Sagar| ಕಣಜದ ಹುಳು ದಾಳಿ: 8 ವರ್ಷದ ಬಾಲಕ ಸಾವು

ಶಿವಮೊಗ್ಗ: ಕಣಜದ ಹುಳುಗಳು ದಾಳಿ ಮಾಡಿದ ಪರಿಣಾಮ 8 ವರ್ಷದ ಬಾಲಕ ಮೃತಪಟ್ಟಿರುವ ದಾರುಣ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಡೆದಿದೆ.
ಸಾಗರ ತಾಲೂಕಿನ ಹೆಗ್ಗೋಡು ಸಮೀಪದ ಅತ್ತಿಸರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತ ಬಾಲಕನನ್ನು ನಿಶ್ಚಿತ್ (8) ಎಂದು ಗುರುತಿಸಲಾಗಿದ್ದು, ಆತ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು.
ಇದನ್ನೂ ಓದಿ:-Sagar|ಸಾಗರದಲ್ಲಿ ಹೃದಯಾಘಾತದಿಂದ 6 ವರ್ಷದ ಬಾಲಕನ ಬದುಕು ಅಂತ್ಯ
ಮನೆಯ ಹಿಂದಿನ ಬಾಳೆಗಿಡದಲ್ಲಿದ್ದ ಕಣಜದ ಗೂಡಿನಿಂದ ಹುಳುಗಳು ಹೊರಬಂದು ಬಾಲಕ ನಿಶ್ಚಿತ್ ಹಾಗೂ ಆತನ ತಂದೆ ವೆಂಕಟೇಶ್ ಅವರ ಮೇಲೆ ದಾಳಿ ಮಾಡಿವೆ.
ದಾಳಿಯಲ್ಲಿ ಇಬ್ಬರಿಗೂ ಕಣಜದ ಹುಳುಗಳು ಕಡಿದಿವೆ.ಘಟನೆಯ ಬಳಿಕ ಕುಟುಂಬಸ್ಥರು ತಂದೆ-ಮಗನನ್ನು ತಕ್ಷಣ ಹೆಗ್ಗೋಡಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಇಬ್ಬರನ್ನೂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಇದನ್ನೂ ಓದಿ:-Sagar| ಕುಡಿದ ಮತ್ತಲೆ ನಗರಸಭೆ ಆಯುಕ್ತ ನಾಗಪ್ಪನ ಸೊಂಟದ ಕೆಳಗಿನ ಬೈಗುಳದ ಹುಚ್ಚಾಟ!
ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ನಿಶ್ಚಿತ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ತಂದೆ ವೆಂಕಟೇಶ್ ಅವರಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಘಟನೆ ಸಂಬಂಧ ಸಾಗರ (sagar) ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.






