Karwar | ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಭರ್ಜರಿ ಕಪ್ಪಾ! MSIL ನಲ್ಲಿ ದರಕ್ಕಿಂತ ದುಬಾರಿಯಾದ ಮದ್ಯ! 

ಕಾರವಾರದ MSIL ಮದ್ಯದಂಗಡಿಯಲ್ಲಿ MRPಗಿಂತ ಹೆಚ್ಚುವರಿ ದರಕ್ಕೆ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕಾರವಾರದ MSIL ಮದ್ಯದಂಗಡಿಯಲ್ಲಿ MRPಗಿಂತ ಹೆಚ್ಚುವರಿ ದರಕ್ಕೆ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ

Karwar Shetty Eye Hospital

Ad karwar auto
ಕಾರವಾರ ದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿಮ್ಮ ಬಟ್ಟೆಗಳಿಗೆ ಹೊಳಪು ನೀಡುವ ಆರೋ ಡ್ರೈಕ್ಲೀನ್ -ಒಮ್ನೆ ಭೇಟಿ ನೀಡಿ

Karwar/ಕಾರವಾರ :- ಗಣೇಶ ಚತುರ್ಥಿ ಬರುತಿದ್ದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮದ್ಯ ಪ್ರಿಯರ ನೇವೇಧ್ಯಕ್ಕೂ ಬಾರಿ ಡಿಮೆಂಡ್ ಬಂದಿದೆ.ಹೀಗಾಗಿ ಮದ್ಯ ಪ್ರಿಯರು ಹಬ್ಬಕ್ಕಾಗಿ MSIL ನಲ್ಲಿ ಭಾರೀ ಖರೀದಿ ನಡೆಸುತಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಗೋವಾ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವುದರಿಂದ ಗೋವಾ ಮದ್ಯಗಳು ಸಹ ಅಕ್ರಮವಾಗಿ ಜಿಲ್ಲೆಯಿಂದ ಇತರೆ ಭಾಗಕ್ಕೆ ಅಬಕಾರಿ ಅಧಿಕಾರಿಗಳ ನೆರಳಿನಲ್ಲಿ ಸಾಗಾಟ ಆಗೋದು ಮಾಮೂಲಿನ ಕತೆ .ಇದಕ್ಕೆ ಯಾರೂ ಕೂಡ ಲಂಗು ಲಗಾಮು ಹಾಕುವ ಗಂಡಸ್ತನದ ಅಧಿಕಾರಿಗಳು ಈವರೆಗೂ ಬಂದಿಲ್ಲ. ಹೀಗಾಗಿ ಕರ್ನಾಟಕ ರಾಜ್ಯದ ಮದ್ಯಗಳಿಗಿಂತ ಗೋವಾ ರಾಜ್ಯದ ಮದ್ಯಗಳು ಕಾರವಾರದ ಓಣಿಯಲ್ಲಿ ಭರ್ಜರಿ ಬಿಕರಿಯಾಗುತ್ತದೆ. ಇದನ್ನೂ ಓದಿ-Navy |ಕದಂಬ ನೌಕಾನೆಲೆಯಲ್ಲಿ ಸದ್ದು ಮಾಡದ ಅಪರಾಧಗಳು| ಬೆಚ್ಚಿ ಬೀಳೋ ರಹಸ್ಯ!?

Advertisement

ಆದರೇ ಇದೀಗ ಹಬ್ಬದ ಬರಾಟೆಯಲ್ಲಿ ಜೋರಾಗಿದ್ದು ಗೋವಾ ಮದ್ಯದ ಜೊತೆ ಕರ್ನಾಟಕ ಮದ್ಯವೂ ಹೆಚ್ಚು ಬಿಕರಿ ಕಾಣುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡ MSIL ಮದ್ಯದಂಗಡಿಗಳು ಪ್ರತಿ ಮದ್ಯದ ಬಾಟಲ್ ನಲ್ಲಿ ₹10 ರಿಂದ ₹20 ರೂ ಹೆಚ್ಚುವರಿ ಹಣ ಗ್ರಾಹಕರಿಂದ ಪಡೆಯುತ್ತಿದೆ. ಬಿಲ್ ಕೇಳಿದ್ರೆ ಕೊಡದ MSIL ಸಿಬ್ಬಂದಿ ಸರ್ಕಾರದ ಸಂಬಳ ,ಬಾಡಿಗೆ ಪಡೆಯುತಿದ್ದರು ಹೆಚ್ಚುವರಿ ದರ ವಿಧಿಸಿ ಗ್ರಾಹಕರ ಜೇಬಿಗೆ ಕತ್ತರಿ ಹಾಕುತಿದ್ದಾರೆ.

ಯಾಕೆ ಹೆಚ್ಚು ಎಂದರೇ ಅಬಕಾರಿ ಅಧಿಕಾರಿಗಳಿಗೂ ತಿಂಗಳ ಕಪ್ಪಾ ಕೊಡಬೇಕು ಎಂಬುದು ಮರು ಉತ್ತರ. ಕಾರವಾರ ಎಸ್.ಬಿ.ಐ ಬ್ಯಾಂಕ್ ಎದುರು ಇರುವ MSIL ಮದ್ಯದ ಮಳಿಗೆಯಲ್ಲಿ ನಿಯಮದಂತೆ ನಿಗದಿ ದರ ದಲ್ಲಿ ಮಾರಾಟ ಮಾಡದೇ ಹೆಚ್ಚುವರಿ ಹಣ ಪಡೆಯುತ್ತಿರುವ ಬಗ್ಗೆ ಗ್ರಾಹಕರು ಆರೋಪ ಮಾಡಿದ್ದಾರೆ. ಸ್ವಾಮಿ ಬಿಯರ್ ತೆಗೆದುಕೊಂಡ್ರೆ ಹೆಚ್ಚುವರಿ ₹10 ಕೊಡಬೇಕು , ಕೋಲ್ಡ್ ಇದ್ರೆ ಪ್ರಿಜ್ ನಲ್ಲಿ ಇಟ್ಟಿದ್ದಾರೆ ಎಂದು ಕೊಡಬಹುದು ಆದರೇ ಕೋಲ್ಡ್ ಇಲ್ಲದಿದ್ರೂ ಹೆಚ್ಚುವರಿ ಹಣ ಪಡಿತಾರೆ ಅಂತಾರೆ ದೂರುದಾರರು.

ಅಬಕಾರಿ ಇಲಾಖೆ ಕಪ್ಪ -ಅಕ್ರಮ ತಡೆಯಲು ಪೊಲೀಸ್ ಚಕ್ ಪೋಸ್ಟ್ ಪ್ರತ್ತೇಕ ಮಾಡಿದ್ರೂ ನಿಲ್ಲದ ಅಕ್ರಮ.

ಇದನ್ನೂ ಓದಿ:-Karnataka | ರಾಜ್ಯದ ಪ್ರಮುಖ ವಿದ್ಯಮಾನಗಳ ಫಟಾಫಟ್ ಸುದ್ದಿಗಳು-ವಿಡಿಯೋ ನೋಡಿ

ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ ಈಗಿರುವ ಎಸ್.ಪಿ ದೀಪನ್ ಪ್ರಾಮಾಣಿಕರು. ತಿಂಗಳಿಗೆ ಠಾಣೆಗಳಿಂದ ವಸೂಲಿಯಾಗಲಿ, ಗಡಿಭಾಗದ ಅಕ್ರಮ ಚಟುವಟಿಕೆಯಿಂದ ಒಂದಿಷ್ಟೂ ಹಣ ಪಡೆಯದ ಪ್ರಾಮಾಣಿಕರು. ಕಳೆದ ಒಂದೂವರೆ ವರ್ಷದಿಂದ ಪ್ರಾಮಾಣಿಕತೆ ಕಾಯ್ದುಕೊಂಡು ಬಂದಿದ್ದಾರೆ. ಆದರೇ ಮಾಜಾಳಿಯ ಗಡಿಯಲ್ಲಿ ಅಬಕಾರಿ ಇಲಾಖೆ ಮಾಡುವ ಬ್ರಷ್ಟಾಚಾರಕ್ಕೆ ತಮ್ಮ ಇಲಾಖೆ ಹೊಣೆ ಹೊರಬೇಕು ಎಂದು ಪೊಲೀಸ್ ಇಲಾಖೆ ಚಕ್ ಪೋಸ್ಟ್ ಅನ್ಬು ಪ್ರತ್ತೇಕವಾಗಿ ಮಾಡಲಾಗಿದೆ. ಆದರೇ ಉಪಯೋಗ ಮಾತ್ರ ಶೂನ್ಯ ಎನ್ನುವಂತಾಗಿದೆ. ಅಬಕಾರಿ ಇಲಾಖೆ ಪ್ರತಿ ವಾಹನ ತಪಾಸಣೆ ಮಾಡಿದರೂ ಗೋವಾ ಮದ್ಯ ಮಾತ್ರ ಗೋವಾದ ಗಡಿ ದಾಟಿ ಕರ್ನಾಟಕಕ್ಕೆ ಬರುತ್ತಿದೆ.ಅದೂ ಪ್ರತ್ತೇಕ ಎರಡು ಚಕ್ ಪೋಸ್ಟ್ ಇದ್ದರೂ ! ಅದು ಹೋಗಲಿ ಮಧ್ಯರಾತ್ರಿ ವೇಳೆ ಕಾರವಾರಕ್ಕೆ ರಾಜಾರೋಷವಾಗಿ ಅಬಕಾರಿ ಇಲಾಖೆ ಕೃಪಾ ಕಟಾಕ್ಷದಿಂದ ಗೋವಾ ಮದ್ಯಗಳು ಕಾರವಾರಕ್ಕೆ ಬರುತ್ತಿದೆ. ಕರ್ನಾಟಕ ದರದಲ್ಲಿ ಗೋವಾ ಮದ್ಯ ಮಾರಾಟವಾದರೇ , ಕರ್ನಾಟಕದ ಮದ್ಯ MRP ಬೆಲೆಗಿಂತ ಹೆಚ್ಚು ಮಾರಾಟ ಆಗುತ್ತಿದೆ. ಯಾರಾದ್ರೂ ಅಬಕಾರಿ ಇಲಾಖೆಗೆ ಮಾಹಿತಿ ನೀಡಿದ್ರೆ ಅವರ ಹೆಸರು ಸಮೇತ ಅಕ್ರಮ ಕೋರರಿಗೆ ಮಾಹಿತಿ ನೀಡುವ ಇಲಾಖೆ ದೂರು ಕೊಟ್ಟವನ್ನ ಡಾಬರ್ ಮನ್ ನಾಯಿಯ ಬಾಲ ಕಟ್ ಮಾಡುವಂತೆ ಮಾಡುತ್ತದೆ.

ಒಂದು ಬಾಟಲಿ ತರುವ ಪ್ರವಾಸಿಗರಿಗೆ ಇನ್ನೂರು,ಮುನ್ನೂರು ಕಸಿದುಕೊಂಡು ಬಿಡುವ ಅಬಕಾರಿ ಇಲಾಖೆ ಅಧಿಕಾರಿಗಳು ,ದೊಡ್ಡ ಮಟ್ಟದ ಗೋವಾ ಮದ್ಯಗಳಿಗೆ ಎಷ್ಟು ಹಣ ಪಡೆಯುತ್ತಾರೆ ಎಂಬುದನ್ನ ಊಹಿಸಲೂ ಸಾಧ್ಯವಿಲ್ಲ ಎಂಬುದು ಸ್ಥಳೀಯರ ದೂರು.

ಇತ್ತೀಚಿನ ದಿನದಲ್ಲಿ ಅಬಕಾರಿ ಇಲಾಖೆ ಅಕ್ರಮ ಮದ್ಯವನ್ನು ವಶಕ್ಕೆ ಪಡೆಯುವ ಹಾಗೂ ದಾಳಿ ನಡೆಸುವುದನ್ನೇ ಮರೆತಿದ್ದು ತಿಂಗಳ ಕಮಾಯಿಗೆ ಬಾಯಿ ಬಿಟ್ಟು ಕೂರುತಿದ್ದಾರೆ.ಗೋವಾ ಗಡಿ ಅಬಕಾರಿ ಇಲಾಖೆಗೆ ಕಾಮದೇನು ಎಂಬ ರೀತಿ ಆಗಿದ್ದು ದುರಂತ.

ನಿಯಮ ಪಾಲಿಸದ ಬಾರ್ & ರೆಸ್ಟೋರೆಂಟ್ !

ಇನ್ನು ಕಾರವಾರದ ಮಟ್ಟಿಗೆ ಹೇಳುವುದಾದರೇ ಪ್ರಸಿದ್ದಿ ಪಡೆದ ಹೋಟಲ್ ,ಬಾರ್ &ರೆಸ್ಟೋರೆಂಟ್ ಗಳು ಸಹ ಹಗಲು ದರೋಡೆಗೆ ಇಳಿದಿದೆ. ಇಲ್ಲಿ ಸಹ ಮದ್ಯಕ್ಕೆ ಹೆಚ್ಚಿನ ದರ ಎನ್ನುವುದಕ್ಕಿಂತ ದುಪ್ಪಟ್ಟು ದರ ವಿಧಿಸಿ ದೋಚುತ್ತಿದೆ.

ಒಂದು ಕರೋನಾ ಬಿಯರ್ ಗೆ MRP ದರ 120 ಇದೆ. ಆದರೇ ಬಾರ್ವನಲ್ಲಿ ₹300 ದರ ವಿಧಿಸಿ ಬಿಲ್ ಸಹ ₹300 ಎಂದೇ ನೀಡುತ್ತಾರೆ. ಕನಿಷ್ಟ 180 ಲಾಭ ಪಡೆಯುತ್ತಾರೆ ಒಂದು ಬಾಟಲ್ ಮೇಲೆ! ಇದರ ಬಗ್ಗೆ ಗ್ರಾಹರು ದೂರು ನೀಡದಿದ್ದರೂ ಬಾರ್ ನಲ್ಲಿ ಗಲಾಟೆ ಮಾಡಿದ ಘಟನೆಗಳಿವೆ.

ಇನ್ನು ಈಬಗ್ಗೆ ತಪಾಸಣೆ ಮಾಡಬೇಕಾದ ಅಬಕಾರಿ ಇಲಾಖೆ ,ಜಿಲ್ಲಾಡಳಿತದ ಅಸಿಸ್ಟೆಂಟ್ ಕಮಿಷಿನರ್ ಗಳು ಮಾತ್ರ ತಪಾಸಣೆ ಮಾಡುವುದಿರಲಿ ,ದೂರು ನೀಡಿದ್ರೂ ಕಣ್ಣು ಮುಚ್ಚಿ ಕುಳಿತುಕೊಳ್ಳುತಿದ್ದಾರೆ.

ಇದನ್ನೂ ಓದಿ:-Karwar |ಪದವಿದರರು ಕುಲಗೆಟ್ಟ ಮತ ಹಾಕದಂತೆ ಮಾಜಿ ಎಮ್.ಎಲ್.ಸಿ ಮೋಹನ್ ಲಿಂಬಿಕಾಯಿ ಮನವಿ

ಕೆಲವರು ಈ ಸುದ್ದಿ ಓದಿದವರು ಏನಪ್ಪಾ ಮದ್ಯದ ದರ ಹೆಚ್ಚು ಮಾಡಿದ್ದಕ್ಕೆ ಈರೀತಿ ಸುದ್ದಿ ಮಾಡಿದ್ದಾನೆ ಎಂದು ಬಯ್ದು ಕೊಳ್ಳಬಹುದು.ಆದರೇ ಇದರ ಹಿಂದೆ ಬ್ರಷ್ಟಾಚಾರದ ದೊಡ್ಡ ಪಾಪ ಕೂಪವಿದೆ. ಗ್ರಾಹಕರ ಹಕ್ಕು ಕಾಪಾಡಬೇಕಾದವರೇ ಮಾಮೂಲಿ ವಸೂಲಿಗೆ ಬಿದ್ದು ಅಕ್ರಮ ಚಟುವಟಿಕೆಗೆ ಹೆಗಲು ಕೊಡುತಿದ್ದಾರೆ. ತಪ್ಪು ಕೆಟ್ಟ ವಿಷಯದಲ್ಲಿ ಇರಲಿ ಒಳ್ಳೆಯ ವಿಷಯವಿರಲಿ ಅದು ತಪ್ಪು ತಪ್ಪೆ! ಗ್ರಾಹಕರು ಜಾಗೃತವಾಗದಿದ್ದರೇ ,ಪ್ರಶ್ನೆ ಮಾಡದಿದ್ದರೇ ಯಾವ ಅಂಕುಶವೂ ಈರೀತಿಯ ವಿಷಯದಲ್ಲಿ ಬದಲಾವಣೆ ಆಗುವುದಿಲ್ಲವಷ್ಟೆ!

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement