Sagar|ಸಾಗರದಲ್ಲಿ ಹೃದಯಾಘಾತದಿಂದ 6 ವರ್ಷದ ಬಾಲಕನ ಬದುಕು ಅಂತ್ಯ

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹಾಳಸಸಿ ಗ್ರಾಮದಲ್ಲಿ 6 ವರ್ಷದ ತ್ರಿಲೋಕ್ ಜೈನ್ ಎಂಬ ಬಾಲಕ ಹೃದಯಾಘಾತದಿಂದ ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ. ಶಾಲಾ ಆವರಣದಲ್ಲಿ ಕುಸಿದು ಬಿದ್ದ ಬಾಲಕ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾನೆ.
6-year-old Trilok Jain from Sagar in Shivamogga district who reportedly died due to a heart attack after collapsing at school premises. 6-year-old Trilok Jain from Sagar in Shivamogga district who reportedly died due to a heart attack after collapsing at school premises.
ಹೃದಯಾಘಾತವಾದ ಬಾಲಕ

Sagar|ಸಾಗರದಲ್ಲಿ ಹೃದಯಾಘಾತದಿಂದ 6 ವರ್ಷದ ಬಾಲಕನ ಬದುಕು ಅಂತ್ಯ

 

ಶಿವಮೊಗ್ಗ:- ಹೃದಯಾಘಾತ ಕಾಯಿಲೆ ಕೇವಲ ಹದಿಹರೆಯದವರನ್ನೂ ಬಿಡದೇ ಕಾಡುತಿದ್ದರೇ, ಇದೀಗ ಪುಟ್ಟ ಮಕ್ಕಳೂ ಹೃದಯಾಘಾತಕ್ಕೆ ಸಾವು ಕಾಣುತಿದ್ದಾರೆ.

ಹೌದು ಹೃದಯಾಘಾತದಿಂದ 6 ವರ್ಷದ ಬಾಲಕನೋರ್ವ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಬೆಳಕಿಗೆ ಬಂದಿದೆ.

Advertisement

ಇದನ್ನೂ ಓದಿ:-Sagar |ಮನೆಯ ವಿದ್ಯತ್ ಸಂಪರ್ಕ ಕಡಿತಗೊಳಿಸಿ ವೃದ್ಧೆಯ ಮಾಂಗಲ್ಯ ಸರ ಕದ್ದ ಕಳ್ಳನ ಬಂಧನ

ಸಾಗರ ತಾಲೂಕಿನ ಹಾಳಸಸಿ ಗ್ರಾಮದಲ್ಲಿನ 6 ವರ್ಷದ ತ್ರಿಲೋಕ್ ಜೈನ್ ಎಂಬ ಬಾಲಕ ಮೃತ ಪಟ್ಟಿದ್ದಾನೆ.

ಸಾಗರ(sagar) ತಾಲೂಕಿನ ಕೊಡನವಳ್ಳಿ ಗ್ರಾಮದ ಗೌತಮ್ ಜೈನ್ ಹಾಗೂ ಶಿಲ್ಪಾ ದಂಪತಿಯ ಪುತ್ರನಾದ ತ್ರಿಲೋಕ್ ಜೈನ್, ಹಾಳಸಸಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿ ಓದುತ್ತಿದ್ದನು.

ಶನಿವಾರ ಮಧ್ಯಾಹ್ನ ಶಾಲೆ ಮುಗಿಯುವ ಸಮಯದಲ್ಲಿ ಶಾಲಾ ಆವರಣದಲ್ಲಿ ಏಕಾಏಕಿ ಕುಸಿದು ಬಿದ್ದ ಬಾಲಕ ತ್ರಿಲೋಕ್ ಜೈನ್ ನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾನೆ.

ನಂತರ ಈತ ಹೃದಯಾಘಾತದಿಂದ ಸಾವು ಕಂಡುರುವುದು ಬೆಳಕಿಗೆ ಬಂದಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement