


ಸೆ.13ರ ರಾತ್ರಿ 8:30ರವರೆಗೆ ಸಮುದ್ರ ಅಲೆಗಳ ಅಬ್ಬರ ಸಾಧ್ಯತೆ,ಮೀನುಗಾರರು, ಪ್ರವಾಸಿಗರಿಗೆ ಎಚ್ಚರಿಕೆ.
ಕಾರವಾರ: ಉತ್ತರ ಕನ್ನಡ (uttara kannada ) ಜಿಲ್ಲೆಯ ಕರಾವಳಿ ಭಾಗದಲ್ಲಿ ಸಮುದ್ರದ ಅಲೆಗಳ ಏರಿಕೆಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ INCOIS (Indian National Centre for Ocean Information Services) ಸ್ವೆಲ್ ಸರ್ಜ್ ಅಲರ್ಟ್ (Swell Surge Alert) ನೀಡಿದೆ. ಇದನ್ನೂ ಓದಿ:-Uttara kannada | ಒಂದೇ ವರ್ಷದಲ್ಲಿ 61 ಏಡ್ಸ್ ರೋಗಿಗಳ ಸಾವು :ಕುಮಟಾದಲ್ಲಿ ಅತೀ ಹೆಚ್ಚು ಸಾವು!
INCOIS ನೀಡಿರುವ ಮುನ್ನೆಚ್ಚರಿಕೆಯ ಪ್ರಕಾರ ಮಜಾಳಿಯಿಂದ ಭಟ್ಕಳದವರೆಗೆ ಇರುವ ಉತ್ತರ ಕನ್ನಡ ಕರಾವಳಿಯಲ್ಲಿ 16ರಿಂದ 19 ಸೆಕೆಂಡ್ ಅವಧಿಯ ಸ್ವೆಲ್ ಅಲೆಗಳು ಉಂಟಾಗುವ ಸಾಧ್ಯತೆ ಇದೆ. ಅಲೆಗಳ ಎತ್ತರ 1ರಿಂದ 1.2 ಮೀಟರ್‌ವರೆಗೆ ಇರಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.ಈ ಅಲೆಗಳ ಪ್ರಭಾವ ಸೆಪ್ಟೆಂಬರ್ 13ರ ರಾತ್ರಿ 8:30ರವರೆಗೆ ಇರುವ ಸಾಧ್ಯತೆಯಿದೆ.
ಮೀನುಗಾರರು, ಪ್ರವಾಸಿಗರಿಗೆ ಎಚ್ಚರಿಕೆ.
ಸ್ವೆಲ್ ಅಲೆಗಳ ಪರಿಣಾಮ ಸಮುದ್ರದಲ್ಲಿ ಅಲೆಗಳು ಏಕಾಏಕಿ ದಡದತ್ತ ನುಗ್ಗುವ ಸಾಧ್ಯತೆ ಇರುವುದರಿಂದ ಮೀನುಗಾರರು ಹಾಗೂ ಬೋಟ್‌ಗಳಲ್ಲಿ ತೆರಳುವವರು ಅತ್ಯಂತ ಜಾಗರೂಕತೆ ವಹಿಸುವಂತೆ ಸೂಚಿಸಲಾಗಿದೆ. ಇದನ್ನು ಓದಿ:-Karwar | ಅನಾರೋಗ್ಯ ಪೀಡಿತ ತಾಯಿಯನ್ನ ಆಸ್ಪತ್ರೆಯಲ್ಲೇ ಅನಾಥ ಮಾಡಿದ ಮಕ್ಕಳು!
ಅದೇ ರೀತಿ ಬೀಚ್‌ಗಳಿಗೆ ತೆರಳುವ ಪ್ರವಾಸಿಗರು ಸಮುದ್ರಕ್ಕೆ ಇಳಿಯುವುದು, ಈಜುವುದು ಹಾಗೂ ಸಮುದ್ರದ ಅಲೆಗಳ ಸಮೀಪದಲ್ಲಿ ಮನರಂಜನಾ ಚಟುವಟಿಕೆ ನಡೆಸುವುದನ್ನು ತಪ್ಪಿಸಲು ಸೂಚನೆ ನೀಡಲಾಗಿದೆ.
ಮಜಾಳಿ, ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ಭಾಗದ ಕರಾವಳಿ ಪ್ರದೇಶಗಳಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
