Mundgod| ನಿಲ್ಲದ ಮೀಟರ್ ಬಡ್ಡಿದಂಧೆ-ಭಯಕ್ಕೆ ದೂರು ಕೊಡಲು ಬರೋದಿಲ್ಲ ಜನ .
Mundgodu:- ರಾಜ್ಯದಲ್ಲಿ ಮೀಟರ್ ಬಡ್ಡಿದಂಧೆ ಹೆಚ್ಚಾದ ಹಿನ್ನಲೆಯಲ್ಲಿ ಕಠಿಣ ಕಾನೂನನ್ನ ತಂದಿದೆ. ಮೀಟರ್ ಬಡ್ಡಿ ದಂಧೆಗೆ ಬಡವರೇ ಬಲಿಪಶುವಾಗುತಿದ್ದಾರೆ. ಈ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರ 2025ರಲ್ಲಿ 4 ಪ್ರಮುಖ ಬಿಲ್‌ಗಳನ್ನು ಪಾಸ್ ಮಾಡಿದೆ. ಇದರಲ್ಲಿ Micro Loan & Small Loan (Prevention of Coercive Actions) Bill,Pawn Brokers Amendment,Money Lenders Amendment,Exorbitant Interest Amendment ಆಕ್ಟ ಗಳನ್ನ ಜಾರಿಗೆ ತಂದಿದೆ.
Mundgod| ನೀರಿಗೆ ಹಾಹಾಕಾರ ವಾರವಾದ್ರೂ ಸ್ನಾನ ಮಾಡಿಲ್ಲ ಅಂದ್ರು ಗ್ರಾಮಸ್ತರು.
ಈ ಕಾನೂನಿನ ಪ್ರಕಾರ ಬಲವಂತವಾದ ವಸೂಲಿಗೆ ಹತ್ತು ವರ್ಷ ಜೈಲು ಹಾಗೂ ಐದು ಲಕ್ಷ ದವರೆಗೆ ದಂಡ ವಿಧಿಸುವ ಅವಕಾಶ ಮಾಡಿಕೊಟ್ಟಿದೆ. ಇನ್ನು ಲೈಸೆನ್ಸ್ ಇಲ್ಲದೇ ಸಾಲ ನೀಡುವುದು ಕೂಡ ಅಪರಾಧವಾಗಿದೆ.ಬಡ್ಡಿದರ ಕೂಡ ನಿಷೇಧ ಮಾಡಲಾಗಿದೆ.
ಈ ಹಿಂದೆ ಮುಂಡಗೋಡು(mundgod),ಹಳಿಯಾಳ,ದಾಂಡೇಲಿ ಭಾಗದಲ್ಲಿ ಮೀಟರ್ ಬಡ್ಡಿದಂತೆ ಹೆಚ್ಚಾಗಿತ್ತು. ಹಿಂದಿನ ಎಸ್.ಪಿ ಎಂ.ನಾರಾಯಣ್ ರವರು ಮೀಟರ್ ಬಡ್ಡಿ ದಂಧೆ ಕೋರರ ವಿರುದ್ಧ ಪ್ರಕರಣ ದಾಖಲಿಸಿದರು. ಇನ್ನು ಜನರು ಹೆದರದೇ ಮೀಟರ್ ಬಡ್ಡಿ ದಂಧೆಕೋರರ ವಿರುದ್ಧ ದೂರು ನೀಡಿದರು.ಇದರ ಪರಿಣಾಮ ಮೀಟರ್ ಬಡ್ಡಿದಂಧೆ ಇಳಿಮುಖವಾಗಿತ್ತು.
ಮೀಟರ್ ಬಡ್ಡಿದಂಧೆ ಕಿಂಗ್ ಪಿನ್ ಜಮೀರ್ ದರ್ಗಾವಾಲೆ ಹಳಿಯಾಳ,ಮುಂಡಗೋಡು ಸೇರಿದಂತೆ ಹಲವು ಕಡೆ ತಮ್ಮ ಹುಡುಗರನ್ನ ಬಿಟ್ಟು ಬಡ್ಡಿದಂಧೆ ಮಾಡಿಸುತಿದ್ದನು. ಅಂದಿನ ಎಸ್.ಪಿ ಎಂ. ನಾರಾಯಣ್ ಮುಂಡಗೋಡು ಒಂದರಲ್ಲೇ 17 ಜನ ಪುಡಿ ರೌಡಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು.250 ವಿವಿಧ ಖಾತೆಗಳ ಚಕ್ ಸಹ ವಶಕ್ಕೆ ಪಡುಸಿಕೊಳ್ಳುವ ಜೊತೆಗೆ 37 ಲಕ್ಷ ಹಣ ಸಹ ವಶಕ್ಕೆ ಪಡೆಯಲಾಗಿತ್ತು. ಇದಲ್ಲದೇ ಜಿಲ್ಲೆಯ ಹಲವು Finance ವಿರುದ್ಧವೂ ಪ್ರಕರಣ ದಾಖಲಿಸಿದ್ದರು.
ಬಡ್ಡಿ ದಂಧೆ ಕಿಂಗ್ ಪಿನ್ ಜಮೀರ್ ದರ್ಗಾವಾಲೆ ಹತ್ಯೆ .
ಇನ್ನು ಮುಂಡಗೋಡಿನ ಮೀಟರ್ ಬಡ್ಡಿದಂಧೆ ಕಿಂಗ್ ಪಿನ್ ಜಮೀರ್ ನನ್ನ ಕೆಲವು ದಿನದ ಹಿಂದೆ ಹತ್ಯೆ ಮಾಡಲಾಗಿದೆ. ವ್ಯವಹಾರದ ವಿಷಯದಲ್ಲೇ ಹತ್ಯೆ ನಡೆದುಹೋಗಿದೆ ಎನ್ನಲಾಗಿದೆ.
ಆದರೇ ಈತನ ಹತ್ಯೆ ಆಗುತಿದ್ದಂತೆ ಈತ ಮೀಟರ್ ಬಡ್ಡಿ ನೀಡಿ ಕಾಲಿ ಚಕ್ ಪಡೆದ 300 ಕ್ಕೂ ಹೆಚ್ಚು ಜನರ ಮೇಲೆ ಚಕ್ ಬೌನ್ಸ್ ಪ್ರಕರಣ ದಾಖಲಿಸಿರುವುದು ಬೆಳೆಕಿಗೆ ಬಂದಿದೆ.
ಕೈ ಚಲ್ಲಿ ಕುಳಿತ ಪೊಲೀಸ್ ಇಲಾಖೆ .
ಎಸ್.ಪಿ ಎಂ.ನಾರಾಯಣ್ ರವರ ವರ್ಗಾವಣೆ ಆಗುತಿದ್ದಂತೆ ದೀಪನ್ ರವರು ಉತ್ತರ ಕನ್ನಡ ಜಿಲ್ಲೆಯ ಎಸ್.ಪಿ ಆಗಿ ಅಧಿಕಾರ ವಹಿಸಿಕೊಂಡರು. ಮೊದಲು ಟ್ರಾಫಿಕ್ ವೈಲೇಶನ್ , ಗಾಂಜಾ ವ್ಯಸನ ಮುಕ್ತ ಕಾರ್ಯಾಚರಣೆಗೆ ಎಸ್.ಪಿ ದೀಪನ್ ಹೆಚ್ಚು ಒತ್ತು ನೀಡಿದರು. ಆದರೇ ಮೀಟರ್ ಬಡ್ಡಿದಂಧೆ ,ಮರಳು ಮಾಫಿಯಾ,ಮಧ್ಯ ಮಾಫಿಯಾ ಗೋಜಿಗೆ ಹೋಗಲಿಲ್ಲ.
ಇದರ ಪರಿಣಾಮ ಮುಂಡಗೋಡು ಸೇರಿದಂತೆ ಜಿಲ್ಲೆಯ ಹಲವು ಭಾಗದಲ್ಲಿ ಮೀಟರ್ ಬಡ್ಡಿದಂಧೆ ಮತ್ತೆ ಚಿಗುರಿಕೊಂಡಿತು.
ಪೊಲೀಸರು ಸಹ ಮೀಟರ್ ಬಡ್ಡಿ ದಂಧೆ ಕೋರರ ವಿರುದ್ಧ ತಟಸ್ತ ನೀತಿ ಅನುಸರಿಸಿದ್ದರಿಂದ ಮುಂಡಗೋಡು ಭಾಗದಲ್ಲಿ ಮತ್ತೆ ಮೀಟರ್ ಬಡ್ಡಿ ದಂಧೆ ಚಿಗುರಿಕೊಂಡಿತು.
ಮಹಿಳೆಗೆ ಸಾಲ ಕೊಟ್ಟ FINANCE| ಮಧ್ಯರಾತ್ರಿ ಮನೆಗೆ ವಸೂಲಿಗೆ ಬಂದವರಿಗೆ ಬಿತ್ತು ಗೂಸ
ಮುಂಡಗೋಡು ಭಾಗದಲ್ಲಿ ಒಂದು ಲಕ್ಷ ಸಾಲ ನೀಡಿದರೇ 25 ಸಾವಿರ ಹಣ ಮೊದಲೇ ಕೊಟ್ಟ ಹಣದಲ್ಲಿ ತೆಗೆದುಕೊಳ್ಳುತ್ತಾರೆ. ಆದರೇ ಸಾಲದ ಬಡ್ಡಿ ಹಣ ಒಂದು ಲಕ್ಷಕ್ಕೆ ಕಟ್ಟಬೇಕು. ನೂರು ರುಪಾಯಿಗೆ ಹತ್ತು ರೂ ಬಡ್ಡಿ ಇದ್ದು ಇದು ತಿಂಗಳಿಗೆ ಸರಿಯಾಗಿ ಕಟ್ಟಬೇಕು. ಇನ್ನು ನಿಗದಿ ಸಮಯದಲ್ಲಿ ಕಟ್ಟದಿದ್ದರೇ ಅದು ಡಬಲ್ ಆಗುತ್ತದೆ. ಡಬಲ್ ಆದಾಗಲೂ ಕಟ್ಟದಿದ್ದರೆ ಮನೆಗೆ ಬರುವ ರೌಡಿಗಳು ಸಾಲ ಪಡೆದವನ ಬೆವರು ಇಳಿಸುತ್ತಾರೆ.ಕೆಲವೊಮ್ಮ ಆತನನ್ನು ಮನೆಯಲ್ಲಿ ಕೂಡಿಹಾಕಿ ಹೊಡೆದ ಘಟನೆಗಳೂ ನಡೆದಿದೆ. ಇನ್ನು ಇವರ ವಿರುದ್ಧ ಠಾಣೆಗೆ ದೂರು ಕೊಡಲು ಹೆದರುವ ಸಾಲ ಪಡೆದ ಜನ ಮೀಟರ್ ಬಡ್ಡಿ ದಂಧೆಕೋರರ ಟಾರ್ಚರ್ ಗೆ ದುಪ್ಪಟ್ಟು ಹಣ ಕಟ್ಟಿ ಕೊನೆಗೆ ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ಸಹ ನಡೆದಿದೆ.
ಮೀಟರ್ ಬಡ್ಡಿ ದಂಧೆಗೆ ಮನೆ ಬಿಟ್ಟಿದ್ದ ಜನ!
ದಾಂಡೇಲಿಯಲ್ಲಿ(dandeli) ಚಿಕ್ಕ ,ಚಿಕ್ಕ ಮೊತ್ತಗಳಿಗೆ ಬಡ್ಡಿ ಹೆಚ್ಚು ಹಾಕುತಿದ್ದು ಬಡ್ಡಿ ಕಟ್ಟಿ ನಲುಗಿದ ಹಲವು ಕುಟುಂಬಗಳು ಫೈನಾನ್ಸ್ ನವರ ಕಾಟಕ್ಕೆ ಮನೆಬಿಟ್ಟಿದ್ದರು. ದಾಂಡೇಲಿಯ ಹಸೀನಾ ಶೇಖ್ ಎಂಬುವವರು ಫೈನಾನ್ಸ್ ಒಂದರಲ್ಲಿ 20 ಸಾವಿರ ಸಾಲ ಪಡೆದಿದ್ದು , ಶೂರಿಟಿಗಾಗಿ ಕಾಲಿ ಚಕ್ ಸಹ ನೀಡಿದ್ದಾರೆ. ಆದ್ರೆ ಫೈನಾನ್ಸ್ ರವರು ಅಸಲು ,ಬಡ್ಡಿ ಎಲ್ಲಾ ಕಟ್ಟಿಸಿಕೊಂಡಿದ್ದರೂ ಸಾಲ ಕಟ್ಟುವಂತೆ ಪೀಡಿಸಿ ಕೊಟ್ಟ ಕಾಲಿಚಕ್ ನನ್ನು ಕೋರ್ಟ ಗೆ ಹಾಕುವುದಾಗಿ ಹೆದರಿಸಿದ್ದರು,ಈ ಕಾರಣದಿಂದ ಮನೆಬಿಟ್ಟಿ ಬೇರೆ ಊರಿನಲ್ಲಿ ಇದ್ದ ಮಹಿಳೆ ತಮ್ಮ ನೋವನ್ನ ತೋಡಿಕೊಂಡಿದ್ದರು.
ಇದೀಗ ಪೊಲೀಸರ ಹೆದರಿಕೆಯೂ ಇಲ್ಲ ,ಕಾನೂನಿನ ಅಂಕುಶವೂ ಇಲ್ಲ ಎನ್ನುವಂತೆ ಮೀಟರ್ ಬಡ್ಡಿದಂಧೆ ಮತ್ತೆ ಚಿಗುರಿದ್ದು ಅಪರಾಧ ಕೃತ್ಯದಲ್ಲಿ ತೊಡಗಿದೆ. ಇನ್ನಾದರೂ ಎಸ್.ಪಿ ದೀಪನ್ ರವರು ಮೀಟರ್ ಬಡ್ಡಿ ದಂಧೆಗೆ ಬ್ರೇಕ್ ಹಾಕುತ್ತಾರ ಎಂಬುದನ್ನ ಕಾದು ನೋಡಬೇಕಿದೆ.
