Mundgod|ಬಿಸಿಲ ಬೇಗೆಗೆ ಮಂಗನ ದಾಹ ತೀರಿಸಿದ ಎಸೆದ ಬಾಟಲ್ ನೀರು!ವಿಡಿಯೋ ನೋಡಿ

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಬಿಸಿಲಿನ ತಾಪಕ್ಕೆ ಬಸವಳಿದ ಮಂಗವೊಂದು ಎಸೆದ ನೀರಿನ ಬಾಟಲಿಯಿಂದ ದಾಹ ತೀರಿಸಿಕೊಂಡ ಮನಕಲಕುವ ಘಟನೆ ಟಿಬೇಟಿಯನ್ ಕಾಲೋನಿಯಲ್ಲಿ ನಡೆದಿದೆ.
ಬಿಸಿಲಿನ ತಾಪಕ್ಕೆ ಬಸವಳಿದ ಮಂಗವೊಂದು ಮುಂಡಗೋಡಿನ ಟಿಬೇಟಿಯನ್ ಕಾಲೋನಿಯಲ್ಲಿ ಎಸೆದ ನೀರಿನ ಬಾಟಲಿಯಿಂದ ನೀರು ಕುಡಿಯುತ್ತಿರುವ ದೃಶ್ಯ. ಬಿಸಿಲಿನ ತಾಪಕ್ಕೆ ಬಸವಳಿದ ಮಂಗವೊಂದು ಮುಂಡಗೋಡಿನ ಟಿಬೇಟಿಯನ್ ಕಾಲೋನಿಯಲ್ಲಿ ಎಸೆದ ನೀರಿನ ಬಾಟಲಿಯಿಂದ ನೀರು ಕುಡಿಯುತ್ತಿರುವ ದೃಶ್ಯ.
Mundgod|ಬಿಸಿಲ ಬೇಗೆಗೆ ಮಂಗನ ದಾಹ ತೀರಿಸಿದ ಎಸೆದ ಬಾಟಲ್ ನೀರು!

Mundgod|ಬಿಸಿಲ ಬೇಗೆಗೆ ಮಂಗನ ದಾಹ ತೀರಿಸಿದ ಎಸೆದ ಬಾಟಲ್ ನೀರು!ವಿಡಿಯೋ ನೋಡಿ

ಮುಂಡಗೋಡು:- ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಬಿಸಿಲು ಕೇವಲ ಮನುಷ್ಯರನ್ನಷ್ಟೇ ಅಲ್ಲ ,ಪ್ರಾಣಿಗಳಿಗೂ ಬಿಡದೇ ಕಾಡುತ್ತಿದೆ. ಒಂದೆಡೆ ನದಿಮೂಲಗಳು ಬತ್ತಿಹೋಗಿ ,ಬಾವಿಗಳ ಜಲ ಬರಿದಾಗುತ್ತಿದೆ. ಇತ್ತ ಕುಡಿಯುವ ನೀರಿಗೆ ಹಾಹಾಕಾರ ಮನುಷ್ಯರ ಜೊತೆ ಪ್ರಾಣಿಗಳಿಗೂ ಕಾಡುತ್ತಿದೆ. ಹೌದು ಬಿಸಿಲ ಹೊಡೆತಕ್ಕೆ ಬಸವಳಿದಿದ್ದ ಮಂಗವೊಂದು ಯಾರೋ ಅರ್ಧ ಕುಡಿದು ಎಸೆದುಹೋದ ಬಾಟಲ್ ಅನ್ನ ಮಂಗವೊಂದು ತೆಗೆದುಕೊಂಡು ಅದರಲ್ಲಿದ್ದ ನೀರನ್ನ ಕುಡಿಯುವ ಮನಕಲಕುವ ಘಟನೆ ಮುಂಡಗೋಡಿನ (mundgod) ಟಿಬೇಟಿಯನ್ ಕಾಲೋನಿಯಲ್ಲಿ ನಡೆದಿದೆ.

Advertisement

ಇದನ್ನೂ ಓದಿ:-Mundgod| ನಿಲ್ಲದ ಮೀಟರ್ ಬಡ್ಡಿದಂಧೆ-ಭಯಕ್ಕೆ ದೂರು ಕೊಡಲು ಬರೋದಿಲ್ಲ ಜನ 

ಮುನುಷ್ಯರಾದರೇ ದುಡ್ಡು ಕೊಟ್ಟು ನೀರು ಕುಡಿತಾರೆ.ಆದ್ರೆ ಮೂಕ ಪ್ರಾಣಿಗಳು ಏನು ಮಾಡಬೇಕು? ಮನಷ್ಯನಾದ ನಾವುಗಳು ಎಲ್ಲವನ್ನೂ ಒಂದೊಂದಾಗಿ ಕಸಿಯುತಿದ್ದೇವೆ. ಅರಣ್ಯ ಇಲಾಖೆ ಕೆಲವು ಕಡೆ ನೀರಿನ ಮೂಲಗಳನ್ನು ಪ್ರಾಣಿ ,ಪಕ್ಷಿಗಳಿಗಾಗಿ ಮಾಡಿದೆ.ಆದರೇ ಮುಂಡಗೋಡು ನಗರದಂತಹ ಊರುಗಳಲ್ಲಿ ಈರೀತಿಯ ವ್ಯವಸ್ಥೆ ಇಲ್ಲ. ಮೂಕ ಪ್ರಾಣಿಗಳು ನೀರಿಗಾಗಿ ಒದ್ದಾಡಬೇಕಿದೆ. ಸ್ಥಳೀಯ ಆಡಳಿತ ಹಾಗೂ ಅರಣ್ಯ ಇಲಾಖೆ ಇಂತಹ ಮೂಕ ಪ್ರಾಣಿಗಳಿಗೆ ಬೇಸಿಗೆಯಲ್ಲಿ ನೀರಿನ ವ್ಯವಸ್ತೆ ಮಾಡಿದಲ್ಲಿ ಇದರ ಜೀವವೂ ತಣ್ಣಗಿರುತ್ತದೆ ಅಲ್ಲವೇ ?

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement