Court news| ಹೆಚ್ಚು ಓಟರ್ ಐಡಿ ಹೊಂದಿದ ಆರೋಪ- ನಟ ಪ್ರಕಾಶ್ ರಾಜ್ ಗೆ ಜಾಮೀನುರಹಿತ ವಾರೆಂಟ್ ಜಾರಿ
ಬೆಂಗಳೂರು :- ಸದಾ ವಿವಾದದಲ್ಲೇ ಕಾಲಕಳೆಯುತ್ತಿರುವ ಎಡಪಂಥೀಯ ನಟ ಪ್ರಕಾಶ ರಾಜ್ ವಿವಿಧ ರಾಜ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ಮತದಾರರ ಗುರುತಿನ ಚೀಟಿ ಹೊಂದಿದ ಆರೋಪದಡಿ ಬೆಂಗಳೂರಿನ 48 ನೇ ACJM (ಅಡಿಷಿನಲ್ ಚೀಫ್ ಜುಡೀಷಿಯಲ್ ಮ್ಯಾಜಿಸ್ಟ್ರೇಟ್) ನ್ಯಾಯಾಲಯವು ಜಾಮೀನು ರಹಿತ (NBW) ವಾರೆಂಟ್ ಆದೇಶ ಹೊರಡಿಸಿದೆ.
ಇದನ್ನೂ ಓದಿ:-News impact |ಉತ್ತರ ಕನ್ನಡ ಶಾಲೆಗಳಿಗೆ ಸರಬರಾಜಾಗುವ ಆಹಾರ ಪದಾರ್ಥ ಗಳು ಕಳಪೆ ,ಪರೀಕ್ಷೆಯಿಂದ ದೃಢ
ನಾಲ್ಕು ರಾಜ್ಯದ ಓಟರ್ ಐಡಿ ಹೊಂದಿರುವ ಆರೋಪ ವಕೀಲ ದಿಲೀಪ್ ಕುಮಾರ್ ಎಂಬುವವರು 2019 ರಲ್ಲಿ ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕಾಶ್ ರಾಜ್ ವಿರುದ್ಧ ನಾಲ್ಕು ರಾಜ್ಯದ ಓಟರ್ ಐಡಿ ಹೊಂದಿದ ಕುರಿತು ದೂರು ದಾಖಲಿಸಿದ್ದರು.
ಪ್ರಕಾಶ್ ರಾಜ್ ಕರ್ನಾಟಕ,ತಮಿಳುನಾಡು,ತೆಲಂಗಾಣ ಸೇರಿದಂತೆ ದೇಶದ ಒಟ್ಟು ನಾಲ್ಕುರಾಜ್ಯದಲ್ಲಿ ಮತದಾರರ ಚೀಟಿ ( voter ID) ಹೊಂದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು.
ಭಾರತೀಯ ಚುನಾವಣಾ ಆಯೋಗದ ನಿಯಮದ ಪ್ರಕಾರ ದೇಶದ ಯಾವುದೇ ನಾಗರೀಕರಿಗೆ ಕೇವಲ ಒಂದೇ ಒಂದು ಸ್ಥಳದಲ್ಲಿ ಮತದಾರರಾಗಿ ನೊಂದಾಯಿಸಿಕೊಳ್ಳಲು ಆವಕಾಶ ಇರುತ್ತದೆ.ಈ ನಿಯಮವನ್ನು ಉಲ್ಲಂಘಿಸಿ ಪ್ರಕಾಶ್ ರಾಜ್ ಓಟರ್ ಐಡಿ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ.
ವಾರೆಂಟ್ ಏಕೆ?
ದೂರು ದಾಖಲಾದ ಆರಂಭದಲ್ಲಿ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದಿದ್ದಾಗ ,ದೂರುದಾರರು ಬೆಂಗಳೂರು ಕಮಿಷಿನರ್ ಹಾಗೂ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಅಲ್ಲಿಯೂ ಸೂಕ್ತ ಪ್ರತಿಕ್ರಿಯೆ ಸಿಗದ ಕಾರಣ ನ್ಯಾಯಾಲಯದ ಮೊರೆ ಹೋಗಿದ್ದರು.
ಇದನ್ನೂ ಓದಿ:-Arecanut medicines ಅಡಿಕೆ ಕ್ಯಾನ್ಸರ್ ಕಾರಕ ಎನ್ನುವವರಿಗೆ ಇಲ್ಲಿದೆ ಅದರ ಔಷಧೀಯ ಗುಣ
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಈ ಹಿಂದೆ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಹಾಜುರಾಗುವಂತೆ ಎರಡುಬಾರಿ ಸಮನ್ಸ್ ಜಾರಿಮಾಡಿತ್ತು.
ಆದರೂ ನಟ ಪ್ರಕಾಶ್ ರಾಜ್ (actor prakash raj) ಹಾಜುರಾಗದೇ ಇರುವುದರಿಂದ ಇದೀಗ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದ್ದು ಬಂಧಿಸಿ ಕರೆತರೆಲು ಸೂಚಿಸಿದೆ.
