರತಿ ಬಾರಿಯೂ ಮ್ಯಾಜಿಸ್ಟ್ರೇಟ್ ಅಥವಾ ನ್ಯಾಯಾಲಯದ ಪೂರ್ವಾನುಮತಿಯ ಅಗತ್ಯವಿರುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ತನಿಖೆಯು ತಕ್ಷಣದ ಕ್ರಮವನ್ನು ಬಯಸುವುದರಿಂದ, ವಿಳಂಬ ತಪ್ಪಿಸಲು ಕಾನೂನಿನಲ್ಲಿ ಈ ಅಧಿಕಾರ ನೀಡಲಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.ಇದನ್ನೂ ಓದಿ:-Karnataka| ಗುಟ್ಕ,ಪಾನ್ ಮಸಾಲ ಬ್ಯಾನ್ ನಿಷೇಧ ಆದೇಶ ಹಿಂಪಡೆದ ಡಿಕೆ ಶಿವಕುಮಾರ್
ಮ್ಯಾಜಿಸ್ಟ್ರೇಟ್ಗೆ ಮಾಹಿತಿ ನೀಡುವುದು ಕಡ್ಡಾಯ.
ಆದಾಗ್ಯೂ, ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಿದ ನಂತರ ಆ ಕುರಿತಾದ ಸಂಪೂರ್ಣ ವಿವರ ಹಾಗೂ ಕೈಗೊಂಡ ಕ್ರಮದ ಮಾಹಿತಿಯನ್ನು ಸಂಬಂಧಪಟ್ಟ ನ್ಯಾಯಾಲಯಕ್ಕೆ ಅಥವಾ ಮ್ಯಾಜಿಸ್ಟ್ರೇಟ್ಗೆ ನಿಯಮಾನುಸಾರ ತಕ್ಷಣವೇ ವರದಿ ಮಾಡುವುದು (Notify) ಕಡ್ಡಾಯವಾಗಿದೆ ಎಂದು ಹೈಕೋರ್ಟ್ ನೆನಪಿಸಿದೆ.
ಇದನ್ನೂ ಓದಿ:-Court news| ಹೆಚ್ಚು ಓಟರ್ ಐಡಿ ಹೊಂದಿದ ಆರೋಪ- ನಟ ಪ್ರಕಾಶ್ ರಾಜ್ ಗೆ ಜಾಮೀನುರಹಿತ ವಾರೆಂಟ್ ಜಾರಿ
ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವ ಪೊಲೀಸ್ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಲಯ, ತನಿಖಾಧಿಕಾರಿಗಳು ಕಾನೂನಿನ ಚೌಕಟ್ಟಿನೊಳಗೆ ತಮ್ಮ ಅಧಿಕಾರ ಚಲಾಯಿಸಬಹುದೆಂದು ತಿಳಿಸಿ ಅರ್ಜಿ ವಿಚಾರಣೆಯನ್ನು ಇತ್ಯರ್ಥಪಡಿಸಿದೆ.
