Uttara kannada | ಒಂದೇ ವರ್ಷದಲ್ಲಿ 61 ಏಡ್ಸ್ ರೋಗಿಗಳ ಸಾವು :ಕುಮಟಾದಲ್ಲಿ ಅತೀ ಹೆಚ್ಚು ಸಾವು!

Two adults lying on a bed and gently holding hands, shown from above in a warm, intimate bedroom setting with blue-and-white striped bedding. Two adults lying on a bed and gently holding hands, shown from above in a warm, intimate bedroom setting with blue-and-white striped bedding.
Two adults lying on a bed and gently holding hands, shown from above in a warm, intimate bedroom setting with blue-and-white striped bedding.
Ad karwar auto
ಕಾರವಾರ

ಕಾರವಾರ: ಉತ್ತರ ಕನ್ನಡ (uttara Kannada) ಜಿಲ್ಲೆಯಲ್ಲಿ ಎರಡು ಸಾವಿರದ ಇಪ್ಪತ್ತ್ಮೂರು–ಇಪ್ಪತ್ತ್ನಾಲ್ಕನೇ ಸಾಲಿನ ವಾರ್ಷಿಕ ಸಾಲಿನಲ್ಲಿ ಒಟ್ಟು ಅರವತ್ತೊಂದು ಏಡ್ಸ್ ರೋಗಿಗಳು ಮೃತಪಟ್ಟಿರುವುದು ಜಿಲ್ಲಾ ಅಂಕಿ-ಅಂಶಗಳ ವರದಿಯಿಂದ ತಿಳಿದುಬಂದಿದೆ.

ಮೃತಪಟ್ಟವರಲ್ಲಿ 44 ಮಂದಿ ಪುರುಷರು ಹಾಗೂ 17 ಮಂದಿ ಮಹಿಳೆಯರು ಇದ್ದಾರೆ. ಟಿಎಸ್/ಟಿಜಿ ವರ್ಗದಲ್ಲಿ ಯಾವುದೇ ಸಾವು ದಾಖಲಾಗಿಲ್ಲ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ‘ಡಿಸ್ಟ್ರಿಕ್ಟ್ ಅಟ್ ಎ ಗ್ಲಾನ್ಸ್ – ಉತ್ತರ ಕನ್ನಡ, ಸ್ಟ್ಯಾಟಿಸ್ಟಿಕಲ್ ರಿಪೋರ್ಟ್ – ಎಫ್‌ವೈ ಎರಡು ಸಾವಿರದ ಇಪ್ಪತ್ತ್ಮೂರು–ಇಪ್ಪತ್ತ್ನಾಲ್ಕು’ ವರದಿಯಲ್ಲಿ ಈ ಅಂಕಿ-ಅಂಶಗಳು ದಾಖಲಾಗಿವೆ. ಇದನ್ನೂ ಓದಿ:-ಹಣದಾಸೆಗೆ ವಿದೇಶಕ್ಕೆ ವೇಷ್ಯಾವಾಟಿಕೆಗೆ ಮಾರಾಟ ಮಾಡಿದ ಮಲೆನಾಡಿನ ಹೆತ್ತವರು!

Advertisement

ತಾಲೂಕುವಾರು ಅಂಕಿ-ಅಂಶಗಳನ್ನು ಗಮನಿಸಿದರೆ ಕುಮಟಾ ತಾಲೂಕಿನಲ್ಲಿ ಅತಿ ಹೆಚ್ಚು ಹನ್ನೊಂದು ಮಂದಿ ಏಡ್ಸ್ ರೋಗಿಗಳು ಮೃತಪಟ್ಟಿದ್ದಾರೆ. ಇವರಲ್ಲಿ ಏಳು ಮಂದಿ ಪುರುಷರು ಹಾಗೂ ನಾಲ್ಕು ಮಂದಿ ಮಹಿಳೆಯರು ಇದ್ದಾರೆ.

ಯಲ್ಲಾಪುರ ತಾಲೂಕಿನಲ್ಲಿ ಎಂಟು ಮಂದಿ ಮೃತಪಟ್ಟಿದ್ದು, ಇವರಲ್ಲಿ ಆರು ಮಂದಿ ಪುರುಷರು ಹಾಗೂ ಇಬ್ಬರು ಮಹಿಳೆಯರು.

ಶಿರಸಿ ತಾಲೂಕಿನಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ ಐದು ಮಂದಿ ಪುರುಷರು ಹಾಗೂ ಇಬ್ಬರು ಮಹಿಳೆಯರು.

ಕಾರವಾರ ತಾಲೂಕಿನಲ್ಲಿ ಆರು ಮಂದಿ ಮೃತಪಟ್ಟಿದ್ದು, ಐದು ಮಂದಿ ಪುರುಷರು ಹಾಗೂ ಒಬ್ಬ ಮಹಿಳೆ ಸೇರಿದ್ದಾರೆ.

ದಾಂಡೇಲಿ ಮತ್ತು ಮುಂಡಗೋಡ ತಾಲೂಕಿನಲ್ಲಿ ತಲಾ ಐದು ಮಂದಿ ಮೃತಪಟ್ಟಿದ್ದಾರೆ. ದಾಂಡೇಲಿಯಲ್ಲಿ ನಾಲ್ವರು ಪುರುಷರು ಹಾಗೂ ಒಬ್ಬ ಮಹಿಳೆ ಮೃತಪಟ್ಟಿದ್ದರೆ, ಮುಂಡಗೋಡದಲ್ಲಿ ಮೂವರು ಪುರುಷರು ಹಾಗೂ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ.

ಅಂಕೋಲ, ಹೊನ್ನಾವರ ಮತ್ತು ಜೋಯಿಡಾ ತಾಲೂಕಿನಲ್ಲಿ ತಲಾ ನಾಲ್ಕು ಮಂದಿ ಏಡ್ಸ್ ರೋಗಿಗಳ ಸಾವು ದಾಖಲಾಗಿದೆ.

ಅಂಕೋಲದಲ್ಲಿ ನಾಲ್ವರು ಪುರುಷರು ಮೃತಪಟ್ಟಿದ್ದಾರೆ. ಹೊನ್ನಾವರದಲ್ಲಿ ಮೂವರು ಪುರುಷರು ಹಾಗೂ ಒಬ್ಬ ಮಹಿಳೆ, ಜೋಯಿಡಾದಲ್ಲಿ ಮೂವರು ಪುರುಷರು ಹಾಗೂ ಒಬ್ಬ ಮಹಿಳೆ ಮೃತಪಟ್ಟಿದ್ದಾರೆ.

ಸಿದ್ದಾಪುರ ತಾಲೂಕಿನಲ್ಲಿ ಮೂವರು ಮೃತಪಟ್ಟಿದ್ದು, ಇವರಲ್ಲಿ ಇಬ್ಬರು ಪುರುಷರು ಹಾಗೂ ಒಬ್ಬ ಮಹಿಳೆ.

ಭಟ್ಕಳ ಮತ್ತು ಹಳಿಯಾಳ ತಾಲೂಕಿನಲ್ಲಿ ತಲಾ ಇಬ್ಬರು ಏಡ್ಸ್ ರೋಗಿಗಳು ಮೃತಪಟ್ಟಿದ್ದಾರೆ. ಭಟ್ಕಳದಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದರೆ, ಹಳಿಯಾಳದಲ್ಲಿ ಇಬ್ಬರು ಪುರುಷರು ಮೃತಪಟ್ಟಿದ್ದಾರೆ.

ಒಟ್ಟಾರೆಯಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಸಾವಿರದ ಇಪ್ಪತ್ತ್ಮೂರು–ಇಪ್ಪತ್ತ್ನಾಲ್ಕನೇ ಸಾಲಿನಲ್ಲಿ ಅರವತ್ತೊಂದು ಏಡ್ಸ್ ರೋಗಿಗಳ ಸಾವು ಸಂಭವಿಸಿದೆ. ಇವರಲ್ಲಿ 44 ಮಂದಿ ಪುರುಷರು ಮತ್ತು ಹದಿನೇಳು ಮಂದಿ ಮಹಿಳೆಯರು ಇದ್ದಾರೆ.

ಪ್ರವಾಸೋಧ್ಯಮ ಅಭಿವೃದ್ಧಿ ಭಾಗದಲ್ಲಿ ಹೆಚ್ಚಳ.

Uttara kannada | ಒಂದೇ ವರ್ಷದಲ್ಲಿ 61 ಏಡ್ಸ್ ರೋಗಿಗಳ ಸಾವು :ಕುಮಟಾದಲ್ಲಿ ಅತೀ ಹೆಚ್ಚು ಸಾವು!
ಕುಮಟಾದ ಫಾರ್ಮ ಹೌಸ್ ಒಂದರಲ್ಲಿ ವೇಷ್ಯಾವಾಟಿಕೆ ನಿರತ ಮಹಿಳೆಯರನ್ಬ ರಕ್ಷಿಸಿರುವ ಪೊಲೀಸರು ( ಸಂಗ್ರಹ ಚಿತ್ರ)

ಜಿಲ್ಲೆಯ ಗೋಕರ್ಣ ಮುರುಡೇಶ್ವರ ಸೇರಿದಂತೆ ಹೆಚ್ಚಿನ ಪ್ರವಾಸಿಗರು ಬರುವ ಪ್ರದೇಶದಲ್ಲಿ ಸ್ಥಳೀಯ ಮಟ್ಟದಲ್ಲಿ ವೇಷ್ಯಾವಾಟಿಕೆಗಳು ನಡೆಯುತ್ತಿವೆ. ಹೆಚ್ಚಿನದ್ದಾಗಿ ಬಡ ಮಹಿಳೆಯರು ಇದಕ್ಕೆ ಬಲಿಯಾದರೇ ,ಪುರುಷರು ಸಹ ಹೆಚ್ಚಿನವರಾಗಿರುವುದು ಆತಂಕ ವಿಚಾರ.

ಸಧ್ಯ ಜಿಲ್ಲೆಯಲ್ಲಿ ಆಗಾಗ ಲಾಡ್ಜ್ ಸೇರಿದಂತೆ ಹಲವು ಪ್ರದೇಶದ ಮೇಲೆ ದಾಳಿಗಳಾಗುತ್ತಿವೆ. ರಕ್ಷಿಸಿದ ಮಹಿಳೆಯರನ್ನ ಸ್ವೀಕಾರ ಕೇಂದ್ರದ ಮೂಲಕ ಹೊಸ ಜೀವನ ನೀಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶ್ರಮ ಪಡುತ್ತಿದೆ. ಆದರೇ ಹಣದ ಆಸೆಗೆ ,ಕಾಮದ ತೃಷೆಗೆ ಸುರಕ್ಷಿತವಲ್ಲದ ಲೈಂಗಿಕ ಸಂಬಂಧದಿಂದ ಸೊಂಕು ಹರಡುತ್ತಿದೆ. ಇನ್ನು ರಾಜ್ಯಕ್ಕೆ ಹೋಲಿಸಿದರೇ ಜಿಲ್ಲೆಯಲ್ಲಿ ಈಗಿನ ಸ್ಥಿತಿಯಲ್ಲಿ ಕಡಿಮೆ ಸೊಂಕಿತರಿದ್ದರೂ ಶಿಕ್ಷಣದ ಕೊರತೆಯಿಂದ ಸೊಂಕಿತರ ಸಂಖ್ಯೆ ಹೆಚ್ಚುತ್ತಿವೆ. ಗರ್ಭಿಣಿಯರು ಸಹ ಸೊಂಕಿಗೆ ಒಳಗಾದ ದಾಖಲೆಗಳಿವೆ.

ದಾಳಿ ಮಾಡಿದ್ರೂ ನಿಲ್ಲದ ವೇಶ್ಯಾವಾಟಿಕೆ !

ಗೋಕರ್ಣ(gokarna),ಮುರುಡೇಶ್ವರ ಸೇರಿದಂತೆ ಪ್ರವಾಸಿ ಸ್ಥಳಗಳ ಜೊತೆ ಕೆಲವು ಧಾರ್ಮಿಕ ಕ್ಷೇತ್ರದ ಭಾಗದಲ್ಲೂ ವೇಷ್ಯಾವಾಟಿಕೆ ಜಾಲಗಳು ಹಬ್ಬಿವೆ. ಪ್ರವಾಸಿ ಸ್ಥಳದಲ್ಲಿ ರೂಮ್ ಬಾಯ್ಸ್ ,ಕೆಲವು ಹೋಟಲ್ ನವರೇ ದಲ್ಲಾಳಿಗಳಾದರೇ , ಕುಮಟಾ, (kumta) ಹೊನ್ನಾವರ ,ಮುರುಡೇಶ್ವರ ,ಹುಬ್ಬಳ್ಳಿ,ಧಾರವಾಡ,ಗದಗ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಮಹಿಳೆಯರು ವೇಷ್ಯಾವಾಟಿಕೆಯಲ್ಲಿ ಹೆಚ್ಚು ಭಾಗವಾಗುತ್ತಿರುವ ಆರೋಪಗಳಿವೆ. ಇದನ್ನೂ ಓದಿ:-Ankola police ಕಾರ್ಯಾಚರಣೆ:ಬೇಲಿಕೇರಿಯಲ್ಲಿ ಮಹಿಳೆಗೆ ಬಲವಂತವಾಗಿ ವೇಷ್ಯಾವಾಟಿಕೆ ದಂಧೆಗೆ ತೊಡಗಿಸಿದವರ ಬಂಧನ

ಕೆಲವು ಮಹಿಳೆಯರು 30 ವರ್ಷದಿಂದ 40 ವರ್ಷ ವಯಸ್ಸಿನವರು ಸಹ ಇದರಲ್ಲಿ ಸಕ್ರಿಯವಾಗಿದ್ದು ,ಪೊಲೀಸರು ದಾಳಿ ನಡೆಸಿ ಕೋರ್ಟ ನಲ್ಲಿ ಪ್ರಕರಣ ಇರುವವರೂ ,ತಮ್ಮ ಜೀವನ ಬದಲಿಸಿಕೊಳ್ಳದೇ ಇದರಲ್ಲೇ ಸಕ್ರಿಯರಾಗಿದ್ದು ,ಕೆಲವು ಬಡ ಯುವತಿಯರನ್ನ ತಮ್ಮ ಕೆಡ್ಡಾಕ್ಕೆ ಕೆಡವಿ ದಂಧೆ ಮಾಡುತಿದ್ದಾರೆ.

ವಾಟ್ಸ್ ಅಪ್ ಕಾಲ್ ಮೆಸೇಜ್ ಬಳಕೆ!

Uttara kannada | ಒಂದೇ ವರ್ಷದಲ್ಲಿ 61 ಏಡ್ಸ್ ರೋಗಿಗಳ ಸಾವು :ಕುಮಟಾದಲ್ಲಿ ಅತೀ ಹೆಚ್ಚು ಸಾವು!
ಸಾಂದರ್ಭಿಕ ಚಿತ್ರ

ಗ್ರಾಹಕರನ್ನು ಸೆಳೆಯಲು ವಾಟ್ಸ್ ಅಪ್ ಚಾಟ್ ,ಕಾಲ್ ಗಳ ಮೊರೆಹೋಗುತ್ತಿರುವ ದಂಧೆಕೋರರು,ತಾವು ಈಹಿಂದೆ ಹಿಡಿದ ಗ್ರಾಹಕರಿಗೆ ತಮ್ಮ ನಂಬರ್ ನೀಡಿ ವ್ಯವಹಾರ ಮುಂದುವರೆಸುತಿದ್ದು ,ಕೆಲವು ಯುವತಿಯರು,ಮಹಿಳೆಯರ ಫೋಟೋ ಕಳುಹಿಸಿ ಹೆಚ್ಚಿನ ಗ್ರಾಹಕರನ್ನು ಸೆಳೆಯುತಿದ್ದಾರೆ.

500, 2500 ಹಾಗೂ 20 ಸಾವಿರದ ವರೆಗೂ ದರ ವಿಧಿಸುವ ದಂಧೆಕೂರರು ವಯಸ್ಸಿನ ಮೇಲೆ ದರ ಫಿಕ್ಸ್ ಮಾಡಿ ದಿನ ಹಾಗೂ ಗಂಟೆಗಳ ಲೆಕ್ಕದಲ್ಲಿ ಹಣ ಗಳಿಸುತಿದ್ದು ಸುರಕ್ಷಿತವಲ್ಲದ ಲೈಂಗಿಕ ಕ್ರಿಯೆಗೂ ಅವಕಾಶ ಕಲ್ಪಿಸುತ್ತಿರುವುದು  ರೋಗ ಹರಡಲು ದಾರಿ ಮಾಡಿಕೊಟ್ಟಿದೆ.

ಓದುಗರ ಗಮನಕ್ಕೆ- ಈ ಅಂಕಿ ಅಂಶ ಆರೋಗ್ಯ ಇಲಾಖೆ ( health department) ನ ಅಂಕಿ ಅಂಶ ಆಧಾರವಾಗಿದೆ. ಈಗಿನ ಏಟ್ಸ್ ರೋಗಿಗಳ ಅಂಕಿ ಸಂಖ್ಯೆಗಳನ್ನು ಕೆಲವು ಕಾರಣದಿಂದ ಗುಪ್ತವಾಗಿಡಲಾಗಿದೆ. ಈ ಲೇಖನದ ಉದ್ದೇಶ ಜನರಲ್ಲಿ ಜಾಗೃತಿ ಮೂಡಿಸುವುದಷ್ಟೇ ಆಗಿದೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement