


ಕಾರವಾರ :- ಗಣಪತಿ ವಿಸರ್ಜನೆಗೆ ಆಡಳಿತದಿಂದ ಮೀಸಲಿಟ್ಟ ಕೆರೆಯಲ್ಲಿ ಬೃಹದಾಕಾರದ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು ಇದೀಗ ಗಣಪತಿ ವಿಸರ್ಜನೆಗೆ ಭಯ ಪಡುವಂತಹ ಸ್ಥಿತಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ (yallapur)ನಗರದ ಜೋಡಿ ಕೆರೆಯಲ್ಲಿ ನಡೆದಿದೆ.

ಜೋಡಿ ಕೆರೆಯಲ್ಲಿ ಗಣಪತಿ ವಿಸರ್ಜನೆಗಾಗಿ ಸ್ಥಳ ನಿಗದಿ ಮಾಡಲಾಗಿದೆ. ಪ್ರತಿ ವರ್ಷ ಯಲ್ಲಾಪುರ ನಗರದ ಗಣಪತಿಯನ್ನು ಇದೇ ಕೆರೆಯಲ್ಲಿ ಬಿಡಲಾಗುತ್ತಿದೆ. ಆದರೇ ಕೆಲವು ದಿನದಿಂದ ಈ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು ,ಕೆರೆಯಲ್ಲಿ ಓಡಾಟ ನಡೆಸುತ್ತಿದೆ. ಆಗಾಗ ದಂಡೆಯ ಮೇಲೆ ಬಂದು ನಿಲ್ಲುವ ಮೊಸಳೆಯನ್ನು ನೋಡಿ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ:-Yallapur | ರಾಜ್ಯಮಟ್ಟದ ವನ್ಯಜೀವಿ ಹಂಟರ್ ಗಳ ಬಂಧನ- ಲಕ್ಷಾಂತರ ಬೆಲೆಬಾಳುವ ವನ್ಯಜೀವಿ ಉತ್ಪನ್ನ ವಶ
ಇದೀಗ ಅರಣ್ಯ ಇಲಾಖೆ ತದಡಿಯ ವನ್ಯಜೀವಿ ರಕ್ಷಕ ಅಶೋಕ್ ನಾಯ್ಕ ನೇತ್ರತ್ವದಲ್ಲಿ ಮೊಸಳೆ ಹಿಡಿಯುವ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ.
ಗಣಪತಿ ವಿಸರ್ಜನೆಗೆ ಬೇರೆ ವ್ಯವಸ್ಥೆಗೆ ಆಗ್ರಹ
ಇನ್ನು ಜೋಡಿ ಕೆರೆಯಲ್ಲಿ ಮೊಸಳೆ ಇರುವುದರಿಂದ ಗಣಪತಿ ವಿಸರ್ಜನೆಗೆ ಬೇರೆ ಕೆರೆಯನ್ನು ಗುರುತುಮಾಡಿ ವ್ಯವಸ್ತೆ ಕಲ್ಪಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.ಇನ್ನು ಸಧ್ಯ ಮೊಸಳೆ ಹಿಡಿಯಲು ಕಾರ್ಯಾಚರಣೆ ನಡೆಸಲಾಗುತಿದ್ದು ಮೊಸಳೆ ಗಾಗಿ ಹುಡುಕಾಟ ಮುಂದುವರೆದಿದೆ.
