Sirsi crime news court order

SIRSI| ತಪ್ಪು ಮಾಡಿದ್ದು ಮಗ-ಅಪ್ಪನಿಗೆ ಕೊಡ್ತು COURT ಶಿಕ್ಷೆ?

165

ಕಾರವಾರ :- ಅಪ್ರಾಪ್ತ ಬಾಲಕನಿಗೆ ದ್ವಿಚಕ್ರ ವಾಹನ ನೀಡಿದ ಕುರಿತು ಶಿರಸಿ ನಗರ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬಾ ನಗರದ ಕೇಶವ್ ಎಂಬುವವರಿಗೆ ಶಿರಸಿಯ ಜೆ.ಎಮ್ .ಎಫ್ .ಸಿ ನ್ಯಾಯಾಲಯದ (JMFC COURT SIRSI )ನ್ಯಾಯಾಧೀಶರಾದ ಶಾರದಾ ದೇವಿ ಹಟ್ಟಿ ರವರು 25 ಸಾವಿರ ದಂಡ ವಿಧಿಸಿದ್ದಾರೆ.

ಘಟನೆ ಏನು?

ಶಿರಸಿ ನಗರ (SIRSI POLICE)ಪೊಲೀಸ್ ಠಾಣೆಯ ವ್ಯಾಪ್ತಿಯ ಐದು ರಸ್ತೆಯಲ್ಲಿ ಮೇ .20 ರಂದು ಮದ್ಯಾಹ್ನದ ವೇಳೆ
ಶಿರಸಿ ನಗರ ಠಾಣೆ ಪಿ.ಎಸ್.ಐ ನಾಗಪ್ಪನವರು ವಾಹನ ತಪಾಸಣೆ ನಡೆಸುತ್ತಿರುವಾಗ ಬಾಲಕನೋರ್ವ ಪಲ್ಸರ್ ಬೈಕ್ ನಲ್ಲಿ ಬಂದಿದ್ದು ದಾಖಲೆ ಪರಿಶೀಲಿಸಿದಾಗ ಈತ ಅಪ್ರಪ್ತನಾಗಿದ್ದು ಡ್ರೈವಿಂಗ್ ಲೇಸೆನ್ಸ್ ಇರದೇ ಇರುವುದು ಪತ್ತೆಯಾಗಿದೆ. ಈ ಕುರಿತು ಅಪ್ರಾಪ್ತ ಬಾಲಕನಿಗೆ ಬೈಕ್ ಸವಾರಿ ಮಾಡಲು ಅವಕಾಶ ಮಾಡಿಕೊಟ್ಟ ಪ್ರಕರಣ ದಾಖಲಿಸಿದ್ದರು.

ಜೂನ್ 11 ರಂದು ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಅಪ್ರಾಪ್ತ ಮಗನಿಗೆ ಬೈಕ್ ಓಡಿಸಲು ನೀಡಿದ ಕುರಿತು ವಿಚಾರಣೆ ನಡೆಸಿ ದಂಡ ವಿಧಿಸಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!