Restriction on tourist boats in Kumta Gokarna

Kannadavani impact| ಕುಮಟಾ, ಗೋಕರ್ಣದಲ್ಲಿ ಪ್ರವಾಸಿ ಬೋಡ್ ಗಳಿಗೆ ನಿರ್ಬಂಧ

147
GILANI super market karwar KSRTC bus stand near Karwar

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಗ್ರಾಮದ ಮೂಡಂಗಿಯ ಸಮೀಪ ಪ್ರವಾಸಿ ಬೋಟ್ ನಲ್ಲಿ ಅಗತ್ಯಕ್ಕಿಂತ ಹೆಚ್ಚು ಜನರನ್ನು ಕರೆದೊಯ್ದು ಬೋಟ್ ಪಲ್ಟಿಯಾದ ಕುರಿತು ಕನ್ನಡವಾಣಿ ಡಿಜಿಟಲ್‌ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗುತಿದ್ದಂತೆ ಜಿಲ್ಲಾ ಪ್ರವಾಸೋಧ್ಯಮ ಇಲಾಖೆ ನಿರ್ದೇಶಕ ಜಯಂತ್ ರವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಈ ವೇಳೆ ಕನ್ನಡವಾಣಿ ಯಲ್ಲಿ ವರದಿ ಪ್ರಕಟಿಸಿದಂತೆ ದುರಂತಕ್ಕೊಳಗಾದ ಪ್ರವಾಸಿ ಬೋಟ್‌ನ ಮಾಲೀಕರು ಪ್ರವಾಸೋದ್ಯಮ ಇಲಾಖೆಯಿಂದ ಬೋಟಿಂಗ್‌ ಚಟುವಟಿಕೆ ನಡೆಸುವ ಬಗ್ಗೆ ಯಾವುದೇ ರೀತಿಯ ಅನುಮತಿಯನ್ನು ಪಡೆಯದೇ ಹಾಗೂ ಅನಧೀಕೃತವಾಗಿ ನಡೆಸಿದ್ದು ಕಂಡುಬಂದಿದೆ.

ಇದಲ್ಲದೇ ಸದರಿ ವ್ಯಾಪ್ತಿಯಲ್ಲಿ ಹಲವಾರು ಅನಧೀಕೃತವಾಗಿ ಬೋಟಿಂಗ್ ನಡೆಯುತ್ತಿರುವುದರ ಬಗ್ಗೆ ಮಾಹಿತಿ ಕಂಡುಬಂದಿದು ,ಎಲ್ಲಾ ಬೋಟ್‌ ಮಾಲೀಕರಿಗೆ ಅನಧೀಕೃತ ಬೋಟಿಂಗ್‌ ನಡೆಸಿದ್ದಲ್ಲಿ ಕಾನೂನು ಕಠಿಣ ಕ್ರಮ ಕೈಗೊಳ್ಳವ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದಾರೆ.

ಇನ್ನು ಈ ಹಿಂದೆ ಪ್ರವಾಸೋದ್ಯಮ ಇಲಾಖೆಯಿಂದ ಕುಮಟಾ ಮತ್ತು ಗೋಕರ್ಣ ವ್ಯಾಪ್ತಿಯಲ್ಲಿ ಅನುಮತಿ ಪಡೆದ ಪ್ರವಾಸಿ ಬೋಟಗಳ ಮಾಲೀಕರು ಅರ್ಜಿಯೊಂದಿಗೆ ಸಲ್ಲಿಸಿರುವ ದಾಖಲೆಗಳಲ್ಲಿ ಕೆಲವೊಂದು ದಾಖಲೆಗಳ ಕಾಲಾವಧಿಯು ಮುಕ್ತಾಯಗೊಂಡಿರುವುದರಿಂದ ಸದರಿರವರ ಅನುಮತಿ ಪತ್ರವನ್ನು ಸಹ ರದ್ದುಪಡಿಸಲಾಗಿದೆ.

ಮುಂದಿನ ದಿನಗಳಲ್ಲಿ ಪ್ರವಾಸಿ ಬೋಟಿಂಗ್‌ ಚಟುವಟಿಕೆಯನ್ನು ಕ್ರಮಬದ್ದವಾಗಿ ಹಾಗೂ ನಿಗಧಿತ ವ್ಯವಸ್ಥೆಯಲ್ಲಿ ನಡೆಸಲು ಸದರಿ ಕುಮಟಾ ಗೋಕರ್ಣ ವ್ಯಾಪ್ತಿಯಲ್ಲಿ ಬರುವ ಪ್ರವಾಸೋದ್ಯಮ ಇಲಾಖೆಯಿಂದ( tourism department )ಅನುಮತಿ ಪಡೆದವರ (ಟೆಂಡರದಾರರನ್ನು ಹೊರತುಪಡಿಸಿ) ಮಾಹಿತಿಯನ್ನು ಕರಾವಳಿ ಕಾವಲು ಪಡೆ ಹಾಗೂ ಪೋಲಿಸ್‌ ಇಲಾಖೆ ಗೋಕರ್ಣದವರಿಗೆ ನೀಡಲಾಗಿದ್ದು ಹಾಗೂ ಅನಧೀಕೃತವಾಗಿ ನಡೆಸುತ್ತಿರುವ ಎಲ್ಲಾ ಪ್ರವಾಸಿ ಬೋಟ್‌ಗಳ ಚಟುವಟಿಕೆಯನ್ನು ತಕ್ಷಣವೆ ಸ್ಥಗಿತಗೊಳಿಸಲು ಸೂಚಿಸಲಾಗಿದೆ.

ಅದರಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಹಲವಾರು ಪ್ರವಾಸಿ ಬೋಟಿಂಗ್‌ ಮಾಲೀಕರು ಅನಧೀಕೃತವಾಗಿ ಬೋಟಿಂಗ್‌ ನಡೆಸುತ್ತಿರುವುದು ಕಂಡು ಬಂದಿದ್ದು ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಸದ್ಯಕ್ಕೆ ಜಿಲ್ಲೆಯಾದ್ಯಂತ ಎಲ್ಲಾ ಪ್ರವಾಸಿ ಬೋಟಿಂಗ್‌ ಚಟುವಟಿಕೆಯನ್ನು (ಟೆಂಡರ್ದಾರರನ್ನು ಹೊರತುಪಡಿಸಿ) ಸ್ಥಗಿತಗೊಳಿಸಿ ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಪಡೆಯಲು ಅಗತ್ಯವಿರುವ    ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸಿ ಅನುಮತಿ ಪಡೆಯುವಂತೆ ಪ್ರವಾಸೋಧ್ಯಮ ಇಲಾಖೆ ನಿರ್ದೇಶಕರು ಸೂಚಿಸಿದ್ದು ಸದ್ಯ ಕುಮಟಾ ,ಗೋಕರ್ಣ ವ್ಯಾಪ್ತಿಯಲ್ಲಿ ಪ್ರವಾಸಿ ಬೋಟುಗಳಿಗೆ ನಿರ್ಬಂಧ ವಿಧಿಸಲಾಗಿದೆ.



ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!