
Karwar |ಪದವಿದರರು ಕುಲಗೆಟ್ಟ ಮತ ಹಾಕದಂತೆ ಮಾಜಿ ಎಮ್.ಎಲ್.ಸಿ ಮೋಹನ್ ಲಿಂಬಿಕಾಯಿ ಮನವಿ- ವಿಡಿಯೋ ನೋಡಿ
ಕಾರವಾರ (08ಸೆಪ್ಟೆಂಬರ್ 2026):- ಪದವಿದರ ಕ್ಷೇತ್ರದ 2020ರ ಚುನಾವಣೆಯಲ್ಲಿ 51 ಸಾವಿರಕ್ಕೂ ಹೆಚ್ಚು ಮತದಾನವಾಗಿದ್ದು, 8 ಸಾವಿರಕ್ಕೂ ಅಧಿಕ ಮತಗಳು ಅಸಿಂಧುವಾಗಿದ್ದವು. ಪದವಿದರ ಕ್ಷೇತ್ರದ ಮತದಾರರು ಮತ ಹಾಕುವಾಗ ಗಮನ ಹರಿಸಬೇಕು ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಚಿಹ್ನೆ ಇರುವುದಿಲ್ಲ. ಅಭ್ಯರ್ಥಿಯ ಭಾವಚಿತ್ರದ ಎದುರು ಕೇವಲ ‘1’ ಎಂದು ಅಂಕಿ ನಮೂದಿಸಬೇಕು. ಹಿಂದೆ ಶೂನ್ಯ, ಟಿಕ್, ಇಂಟು ಚಿಹ್ನೆ, ಹೆಬ್ಬೆಟ್ಟು ಗುರುತು ಹಾಕಿ ಅವು ಕುಲಗೆಟ್ಟ ಮತಗಳಾಗಿ ಅಸಿಂಧುವಾಗಿತ್ತು. ಆದ್ದರಿಂದ ಮತದಾರರು ಎಚ್ಚರಿಕೆ ವಹಿಸಬೇಕು ಕುಲಗೆಟ್ಟ ಮತ ಹಾಕುವುದನ್ನ ತಪ್ಪಿಸಬೇಕು ಎಂದು ಕಾಂಗ್ರೆಸ್ ಪಕ್ಷದ ಪದವಿದರ ಕ್ಷೇತ್ರದ ಅಧಿಕೃತ ಅಭ್ಯರ್ಥಿ, ಮಾಜಿ ಎಂಎಲ್‌ಸಿ ಮೋಹನ್ ಲಿಂಬಿಕಾಯಿ ಹೇಳಿದರು.
ಕಾರವಾರದಲ್ಲಿ (Karwar) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರುಅತಿಥಿ ಶಿಕ್ಷಕರ ಗೌರವಧನ ಹೆಚ್ಚಳ, ಸರ್ಕಾರಿ ಹಾಗೂ ಅನುದಾನಿತ ನೌಕರರ ಒಪಿಎಸ್ ಜಾರಿ ಸೇರಿದಂತೆ ಶಿಕ್ಷಕರು ಮತ್ತು ನೌಕರರ ಪ್ರಮುಖ ಬೇಡಿಕೆಗಳಿಗೆ ಸರ್ಕಾರದ ಮಟ್ಟದಲ್ಲಿ ಸ್ಪಂದಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಹೇಳಿದರು.
ಮುಂಬರುವ ವಿಧಾನ ಪರಿಷತ್ ಪದವೀಧರ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್‌ನಿಂದ ಆರು ತಿಂಗಳ ಮುಂಚಿತವಾಗಿಯೇ ಅಭ್ಯರ್ಥಿಯಾಗಿ ಘೋಷಣೆಯಾಗಿದ್ದು, ಶಾಸಕ ಸತೀಶ್ ಸೈಲ್ ಅವರ ಮಾರ್ಗದರ್ಶನದಲ್ಲಿ ಕಾರವಾರ-ಅಂಕೋಲಾ ಸೇರಿದಂತೆ ಕ್ಷೇತ್ರದಲ್ಲಿ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಪ್ರಚಾರ ನಡೆಸಲಾಗುತ್ತಿದೆ ಎಂದರು. ಇದನ್ನೂ ಓದಿ:-Karwar |No ಡಿಜೆ.only ಮ್ಯೂಟ್ – ಜಿಲ್ಲಾ ಶಾಂತಿಪಾಲನಾ ಸಭೆಯಲ್ಲಿ ಆಗಿದ್ದೇನು?ವಿಡಿಯೋ ನೋಡಿ.
ಕಾರವಾರ, ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳ 34 ತಾಲ್ಲೂಕುಗಳ 88,887 ಪದವೀಧರ ಮತದಾರರನ್ನು ಒಳಗೊಂಡ ಕ್ಷೇತ್ರದಲ್ಲಿ 24 ವಿಧಾನಸಭಾ ಕ್ಷೇತ್ರಗಳಿದ್ದು, 17 ಕಾಂಗ್ರೆಸ್ ಶಾಸಕರ ಜತೆಗೆ ಯಲ್ಲಾಪುರದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಅವರ ಬೆಂಬಲವೂ ಇದೆ. ಹೀಗಾಗಿ 18 ಶಾಸಕರ ಬಲದೊಂದಿಗೆ ಕಾಂಗ್ರೆಸ್ ಚುನಾವಣೆಗೆ ಸಿದ್ಧವಾಗಿದ್ದು, ಗೆಲುವಿನ ವಿಶ್ವಾಸವಿದೆ ಎಂದರು.
ಪ್ರೌಢಶಾಲೆಗಳ ಅತಿಥಿ ಶಿಕ್ಷಕರ 14 ಸಾವಿರ ರೂ. ಗೌರವಧನ ಹೆಚ್ಚಳಕ್ಕೆ ಸರ್ಕಾರದ ಗಮನ ಸೆಳೆಯಲಾಗುವುದು. ಒಪಿಎಸ್-ಎನ್‌ಪಿಎಸ್ ಗೊಂದಲ ನಿವಾರಣೆಗೆ ತಜ್ಞರ ಸಮಿತಿ ರಚಿಸಲಾಗಿದ್ದು, ತಾಂತ್ರಿಕ ಸಮಸ್ಯೆ ಬಗೆಹರಿಸಿ ಒಪಿಎಸ್ ಜಾರಿಗೆ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಡಿಸಿಎಂ ಜಿ. ಪರಮೇಶ್ವರ್ ರವರು ಭರವಸೆ ನೀಡಿದ್ದಾರೆ ಎಂದರು.
ಇದನ್ನೂ ಓದಿ:-Karwar| ಉಪವಿಭಾಗದ ಸಹಾಯಕ ಆಯುಕ್ತರಾಗಿ ಐಎಎಸ್ ಅಧಿಕಾರಿ ರಮ್ಯಾ ಆರ್. ನೇಮಕ
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ್ ಕಲ್ಗುಟ್ಕರ್, ಗ್ಯಾರಂಟಿ ಸಮಿತಿ ಅಧ್ಯಕ್ಷ ರಾಜೇಂದ್ರ ನಾಯ್ಕ, ಕಾಂಗ್ರೆಸ್ ವಕ್ತಾರ ಶಂಭು ಶೆಟ್ಟಿ, ತಾಲೂಕು ಅಧ್ಯಕ್ಷ ದಿಲೀಪ್ ರಾಣೆ, ಪ್ರಚಾರ ಸಮಿತಿ ಅಧ್ಯಕ್ಷ ಜಿ.ಪಿ. ನಾಯಕ, ನಿವೃತ್ತ ಪ್ರಾಂಶುಪಾಲ ಲಿಂಗರಾಜ್ ಅಂಗಡಿ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಬಾಬು ಶೇಖ್, ಉದಯ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.
