Sirsi |ರೌಡಿ ಶೀಟರ್ ಪಯ್ಯು ಚೌಟಿ  ಗೂಂಡಾ ಕಾಯ್ದೆಯಡಿ ಬಳ್ಳಾರಿಗೆ ಗಡಿಪಾರು- ಠಾಣೆಗೆ ಮುತ್ತಿಗೆ ಹಾಲಿದ ಬೆಂಬಲಿಗರು

file 00000000884482119d41bd015d045079 file 00000000884482119d41bd015d045079

Karwar Shetty Eye Hospital

Ad karwar auto
ಕಾರವಾರ ದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿಮ್ಮ ಬಟ್ಟೆಗಳಿಗೆ ಹೊಳಪು ನೀಡುವ ಆರೋ ಡ್ರೈಕ್ಲೀನ್ -ಒಮ್ನೆ ಭೇಟಿ ನೀಡಿ

ಕಾರವಾರ :- ಅಪಹರಣ ,ಬೆದರಿಕೆ ,ಗುಂಪು ಸಂಘರ್ಷ ಸೇರಿದಂತೆ ವಿವಿಧ ಆರೋಪದಡಿ ಆರೋಪಿಯಾಗಿರುವ ಶಿರಸಿಯ( Sirsi)ರೌಡಿ ಶೀಟರ್ ಪಯ್ಯು ಚೌಟಿಯನ್ನು  ಗೂಂಡಾ ಕಾಯ್ದೆಯಡಿ ಬಳ್ಳಾರಿಗೆ ಗಡಿಪಾರು ಮಾಡಿ ಆದೇಶ ಮಾಡಲಾಗಿದೆ.

ಕಳೆದ ಮೂರು ತಿಂಗಳಿಂದ ಪೊಲೀಸ್ ಇಲಾಖೆ ರೌಡಿ ಶೀಟರ್ ಗಳನ್ನ ನಿರಂತರವಾಗಿ ಗೂಂಡಾ ಕಾಯ್ದೆಯಡಿ ಗಡಿಪಾರು ಮಾಡುತ್ತಿದೆ. ಆದ್ರೆ ಇದೀಗ ಪಯ್ಯು ಚೌಟಿಯನ್ನು ಗಡಿಪಾರು ಮಾಡುತಿದ್ದಂತೆ ಅವರ ಬೆಂಬಲಿಗರು ಶಿರಸಿ ಮಾರುಕಟ್ಟೆ ಠಾಣೆಗೆ ಮುತ್ತಿಗೆಹಾಕಿ ಆಕ್ರೋಶ ಹೊರಹಾಕಿದ್ದಾರೆ.

Advertisement

ಇದನ್ನೂ ಓದಿ:-Sirsi | ಬಿಳೂರು ಕಾಲೇಜಿನಲ್ಲಿ ವಿದ್ಯಾರ್ಥಿಗಳ ದಿಢೀರ್ ಪ್ರತಿಭಟನೆ: ಪ್ರಾಂಶುಪಾಲೆಯ ಅವಾಚ್ಯ ಶಬ್ದಬಳಕೆ !

ಪೌಯ್ಯು ಚೌಟಿಯವರು ಯಾವುದೇ ಗಲಾಟೆ ಸೇರಿದಂತೆ ಕೆಟ್ಟ ಕೆಲಸ ಮಾಡದೇ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಕೆಲವು ಪ್ರಕರಣ ಮಾತ್ರ ಬಾಕಿ ಇದ್ದು ಇದೀಗ ಗೂಂಡಾ ಕಾಯ್ದೆಯಡಿ ಅವರನ್ನ ಬಳ್ಳಾರಿಗೆ ಗಡಿಪಾರು ಮಾಡಿಲಾಗಿದೆ.ಇದು ಸರಿಯಲ್ಲ ಎಂದು ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಣೇಶೋತ್ಸವದ ಟಚ್ ಕೊಟ್ಟ ಬೆಂಬಲಿಗರು.

ಶಿರಸಿಯ ಪಯ್ಯು ಚೌಟಿ ಯವರನ್ನು ಗೂಂಡಾ ಕಾಯಿದೆಯಡಿ ಬಂದಿಸಿ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಿದ ಉತ್ತರಕನ್ನಡ ಪೊಲೀಸರು.

ಯಾವುದೇ ಅಪರಾಧಿ ಚಟುವಟಿಕೆಯಲ್ಲಿ ಬಾಗಿಯಾಗದೇ ಇದ್ದರೂ ಸಹ ವೈಯಕ್ತಿಕ ದ್ವೇಷಕ್ಕೆ ಅವರ ಸಾಮಾಜಿಕ ಬೆಳವಣಿಗೆ  ಹಾಗೂ ಅವರು ನಡೆಸಿಕೊಂಡು ಬರುತ್ತಿರುವ ಹಿಂದೂ ಮಹಾಗಣಪತಿ ಮಂಡಳಿಯ ಯಶಸ್ಸನ್ನು ಸಹಿಸಿಕೊಳ್ಳಲು ಆಗದ ಕೆಲವುರಾಜಕೀಯ ವ್ಯಕ್ತಿಗಳು ಈ ಬಾರಿಯ ಹಿಂದೂ ಮಹಾಗಣಪತಿ ಆಚರಣೆಯನ್ನು ತಡೆಯಬೇಕು  ಏನ್ನುವ ಉದ್ದೇಶಕ್ಕೆ ರಾಜಕೀಯ ಪ್ರೇರಿತವಾಗಿ ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರಿ ಈ ಕೃತ್ಯ ನಡೆಸಿದ್ದಾರೆ ಎಂದು ದೂರಿ ಸಾಮಾಜಿಕ ಜಾಲತಾಣದಲ್ಲಿ ಅಕ್ರೋಶ ಹೊರಹಾಕಿದ್ದಾರೆ.

ರಾಜ್ಯ ಮಾನವ ಹಕ್ಕುಆಯೋಗಕ್ಕೆ ದೂರು ನೀಡಿದ್ದ ಚೌಟಿ.

ತನ್ನನ್ನು ಅನಾವಷ್ಯವಾಗಿ ಗಡಿಪಾರಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಸಿದ್ದತೆ ಮಾಡಿಕೊಂಡಿದ್ದಾರೆ ಎಂದು ಪೈಯು ಚೌಟಿ ಮಾನವ ಹಕ್ಕು ಆಯೋಗಕ್ಕೆ ಈ. ಹಿಂದೆ ದೂರು ಸಲ್ಲಿಸಿದ್ದರು.

 ಇನ್ನು ಯಾವುದೇ ಅಹಿತಕರ ಘಟನೆ, ಗಲಭೆಯಂತಹ ಘಟನೆಗಳು ಜಿಲ್ಲೆಯಲ್ಲಿ ಜರುಗಬಾರದು ಎಂದು ಪೊಲೀಸ್ ಇಲಾಖೆ ಜಿಲ್ಲೆಯ ರೌಡಿ ಶೀಟರ್ ಗಳನ್ನ ಗಡಿಪಾರು ಮಾಡುತ್ತಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement