Haliyala police news

ಮಹಿಳೆಗೆ ಸಾಲ ಕೊಟ್ಟ FINANCE| ಮಧ್ಯರಾತ್ರಿ ಮನೆಗೆ ವಸೂಲಿಗೆ ಬಂದವರಿಗೆ ಬಿತ್ತು ಗೂಸ

92

Haliyala news :- ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ನಗರದಲ್ಲಿ ಪೈನಾನ್ಸ್ ಸಂಸ್ಥೆಯೊಂದು ಮಹಿಳೆಗೆ ನೀಡಿದ ಸಾಲ ವಸೂಲಿ ಮಾಡಲು ಮಧ್ಯರಾತ್ರಿ ಮನೆಗೆ ತೆರಳಿ ಸ್ಥಳೀಯ ಜನರಿಂದ ಗೂಸ ತಿಂದ ಘಟನೆ ನಡೆದಿದೆ.

ಹೌದು ಧಾರವಾಡ (Darwada) ಜಿಲ್ಲೆಯ ಕಲಗಟಗಿ ಯ ಭಾರತ್ ಪೈನಾನ್ಸ್ ಹಳಿಯಾಳ ನಗರದ ಮೇದಾರಗಲ್ಲಿಯ ಹಸೀನ ಎಂಬುವವರಿಗೆ ಒಂದು ವರ್ಷದ ಹಿಂದೆ ಸಾಲ ನೀಡಿತ್ತು.

ಈ ಸಾಲದ ಕಂತು ತುಂಬದ ಹಿನ್ನಲೆಯಲ್ಲಿ ಪೈನಾನ್ಸ್ ನ ಮ್ಯಾನೇಜರ್ ದ್ಯಾಮಜ್ಜ ಎಂಬಾತ ತನ್ನ ಸಿಬ್ಬಂದಿಯೊಂದಿಗೆ ಹಸೀನಾ ಮನೆಗೆ ಬಂದು ಸಾಲದ ಕಂತು ತುಂಬುವಂತೆ ಸೂಚಿಸಿದ್ದು ಎರಡು ದಿನ ಕಾಲಾವಕಾಶ ಕೇಳದ್ದರು. ಇದಕ್ಕೆ ಒಪ್ಪಿದ್ದ ಮ್ಯಾನೇಜರ್ ಮರಳಿದ್ದರು.

ಆದರೇ ಈ ಮ್ಯಾನೇಜರ್ ಪುನಹಾ ಮಧ್ಯರಾತ್ರಿಯಲ್ಲಿ ಇಬ್ಬರು ಸಿಬ್ಬಂದಿಗಳೊಂದಿಗೆ ಬಂದು ಹಸೀನಾ ರವರಿಗೆ ಹಣ ಕೊಡುವಂತೆ ಪೀಡಿಸಿದ್ದಾರೆ. ಇದಲ್ಲದೇ ಮದ್ಯ ಸೇವಿಸಿ ಬಂದು ಗಲಾಟೆ ಮಾಡಿದ್ದರಿಂದ ಸ್ಥಳೀಯರು ಈತನಿಗೆ ಗೂಸ ನೀಡಿ ಕಳುಹಿಸಿದ್ದು, ಮಹಿಳೆ ಜೊತೆ ಮಧ್ಯರಾತ್ರಿ ಅಸಭ್ಯ ವರ್ತನೆ ತೋರಿದ್ದರಿಂದ ಹಸೀನಾ ರವರು ಹಳಿಯಾಳ ಠಾಣೆಯಲ್ಲಿ ಮ್ಯಾನೇಜರ್ ಸೇರಿ ಮೂವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!