ಕಾರವಾರ:- ಸಿದ್ದಾಪುರ(siddapura) ತಾಲೂಕಿನ ಗೋಳಿಕೈ ಗ್ರಾಮದ ಕಳೂರಿನ ಬೈರಾ ರಾಮನಾಯ್ಕ ಇವರ ಮನೆಯ ಹಿಂಭಾಗದಲ್ಲಿ ಆಗಷ್ಟೇ ತೆಗೆದ ಆರು ತಿಂಗಳ ಗಂಡು ಮಗುವಿನ ದೇಹವನ್ನು ಎಸೆದುಹೋಗಲಾಗಿತ್ತು. ಈ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆದ್ರೆ ಇದೀಗ ಈ ಮಗುವಿನ ಬಗ್ಗೆ ಹಲವು ಸತ್ಯಾಸತ್ಯೆತೆಗಳ ಜೊತೆ ಗಾಳಿ ಸುದ್ದಿ ಸಹ ಹರಿದಾಡುತಿದ್ದು , ಸಿದ್ದಾಪುರ ಮೂಲದ ಸದರಿ ಹಳಿಯಾಳ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ Constable ಕರಿನಾಗ (ಹೆಸರು ಬದಲಿಸಲಾಗಿದೆ)ನ ಅಕ್ರಮ ಸಂಬಂಧಕ್ಕೆ ಹುಟ್ಟಿದ ಮಗು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:-SIRSI| ತಪ್ಪು ಮಾಡಿದ್ದು ಮಗ-ಅಪ್ಪನಿಗೆ ಕೊಡ್ತು COURT ಶಿಕ್ಷೆ?
ಈ “ಕರಿ ನಾಗ” ಈ ಹಿಂದೆ ತನ್ನ ಸ್ನೇಹಿತನ ಹೆಂಡತಿಯೊಂದಿಗೆ ಅಕ್ರಮ ಸಂಬಂಧ ಬೆಳಸಿ ಸ್ನೇಹ ಕ್ಕೆ ದ್ರೋಹ ಮಾಡಿ ಆಕೆಗೆ ಎಂಟು ವರ್ಷದ ಮಗನಿದ್ದರೂ ನಿನ್ನ ಮದುವೆಯಾಗುವೆ ಎಂದು ನಂಬಿಸಿ ಡೈವರ್ಸ್ ಕೊಡಿಸಿದ್ದ. ಇನ್ನು ಆ ಕೆಟ್ಟ ಹೆಂಗಸು ತಾನು ಹೆತ್ತ ಮಗು ಬೇಡ ಎಂದು ಹಳೆ ಗಂಡನ ಬಳಿ ಬಿಟ್ಟು ಸಿದ್ದಾಪುರ ಸಿಟಿ ಸೇರಿದ್ದಳು.
ಇನ್ನು ಹಳಿಯಾಳದಲ್ಲಿ ಪೊಲೀಸ್ (Haliyala police) ಆಗಿರುವ ಕರಿನಾಗ ಹುತ್ತ ಹುಡುಕಿ ಸಿದ್ದಾಪಯರಕ್ಕೆ ಬಂದು ಬಿಸಿ ತಣಿಸಿಕೊಂಡು ಹೋಗುತಿದ್ದ. ಇದರ ಫಲವಾಗಿ ಆಕೆಯ ಹೊಟ್ಟೆಯಲ್ಲಿ ಕರಿನಾಗನ ಬೀಜ ಚಿಗುರಿದೆ.
ಇನ್ನು ಕಳ್ಳಾಟದಲ್ಲಿ ಚತುರನಾಗಿರುವ ಈ ಕರಿನಾಗ ಅವಿವಾಹಿತನಾಗಿದ್ದು ಇತ್ತೀಚೆಗೆ ಹೊಸ ಹುಡುಗಿ ಮೋರೆ ನೋಡಿ ಕುತ್ತಿಗೆಗೆ ಮೂರು ಗಂಟು ಹಾಕಿದ್ದಾನೆ. ಹೀಗಾಗಿ ಗಂಡನಿಗೆ ಕೈ ಕೊಟ್ಟು ಮಹಿಳೆಗೆ ಈಗ ಕೈ ಹಿಡಿಯದ ಪೊಲೀಸಪ್ಪನ ಮೇಲೆ ಕೋಪ ಬಂದು ಹೊಟ್ಟೆಯಲ್ಲಿದ್ದ ಆರು ತಿಂಗಳ ಪಿಂಡವನ್ನು ತೆಗೆಸಿ ಈತನ ಮನೆಯ ಮುಂದೆ ಹಾಕಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ:-Dandeli|ಈ ಕಳ್ಳರ ಹಿನ್ನಲೆ ಕೇಳಿ ಪೊಲೀಸರೇ ಸುಸ್ತು! ಯಾರೀ ಕಿರಾತಕರು ಗೊತ್ತಾ?
ಹೀಗಾಗಿ ಸಿದ್ದಾಪುರದ ಉತ್ತರ ಕನ್ನಡ ಜಿಲ್ಲಾ ರೈತ ಸಂಘದ ಅಧ್ಯಕ್ಷ ಈಲಿಯಾಸ್ ಸಾಬ್ ರವರು ಈ ಬಗ್ಗೆ ತನಿಖೆ ಆಗಬೇಕು ಆರೋಪಿ ಸ್ಥಾನದಲ್ಲಿ ಇರುವ ಹಳಿಯಾಳದ ಪೊಲೀಸಪ್ಪನ ಡಿ.ಎನ್.ಎ ಪರೀಕ್ಷೆ ನಡೆಸಿ ಕ್ರಮ ಕೈಗೊಳ್ಳಬೇಕು.ಹಾಗೂ ಹೊಟ್ಟೆಯಲ್ಲಿದ್ದ ಆರು ತಿಂಗಳ ಮಗುವನ್ನು ಅಬಾಶನ್ ಮಾಡಿದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಮನವಿ ಮೂಲಕ ದೂರು ನೀಡಿದ್ದಾರೆ. ಇದಲ್ಲದೇ ಈ ಹಿಂದೆ ಈ ಪೊಲೀಸಪ್ಪನ ಅಕ್ರಮ ಸಂಬಂಧ ಕುರಿತು ವರುಷ್ಟಾಧಿಕಾರಿಗಳಿಗೆ ವಾಟ್ಸ್ ಅಪ್ (WhatsApp ) ಮೂಲಕ ಅಕ್ರಮ ಸಂಬಂಧ ಇರಿಸಿಕೊಂಡಿದ್ದ ಮಹಿಳೆ ಮಾಜಿ ಗಂಡ ದೂರು ನೀಡಿದ್ದರು. ಆದ್ರೆ ಯಾವುದೇ ಕ್ರಮ ಜರುಗಿರಲಿಲ್ಲ. ಹೀಗಾಗಿ ಈಗಲಾದರೂ ತನಿಖೆ ನಡೆಸಿ ತಪ್ಪಿತಸ್ತರಿಗೆ ಶಿಕ್ಷೆ ಆಗಬೇಕು ಎಂದು ರೈತ ಸಂಘದ ಅಧ್ಯಕ್ಷ ಆಗ್ರಹಿಸಿದ್ದಾರೆ.






