ಕಾರವಾರ ಉಪವಿಭಾಗದ ಸಹಾಯಕ ಆಯುಕ್ತರಾಗಿ ಐಎಎಸ್ ಅಧಿಕಾರಿ ರಮ್ಯಾ ಆರ್. ನೇಮಕ

ಕಾರವಾರ: ಕರ್ನಾಟಕ ಸರ್ಕಾರವು 2024ನೇ ಬ್ಯಾಚ್‌ನ ಐಎಎಸ್ ಅಧಿಕಾರಿಗಳಿಗೆ ವಿವಿಧ ಉಪವಿಭಾಗಗಳಲ್ಲಿ ಸಹಾಯಕ ಆಯುಕ್ತರ ಹುದ್ದೆಗೆ ನೇಮಕ ಮಾಡಿ ಆದೇಶ ಹೊರಡಿಸಿದೆ. ಈ ಆದೇಶದಂತೆ ರಮ್ಯಾ ಆರ್., ಐಎಎಸ್ (KN: 2024) ಅವರನ್ನು ಕಾರವಾರ ಉಪವಿಭಾಗದ ಸಹಾಯಕ ಆಯುಕ್ತರಾಗಿ ನೇಮಕ ಮಾಡಲಾಗಿದೆ.
ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಈ ವರ್ಗಾವಣೆ ಹಾಗೂ ನೇಮಕಾತಿ ಆದೇಶವು ತಕ್ಷಣದಿಂದ ಜಾರಿಗೆ ಬರಲಿದೆ ಮತ್ತು ಮುಂದಿನ ಆದೇಶದವರೆಗೆ ಜಾರಿಯಲ್ಲಿರಲಿದೆ.
ಶಲಾಂ ಹುಸೇನ್ ವರ್ಗಾವಣೆ
ಕಾರವಾರ (Karwar) ಉಪವಿಭಾಗದ ಸಹಾಯಕ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಲಾಂ ಹುಸೇನ್, ಕೆಎಎಸ್ ಅವರನ್ನು ವರ್ಗಾವಣೆ ಮಾಡಿ, ಅವರ ಸ್ಥಾನಕ್ಕೆ ರಮ್ಯಾ ಆರ್. ಅವರನ್ನು ನೇಮಕ ಮಾಡಲಾಗಿದೆ.
ಇತರೆ ಐಎಎಸ್ ಅಧಿಕಾರಿಗಳಿಗೂ ನೇಮಕಾತಿ 2024ನೇ ಬ್ಯಾಚ್‌ನ ಐಎಎಸ್ (IAS)ಅಧಿಕಾರಿಗಳಿಗೆ ವಿವಿಧ ಜಿಲ್ಲೆಗಳ ಉಪವಿಭಾಗಗಳಲ್ಲಿ ಸಹಾಯಕ ಆಯುಕ್ತರ ಹುದ್ದೆಗೆ ನೇಮಕ ಮಾಡಲಾಗಿದೆ.
ಅದರಂತೆ:
- ಪುನ್ರಾಜ್ ಸಿಂಗ್ ಸೋಲಂಕಿ – ಚಿಕ್ಕಮಗಳೂರು ಉಪವಿಭಾಗದ ಸಹಾಯಕ ಆಯುಕ್ತರು
- ರಿತಿಕಾ ವರ್ಮಾ – ಕಲಬುರಗಿ ಉಪವಿಭಾಗದ ಸಹಾಯಕ ಆಯುಕ್ತರು
- ಜುಫಿಶಾನ್ ಹಕ್ – ವಿಜಯಪುರ ಉಪವಿಭಾಗದ ಸಹಾಯಕ ಆಯುಕ್ತರು
- ಅಭಿನವ್ ಜೈನ್ – ಬೀದರ್ ಉಪವಿಭಾಗದ ಸಹಾಯಕ ಆಯುಕ್ತರು
- ಖೋಡೆ ಸಮೀರ್ ಪ್ರಕಾಶ್ – ಸವಣೂರು ಉಪವಿಭಾಗದ ಸಹಾಯಕ ಆಯುಕ್ತರು
- ರಮ್ಯಾ ಆರ್. – ಕಾರವಾರ ಉಪವಿಭಾಗದ ಸಹಾಯಕ ಆಯುಕ್ತರು
- ನಾಗೇಂದ್ರ ಬಾಬು ಕುಮಾರ್ – ಲಿಂಗಸುಗೂರು ಉಪವಿಭಾಗದ ಸಹಾಯಕ ಆಯುಕ್ತರು.
ಆದೇಶ ಪ್ರತಿ.
