Bhatkal news

Uttrakannada| ಒಂಟಿ ಮನೆ ಮಾಲೀಕರೇ ಎಚ್ಚರ! ಹಗಲಲ್ಲೂ ಮಾಡ್ತಾರೆ ದರೋಡೆ!

77

BHATKAL NEWS:- ಉತ್ತರ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ದೇವಸ್ಥಾನ ,ಅಂಗಡಿಗಳ ಕಳ್ಳತನ ವರದಿಗಳನ್ನ ನೀವು ಕೇಳಿದ್ದೀರ. ರಾತ್ರಿ ವೇಳೆ ಟಾರ್ಗೆಟ್ ಮಾಡುವ ಕಳ್ಳರು ಎಲ್ಲವನ್ನೂ ದೋಚಿ ಪರಾರಿಯಾಗುತಿದ್ದರು. ಆದ್ರೆ ಇದೀಗ ಹಗಲಲ್ಲೇ ಕಳ್ಳರು ದರೋಡೆಗಿಳಿಯುತಿದ್ದಾರೆ.

ಹೌದು ಒಂಟಿ ಮನೆಯನ್ನ ಟಾರ್ಗೆಟ್ ಮಾಡುವ ಇವರು ಅದಕ್ಕಾಗಿ ಹೊಂಚು ಹಾಕಿ ಜಿಲ್ಲೆಯಲ್ಲಿ ಓಡಾಡುತಿದ್ದಾರೆ.

ಭಟ್ಕಳ (Bhatkal) ಬೆಂಗ್ರೆ (Bangre) ಮಲ್ಲಾರಿಗೆ ಹೊಂದಿಕೊಂಡಿರುವ ಅಬ್ಬೇಡಿಯಲ್ಲಿ ಒಂಟಿ ಮನೆಗೆ ಬಂದು ಅಡಗಿ ಕುಳಿತಿದ್ದ ವ್ಯಕ್ತಿಯೋರ್ವ ಮನೆಯವರನ್ನು ಕಂಡು ಗುಡ್ಡ ಹತ್ತಿ ಓಡಿ ಕಣ್ಮರೆಯಾಗಿರುವ ಘಟನೆ ಮಂಗಳವಾರ ನಡೆದಿದೆ.

ಇದನ್ನೂ ಓದಿ:-ಭಟ್ಕಳ| ಗೋವುಗಳನ್ನು ಹಿಡಿದ ಪೊಲೀಸರು- ಠಾಣೆಗೆ ಮುತ್ತಿಗೆ ಹಾಕಿದ ಹಿಂದೂಕಾರ್ಯಕರ್ತರು!

ಭಟ್ಕಳದ ಬೆಂಗ್ರೆ ಅಬ್ಬೇಡಿಯ ನಿವಾಸಿ ಮಹೇಂದ್ರ ಬೋವಿ ಅವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಪ್ರತ್ಯಕ್ಷ ದರ್ಶಿಗಳ ಮಾಹಿತಿಯಂತೆ 25ರಿಂದ 30 ವರ್ಷ ಪ್ರಾಯದ ಒಳಗಿನ ಯುವಕ ಮನೆಯ ಬಳಿ ಬಂದು ಅಡಗಿ ಕುಳಿತು ಕಳ್ಳತನಕ್ಕೆ ಸ್ಕೆಚ್ ಹಾಕಿದ್ದ .

ಈತನಿದ್ದುದನ್ನು ಗಮನಿಸಿದ ಮನೆಯವರು ಕೂಗಿಕೊಂಡಾಗ ಓಡಿ ಹೋಗಿದ್ದಾನೆ. ಇನ್ನು ಈತನಿಗಾಗಿ ಗ್ರಾಮದವರು ಹುಡುಕಿದರೂ ಪತ್ತೆಯಾಗಿಲ್ಲ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!