Mundgod| ರೌಡಿಶೀಟರ್ ದರ್ಗಾವಾಲೆ ಹತ್ಯೆ ಪ್ರಕರಣ-11 ಆರೋಪಿಗಳ ಬಂಧನ.
ಕಾರವಾರ :- ಮೀಟರ್ ಬಡ್ಡಿದಂಧೆ ಕಿಂಗ್ ಪಿನ್ ರೌಡಿ ಶೀಟರ್ ಅಹ್ಮದ್ ದರ್ಗಾವಾಲೆ ಹತ್ಯೆ ಪ್ರಕರಣದಲ್ಲಿ ಮುಂಡಗೋಡು (mundgod) ಪೊಲೀಸರು ಒಟ್ಟು ಹನ್ನೊಂದು ಆರೋಪಿಗಳನ್ನ ಬಂಧನಮಾಡಿ ಹೆಡೆಮುರಿ ಕಟ್ಟಿದ್ದಾರೆ.
ಮೂರು ಪಿಸ್ತೂಲ್, ವಾಹನ ಸೇರಿದಂತೆ ಪ್ರಮುಖ ವಸ್ತುಗಳು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ:-Mundgod| ಮೀಟರ್ ಬಡ್ಡಿದಂಧೆ ಕಿಂಗ್ ಪಿನ್ ಜಮೀರ್ ಹತ್ಯೆ ಪ್ರಕರಣ – ಮೂರು ಪಿಸ್ತೊಲ್ ವಶಕ್ಕೆ!
ಏಪ್ರಿಲ್ 25, 2026 ರ ರಾತ್ರಿ 11 ಗಂಟೆಯ ಸುಮಾರಿಗೆ ಮುಂಡಗೋಡು ಬಸ್ ನಿಲ್ದಾಣದ ಎದುರಿನ ಅಂಬಿಕಾ ಹೋಟೆಲ್ ನಲ್ಲಿ ಕಾರದಪುಡಿ ಎರಚಿ ಹತ್ಯೆ ಮಾಡಲಾಗಿತ್ತು.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಎಸ್.ಪಿ ದೀಪನ್ ರವರು ವಿಶೇಷ ತಂಡ ರಚಿಸಿ ಈ ಪ್ರಕರಣದಲ್ಲಿ 11 ಆರೋಪಿಗಳನ್ನ ಬಂಧಿಸಿದ್ದಾರೆ.
ಇದನ್ನೂ ಓದಿ:-Mundgod|ಲಂಚ ಪಡೆಯುವಾಗ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ
ಬಂಧಿತರಲ್ಲಿ ಮುಂಡಗೋಡಿನ ತಸ್ವೀರ ಅಹಮ್ಮದ,ಮಲ್ಲಿಕ ಜಹಾನ್, ಮಂಜುನಾಥ ನಾಗೇಂದ್ರ ಕಾಜಗಾರ ,ಶ್ರೀಕಾಂತ ,ಮಹಮ್ಮದ ಸಾಧಿಕ್,ಅಸ್ಕರಲಿ ಮತ್ತೂಮ್,ಸಾಹಿಲ್ ಬಾಬಾಬುಡನ್ ನಂದಿಗಟ್ಟಿ , ರಾಜಶೇಖರ ಕಿರಣ್ಣನವರ್, ಧಾರವಾಡದ ಮಂಜುನಾಥ ವಿಷ್ಣು ಬೆಳಗಾಂವ, ಅಭಿಷೇಕ ಮಲ್ಲಿಕಾರ್ಜುನ ಬಡಶೆಟ್ಟಿ ,ದೀಪಕ ನಾಗರಾಜ ನವಲೆ,ದಿಲ್‌ರಾಜ ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿತರ ವಿರುದ್ಧ ಕೋಕಾ ಕಾಯ್ದೆಯನ್ನು ಅಳವಡಿಸಿಕೊಂಡು, 1 ರಿಂದ 11ನೇ ಆರೋಪಿತರನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ವಿಶೇಷ ಕೋಕಾ ನ್ಯಾಯಾಲಯ, ಬೆಳಗಾವಿ ಇವರ ಮುಂದೆ ಹಾಜರುಪಡಿಸಿ, ನ್ಯಾಯಾಲಯದ ಆದೇಶದಂತೆ ಮುಂದಿನ ತನಿಖೆ ಕೈಗೊಳ್ಳಲಾಗಿದೆ. ಸದರಿ ಪ್ರಕರಣವು ತನಿಖಾಧಿಕಾರಿಯಾದ ಪೊಲೀಸ್ ಉಪಾಧೀಕ್ಷಕರು ಶಿರಸಿ ಉಪವಿಭಾಗ ರವರ ನೇತ್ರತ್ವದಲ್ಲಿ ತನಿಖೆ ಮುಂದುವರೆದಿದೆ.
ಇದನ್ನೂ ಓದಿ:-Mundgod|ಬಿಸಿಲ ಬೇಗೆಗೆ ಮಂಗನ ದಾಹ ತೀರಿಸಿದ ಎಸೆದ ಬಾಟಲ್ ನೀರು!ವಿಡಿಯೋ ನೋಡಿ
ಸದರಿ ಪ್ರಕರಣದ ಆರೋಪಿತರು ಈ ಹಿಂದೆ ರೌಡಿಸಂ, ಕೊಲೆ, ಕೊಲೆ ಯತ್ನ, ಡಕಾಯಿತಿ, ಸುಲಿಗೆ ಸೇರಿದಂತೆ ವಿವಿಧ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಪುನರಾವರ್ತಿತ ಅಪರಾಧಿಗಳಾಗಿದ್ದಾರೆ. ಇಂತಹ ಅಪರಾಧಿಕ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗಳು ಸಂಘಟಿತವಾಗಿ ಕಾರ್ಯನಿರ್ವಹಿಸಿ ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸುವ ಯಾವುದೇ ಪ್ರಯತ್ನವನ್ನು ಪೊಲೀಸ್ ಇಲಾಖೆ ಸಹಿಸುವುದಿಲ್ಲ. ಸಾರ್ವಜನಿಕ ಶಾಂತಿ, ಸುವ್ಯವಸ್ಥೆ ಹಾಗೂ ಸುರಕ್ಷತೆಗೆ ಧಕ್ಕೆ ಉಂಟುಮಾಡುವವರ ವಿರುದ್ಧ ಕಾನೂನಿನಡಿಯಲ್ಲಿ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಚಟುವಟಿಕೆಗಳ ಮೇಲೆ ನಿರಂತರ ಹಾಗೂ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದ್ದು, ಕಾನೂನುಬಾಹಿರ ಚಟುವಟಿಕೆಗಳಿಗೆ ಸಂಪೂರ್ಣ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಬದ್ಧವಾಗಿದೆ ಎಂದು ಎಸ್.ಪಿ ದೀಪನ್ ತಿಳಿಸಿದ್ದಾರೆ.
