Gokarna heavy rain water came to Gokarna Mahabaleshwar Temple

ಗೋಕರ್ಣ ಮಹಾಬಲೇಶ್ವರನನ್ನು ಮುಳುಗಿಸಿದ ಕೊಚ್ಚೆ ನೀರು!

171

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ (Gokarna Mahabaleshwar Temple )ಅಬ್ಬರದ ಮಳೆಯಿಂದಾಗಿ ದೇವಾಲಯದ ಆತ್ಮಲಿಂಗ ಕೊಚ್ಚೆ ನೀರಿನಿಂದ ಆವೃತವಾಗಿ ದೇವರ ದರ್ಶನಕ್ಕೆ ಬಂದ ಭಕ್ತರಿಗೆ ವಿಘ್ನ ಉಂಟು ಮಾಡಿತು. ದೇವಸ್ಥಾನದ ಸಿಬ್ಬಂದಿಗಳ ನಿರಂತರ ಪರಿಶ್ರಮದಿಂದ ಇದೀಗ ಗರ್ಭಗುಡಿಯಲ್ಲಿ ಸೇರಿದ್ದ ನೀರನ್ನು ( water) ಹೊರ ಹಾಕಲು ಯಶಸ್ವಿಯಾಗಿದ್ದಾರೆ. ಈ ಹಿಂದೆಯೂ ಸಹ ದೇವಸ್ಥಾನದ ಗರ್ಭಗುಡಿಗೆ ಕೊಳಚೆ ನೀರು ತುಂಬಿ ಸಮಸ್ಯೆ ಉಂಟುಮಾಡಿತ್ತು.

ಏನಿದು ಸಮಸ್ಯೆ?

ಮಹಾಬಲೇಶ್ವರ ದೇವಾಲಯದ ತೀರ್ಥ ಸೋಮಸೂತ್ರದ ಮೂಲಕ ಸ್ಮಶಾನಕಾಳಿ ಮಂದಿರದ ಹತ್ತಿರ ಸಂಗಮ ನಾಲಾಕ್ಕೆ ಸೇರುವ ಬಳಿ ಸೇತುವೆ ನಿರ್ಮಿಸಿದ್ದು, ಇದರ ಅಡಿಪಾಯದ ಎತ್ತರ ಹೆಚ್ಚಿಸಿರುವುದು ಹಾಗೂ ಸೇತುವೆ ನಿರ್ಮಾಣದ ವೇಳೆ ಹಾಕಿದ ಮಣ್ಣನ್ನು ಆಡಳಿತ ತೆಗೆಯದಿರುವುದು ಈ ಆವಾಂತರಕ್ಕೆ ಕಾರಣವಾಗಿದೆ.

ಇದನ್ನೂ ಓದಿ:-Kannadavani impact| ಕುಮಟಾ, ಗೋಕರ್ಣದಲ್ಲಿ ಪ್ರವಾಸಿ ಬೋಡ್ ಗಳಿಗೆ ನಿರ್ಬಂಧ

ಸೇತುವೆ ನಿರ್ಮಾಣದ ವೇಳೆ ಮಂದಿರಕ್ಕೆ ತೊಂದರೆಯಾಗುವ ಕುರಿತು ಆಡಳಿತದವರ ಮಾಹಿತಿ ಹಾಗೂ ಅಭಿಪ್ರಾಯ ಕೇಳ ಬೇಕಿತ್ತು ಎಂದು ಸ್ಥಳೀಯರು ದೂರಿದ್ದಾರೆ.

ಮಳೆಗಾಲ ಪ್ರಾರಂಭದಲ್ಲೇ ಹೀಗಾದರೇ ಮುಂದೆ ಏನಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸಿಬ್ಬಂದಿಗಳ ಸಾಹಸ :

ಸಂಗಮ ನಾಲಾ ಸಮುದ್ರ ಸೇರುವಲ್ಲಿನ ಕೋಡಿಯನ್ನ ( ಮರಳ ದಿನ್ನೆ) ಮಂದಿರದ ಸಿಬ್ಬಂದಿಗಳು ಸತತ ಎರಡು ತಾಸಿಗೂ ಅಧಿಕಕಾಲ ಕಡಿದು ನೀರು ಸರಾಗವಾಗಿ ಹೋಗುವಂತೆ ಬಿಡಿಸಿಕೊಟ್ಟರು.

ಸುರಿಯುವ ಮಳೆಯನ್ನು ಲೆಕ್ಕಿಸಿದೆ ಶ್ರಮಿಸಿದ ಸಿಬ್ಬಂದಿ ಇದೀಗ ಗರ್ಭಗುಡಿಯಲ್ಲಿ ನೀರು ಖಾಲಿ ಮಾಡುವಲ್ಲಿ ಯಶಸ್ವಿಯಾಗುದ್ದಾರೆ.

ನಂತರ ಗರ್ಭಗುಡಿ ಸ್ವಚ್ಚಗೊಳಿಸಿ ದಿನದ ಧಾರ್ಮಿಕ ಕಾರ್ಯಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ.

ಇದನ್ನೂ ಓದಿ:-ಗೋಕರ್ಣ ಮಹಾಬಲೇಶ್ವರನ ದರ್ಶನ ಪಡೆದ Infosys ಸುಧಾಮೂರ್ತಿ




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!