Ankola| ಡಾಬಾದಲ್ಲಿ ಕೆಲಸಕ್ಕಿದ್ದ ಇಬ್ಬರು ಬಾಲ ಕಾರ್ಮಿಕರ ರಕ್ಷಣೆ 

Child Labour Rescue ankola Child Labour Rescue ankola
Child Labour Rescue
Ad karwar auto
ಕಾರವಾರ ದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿಮ್ಮ ಬಟ್ಟೆಗಳಿಗೆ ಹೊಳಪು ನೀಡುವ ಆರೋ ಡ್ರೈಕ್ಲೀನ್ -ಒಮ್ನೆ ಭೇಟಿ ನೀಡಿ
Karwar Shetty Eye Hospital
ಅತೀ ಶೀಘ್ರದಲ್ಲೇ ಕಾರವಾರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭ.

ಕಾರವಾರ  :- ಬಾಲಕಾರ್ಮಿಕರನ್ನು ಬಳಸಿ ಡಾಬಾದಲ್ಲಿ ಕೆಲಸ ಮಾಡಿಸಿಕೊಳ್ಳುತಿದ್ದ ಪ್ರಕರಣ ಸಂಬಂಧ ಕಾರ್ಮಿಕ ಇಲಾಖೆಯಿಂದ ದಾಳಿ ನಡೆಸಿ ಇಬ್ಬರು ಬಾಲಕಾರ್ಮಿಕರನ್ನು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 52 ರ ಸರಳೆಬೈಲ್ ಬಳಿಯ ‘ಸಂಗೀತಾ ಡಾಬಾ’ ದಲ್ಲಿ ನಡೆದಿದೆ.

ಸಾರ್ವಜನಿಕರ ದೂರಿನ ಆಧಾರದಲ್ಲಿ ದಾಳಿ ನಡೆಸಿದ ಕಾರ್ಮಿಕ ಇಲಾಖೆ  ಹಾಗೂ ಮಕ್ಕಳ ರಕ್ಷಣಾ ಘಟಕ ಬಾಲ ಕಾರ್ಮಿಕ ಇನ್ನೋರ್ವ ಕಿಶೋರ ಕಾರ್ಮಿಕನ ರಕ್ಷಣೆ ಮಾಡಿದೆ. ಇದನ್ನೂ ಓದಿ:-Ankola |ಕಾರು-ಬೈಕ್ ಮುಖಾಮುಖಿ ಢಿಕ್ಕಿ; ಸಿಬರ್ಡ್ ಸಿಬ್ಬಂದಿ ಗಂಭೀರ

ಬಾಲ ಕಾರ್ಮಿಕ ನಿಷೇಧ ಕಾಯ್ದೆ ಹಾಗೂ ಜುವೆನೈಲ್ ಜಸ್ಟಿಸ್ (ಜೆ.ಜೆ) ಕಾಯ್ದೆಯಡಿ ಡಾಬಾದ ಮಾಲೀಕನ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದ್ದು ,ಕಾರವಾರದ ಮಕ್ಕಳ ರಕ್ಷಣಾ ಘಟಕಕ್ಕೆ ಬಾಲ ಕಾರ್ಮಿಕರನ್ನ ಹಸ್ತಾಂತರ ಮಾಡಲಾಗಿದೆ.

Advertisement

​”ಮಕ್ಕಳನ್ನು ಅಪಾಯಕಾರಿ ಹಾಗೂ ವಾಣಿಜ್ಯ ಸಂಸ್ಥೆಗಳಲ್ಲಿ ಕೆಲಸಕ್ಕೆ ಬಳಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ಯಾವುದೇ ಹೋಟೆಲ್, ಡಾಬಾ ಅಥವಾ ಉದ್ದಿಮೆಗಳಲ್ಲಿ ಬಾಲಕಾರ್ಮಿಕರನ್ನು ನೇಮಿಸಿಕೊಂಡಿರುವುದು ಕಂಡುಬಂದರೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು,” ಎಂದು ಈ ಸಂದರ್ಭದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement