Yallapur | ರಾಜ್ಯಮಟ್ಟದ ವನ್ಯಜೀವಿ ಹಂಟರ್ ಗಳ ಬಂಧನ- ಲಕ್ಷಾಂತರ ಬೆಲೆಬಾಳುವ ವನ್ಯಜೀವಿ ಉತ್ಪನ್ನ ವಶ

ಯಲ್ಲಾಪುರದಲ್ಲಿ ಅಕ್ರಮ ವನ್ಯಜೀವಿ ಉತ್ಪನ್ನ ಸಾಗಾಟ ಪ್ರಕರಣದಲ್ಲಿ ವಶಪಡಿಸಿಕೊಂಡ ಪ್ಯಾಂಗೋಲಿನ್ ಚಿಪ್ಪು, ಹುಲಿ-ಚಿರತೆ ಉಗುರುಗಳು, ಹಲ್ಲುಗಳು ಹಾಗೂ ಕಾಡೆಮ್ಮೆ ಕೊಂಬುಗಳು. ಯಲ್ಲಾಪುರದಲ್ಲಿ ಅಕ್ರಮ ವನ್ಯಜೀವಿ ಉತ್ಪನ್ನ ಸಾಗಾಟ ಪ್ರಕರಣದಲ್ಲಿ ವಶಪಡಿಸಿಕೊಂಡ ಪ್ಯಾಂಗೋಲಿನ್ ಚಿಪ್ಪು, ಹುಲಿ-ಚಿರತೆ ಉಗುರುಗಳು, ಹಲ್ಲುಗಳು ಹಾಗೂ ಕಾಡೆಮ್ಮೆ ಕೊಂಬುಗಳು.
ಯಲ್ಲಾಪುರದಲ್ಲಿ ಅಕ್ರಮ ವನ್ಯಜೀವಿ ಉತ್ಪನ್ನ ಸಾಗಾಟ ಪ್ರಕರಣದಲ್ಲಿ ವಶಪಡಿಸಿಕೊಂಡ ಪ್ಯಾಂಗೋಲಿನ್ ಚಿಪ್ಪು, ಹುಲಿ-ಚಿರತೆ ಉಗುರುಗಳು, ಹಲ್ಲುಗಳು ಹಾಗೂ ಕಾಡೆಮ್ಮೆ ಕೊಂಬುಗಳು.

ಕಾರವಾರದ ಗ್ರಾಹಕರಿಗೆ ಭರ್ಜರಿ ರಿಯಾಯಿತಿ

Ad karwar auto
ಕಾರವಾರ

ಕಾರವಾರ (09 ಸೆಪ್ಟೆಂಬರ್ 2026) :- ಅಕ್ರಮವಾಗಿ ಕಾಡುಪ್ರಾಣಿಗಳ ಭೇಟೆ ನೆಡೆಸಿ ಅವುಗಳ ಉತ್ಪನ್ನಗಳನ್ನ ಮಾರಾಟ ಮಾಡುತಿದ್ದ ಜಾಲವನ್ನು ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಸಂಚಾರಿ ದಳ ಹೆಡೆಮುರಿ ಕಟ್ಟಿ ಇಬ್ಬರನ್ನ ಬಂಧಿಸಿದೆ.ಯಲ್ಲಾಪುರ(yallapur) ತಾಲ್ಲೂಕಿನ ಉಪ್ಪಳೇಶ್ವರ ಗ್ರಾಮದಲ್ಲಿ ವನ್ಯಜೀವಿ ಉತ್ಪನ್ನಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಕುರಿತು ಮಾಹಿತಿ ಪಡೆದು  ಶಿರಸಿ ವಿಭಾಗದ ಅರಣ್ಯ ಸಂಚಾರಿ ದಳದ ತಂಡ ದಾಳಿ ನಡೆಸಿತು. ಯಲ್ಲಾಪುರದ ಶಂಕರ್ ಸಿದ್ದಿ, ನರಸಿಂಹ ಸಿದ್ದಿ ಬಂಧಿತರು.

ಬಂಧಿತರಿಂದ ಸುಮಾರು 15.748 ಕೆ.ಜಿ. ಪ್ಯಾಂಗೋಲಿನ್ (ಚಿಪ್ಪುಹಂದಿ) ಚಿಪ್ಪುಗಳು, 8 ಹುಲಿ ಉಗುರುಗಳು, 12 ಚಿರತೆ ಉಗುರುಗಳು, 2 ಹುಲಿ ಹಲ್ಲುಗಳು, 3 ಚಿರತೆ ಹಲ್ಲುಗಳು, 6 ಕಾಡುಹಂದಿ ಹಲ್ಲುಗಳು ಹಾಗೂ 2 ಕಾಡೆಮ್ಮೆ ಕೊಂಬುಗಳು ಸೇರಿ ಕೃತ್ಯಕ್ಕೆ ಬಳಸಲಾದ ಒಂದು ಬೈಕ್ ಮತ್ತು ಸ್ಕೂಟರ್ ಅನ್ನು ಅಧಿಕಾರಿಗಳು ಜಪ್ತಿ ಪಡಿಸಿದ್ದಾರೆ.

Advertisement

ಯಲ್ಲಾಪುರದಲ್ಲಿ ಅಕ್ರಮ ವನ್ಯಜೀವಿ ಉತ್ಪನ್ನ ಸಾಗಾಟ ಪ್ರಕರಣದಲ್ಲಿ ವಶಪಡಿಸಿಕೊಂಡ ಪ್ಯಾಂಗೋಲಿನ್ ಚಿಪ್ಪು, ಹುಲಿ-ಚಿರತೆ ಉಗುರುಗಳು, ಹಲ್ಲುಗಳು ಹಾಗೂ ಕಾಡೆಮ್ಮೆ ಕೊಂಬುಗಳು.
ಯಲ್ಲಾಪುರದಲ್ಲಿ ಅಕ್ರಮ ವನ್ಯಜೀವಿ ಉತ್ಪನ್ನ ಸಾಗಾಟ ಪ್ರಕರಣದಲ್ಲಿ ವಶಪಡಿಸಿಕೊಂಡ ಪ್ಯಾಂಗೋಲಿನ್ ಚಿಪ್ಪು, ಹುಲಿ-ಚಿರತೆ ಉಗುರುಗಳು, ಹಲ್ಲುಗಳು ಹಾಗೂ ಕಾಡೆಮ್ಮೆ ಕೊಂಬುಗಳು.

​ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಈ ಅಕ್ರಮ ವನ್ಯಜೀವಿ ವ್ಯಾಪಾರ ಜಾಲದ ಮೂಲ, ಎಲ್ಲಿಗೆ ಸಾಗಾಟವಾಗುತ್ತಿದೆ ಹಾಗೂ ಇದರಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳ ಪತ್ತೆಗೆ ತನಿಖೆ ಚುರುಕುಗೊಂಡಿದೆ. ಕೃತ್ಯದಲ್ಲಿ ಭಾಗಿಯಾಗಿರುವ ಕೆಲವರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಕಾರ್ಯಾಚರಣೆಯಲ್ಲಿ  ಅಪರಾಧ ನಿಯಂತ್ರಣ ಘಟಕದ ಎಪಿಸಿಸಿಎಫ್ ಮನೋಜ್ ತ್ರಿಪಾಠಿ ಹಾಗೂ ಡಿಸಿಎಫ್ ಸಂದೀಪ್ ಸೂರ್ಯವಂಶಿ ಮಾರ್ಗದರ್ಶನದಲ್ಲಿ, ಎಸಿಎಫ್ ರಾಘವೇಂದ್ರ ನಾಯಕ್ ಮತ್ತು ಆರ್‌ಎಫ್‌ಒ ಶಿಲ್ಪಾ ನಾಯಕ್ ಸೇರಿದಂತೆ ಸಿಬ್ಬಂದಿಗಳು ಭಾಗಿಯಾಗಿದ್ದರು.

ಯಲ್ಲಾಪುರದಲ್ಲಿ ಅಕ್ರಮ ವನ್ಯಜೀವಿ ಉತ್ಪನ್ನ ಸಾಗಾಟ ಪ್ರಕರಣದಲ್ಲಿ ವಶಪಡಿಸಿಕೊಂಡ ಪ್ಯಾಂಗೋಲಿನ್ ಚಿಪ್ಪು, ಹುಲಿ-ಚಿರತೆ ಉಗುರುಗಳು, ಹಲ್ಲುಗಳು ಹಾಗೂ ಕಾಡೆಮ್ಮೆ ಕೊಂಬುಗಳು.
ಯಲ್ಲಾಪುರದಲ್ಲಿ ಅಕ್ರಮ ವನ್ಯಜೀವಿ ಉತ್ಪನ್ನ ಸಾಗಾಟ ಪ್ರಕರಣದಲ್ಲಿ ವಶಪಡಿಸಿಕೊಂಡ ಪ್ಯಾಂಗೋಲಿನ್ ಚಿಪ್ಪು, ಹುಲಿ-ಚಿರತೆ ಉಗುರುಗಳು, ಹಲ್ಲುಗಳು ಹಾಗೂ ಕಾಡೆಮ್ಮೆ ಕೊಂಬುಗಳು.

ರಾಜ್ಯಮಟ್ಟದಲ್ಲಿ ಮಾರಾಟ ಜಾಲ.

ಈ ವನ್ಯಜೀವಿ ಹಂತಕರು ಉತ್ತರ ಕನ್ನಡ ವಿವಿಧ ಭಾಗದ ಅರಣ್ಯದಲ್ಲಿ ಕಾಡುಪ್ರಾಣಿಗಳ ಭೇಟೆಯಾಡಿ ಅವುಗಳ ಉತ್ಪನ್ನವನ್ನು ಮಾರಾಟ ಮಾಡುತ್ತಿರುವ ಕುರಿತು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದ್ದು ,ದೇಶದ ವಿವಿಧ ಭಾಗಕ್ಕೆ ಇವುಗಳ ಉತ್ಪನ್ಬಗಳನ್ನ ಮಾರಾಟ ಮಾಡುತಿದ್ದು ದೊಡ್ಡ ಜಾಲ ಇದೆ ಎನ್ನಲಾಗಿದೆ. ತನಿಖೆಯಿಂದ ಹೆಚ್ಚಿನ ವಿವರ ಹೊರಬರಬೇಕಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement