BJP MP Vishweshwar Hegde Kageri wants G Parameshwar to become Chief Minister from Congress

“ಆ” ವ್ಯಕ್ತಿಯೇ ಕಾಂಗ್ರೆಸ್ ನಿಂದ ಮುಖ್ಯಮಂತ್ರಿಯಾಗ ಬೇಕು! ಕಾಗೇರಿ ಹೇಳಿದ್ದು ಯಾರಿಗೆ?

172

ಕಾರವಾರ :- ಸಿದ್ಧರಾಮಯ್ಯ (cm siddaramaiya )ಹಾಗೂ ಡಿಕೆಶಿ(DK shivakumar) ನೇತೃತ್ವದ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ,ರಾಜ್ಯದ ಜನರಲ್ಲಿ ಭ್ರಮನಿರಸನ ಉಂಟು ಮಾಡಿದೆ.

ಯೋಗ್ಯರಾಗಿರುವ ಪರಮೇಶ್ವರ್ ಅವರು ಅಧಿಕಾರಕ್ಕೆ ಬರಲಿ ಎಂದು ಬಿಜೆಪಿ ಉತ್ತರ ಕನ್ನಡ ಜಿಲ್ಲೆಯ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದ್ದಾರೆ. ಅವರು ಪೆಟ್ರೋಲ್ ದರ ಏರಿಕೆ ವಿರುದ್ಧ ಶಿರಸಿ ನಗರದ ಅಂಚೆ ಕಚೇರಿ ಬಳಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.

ಇದನ್ನೂ ಓದಿ:-ಯಡಿಯೂರಪ್ಪ ವಿರುದ್ಧ ವಾರೆಂಟ್| ಸಂಸದ ರಾಘವೇಂದ್ರ,ವಿಶ್ವೇಶ್ವರ ಹೆಗಡೆ ಕಾಗೇರಿ FIRST REACTION

ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಜನರು ಬಿಜೆಪಿಗೆ ಹೆಚ್ಚು ಸ್ಥಾನಗಳನ್ನು ನೀಡಿದ್ದಾರೆ. ಈ ಮೂಲಕ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.ಸಿದ್ಧರಾಮಯ್ಯ ಹಾಗೂ ಡಿಕೆಶಿ ಆಡಳಿತ ನಡೆಸಲು ಅಸಮರ್ಥರಾಗಿದ್ದಾರೆ
ಭ್ರಷ್ಟಾಚಾರ ಹೆಚ್ಚಾಗಿದ್ದು, ಅಲ್ಪಸಂಖ್ಯಾತರ ಓಲೈಕೆಗೆ, ಮತಗಳಿಕೆಗೆ ನಿಮ್ಮದೇ ರಾಜಕಾರಣ (politics )ಮಾಡುತ್ತಿದ್ದೀರಿ.

ಇದನ್ನೂ ಓದಿ:-ರಾಜ್ಯದಲ್ಲಿ ಮಳೆ ಆರ್ಭಟ ಇಳಿಗೆ| ಮಹತ್ವದ ಮಾಹಿತಿ ಹೊರಹಾಕಿದ ಹವಾಮಾನ ಇಲಾಖೆ.

ಕಾನೂನು(laws) ಸುವ್ಯವಸ್ಥೆ ಹದಗೆಟ್ಟಿದೆ, ಆಡಳಿತದ ವೈಫಲ್ಯ ಎದ್ದು ಕಾಣುತ್ತಿದೆ.ಸಿಎಂ ಸಿದ್ಧರಾಮಯ್ಯನವರು ರಾಜೀನಾಮೆ ನೀಡಲಿ,ಯೋಗ್ಯರಾಗಿರುವ ಪರಮೇಶ್ವರ್ ಅವರು ಅಧಿಕಾರಕ್ಕೆ ಬರಲಿ, ಅವರು ಹೇಗೆ ಆಡಳಿತ ಮಾಡ್ತಾರೆ ಅಂತಾ ನೋಡೋಣ ಎಂದ ಅವರು ಜನರು ಕಾಂಗ್ರೆಸ್‌ಗೆ 5 ವರ್ಷಗಳ ಅಧಿಕಾರ ನೀಡಿದೆಯಾದ್ರೂ, ಕಾಂಗ್ರೆಸ್ ಸರಕಾರವೇ ರಾಜೀನಾಮೆ ನೀಡುವ ಪರಿಸ್ಥಿತಿಯಿದೆ.ತಕ್ಷಣ ಸಿದ್ಧರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಅವರು ರಾಜೀನಾಮೆ ಕೊಡಬೇಕೆಂದು ಆಗ್ರಹಿಸ್ತೇನೆ ಎಂದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!