Gokarna tourism Driving a tourist boat without permission Boat capsize Protection of 40 tourists

ಕುಮಟಾ| ಅನುಮತಿ ಇಲ್ಲದೇ ಪ್ರವಾಸಿ ಬೋಟ್ ಚಾಲನೆ 40 ಜನರ ಜೀವಕ್ಕೆ ಕುತ್ತು ತಂದ ಬೋಟ್ ಮಾಲೀಕ!

114
GILANI super market karwar KSRTC bus stand near Karwar

ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋಧ್ಯಮವನ್ನು ( tourism) ನಂಬಿ ಅನೇಕರು ಬದುಕು ಕಟ್ಟಿಕೊಂಡಿದ್ದಾರೆ.ಆದ್ರೆ ಹಣದ ಆಸೆಗೆ ಕೆಲವರು ಅನುಮತಿ ಪಡೆಯದೇ ಬೇಕಾಬಿಟ್ಟಿಯಾಗಿ ಪ್ರವಾಸಿಗರನ್ನು ಅಗತ್ಯಕ್ಕಿಂತ ಹೆಚ್ಚು ಕರೆದೊಯ್ದು ಯಮನ ಊರಿನ ಪರಿಚಯ ಮಾಡಿಸುತಿದ್ದಾರೆ.

ಹೌದು ಪ್ರವಾಸಿಗರನ್ನು ಕರೆದೊಯ್ದ ಬೋಟ್ (boat)ಪಲ್ಟಿಯಾಗಿ ನೀರುಪಾಲಾಗುತಿದ್ದ ನಲವತ್ತು ಜನ ಪ್ರವಾಸಿಗರನ್ನು ಕರಾವಳಿ ಕಾವಲು ಪಡೆ ಹಾಗೂ ಸ್ಥಳೀಯ ರಕ್ಷಣಾ ತಂಡ ರಕ್ಷಣೆ ಮಾಡಿದ ಘಟನೆ ಭಾನುವಾರ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಗ್ರಾಮದ ಮೂಡಂಗಿಯ ಸಮೀಪ ನಡೆದಿದೆ.

ಮೂಡಂಗಿಯ ಗಣೇಶ ರಮೇಶ ಎನ್ನುವವರಿಗೆ ಸೇರಿದ ಪ್ರವಾಸಿ ಬೋಟ್ ಇದಾಗಿದ್ದು, ಪ್ರವಾಸೋದ್ಯಮ ಇಲಾಖೆಯ ಅನುಮತಿ ಇಲ್ಲದೇ 28 ಜನರನ್ನು ಕರೆದೊಯ್ಯುವ ಬದಲು 40 ಜನರನ್ನು ಕರೆದೊಯ್ದಿದ್ದು ಮಿತಿಗಿಂತ ಹೆಚ್ಚಿನ ಜನರನ್ನು ದೋಣಿಯಲ್ಲಿರಿಸಿ ಕರೆದೊಯ್ದ ಕಾರಣ ಬೋಟ್ ಮಗಚಿ ಘಟನೆ ನಡೆದಿದ್ದು ಅದೃಷ್ಟವಶಾತ್ ಬೋಟ್ ನಲ್ಲಿದ್ದ ಪ್ರವಾಸಿಗರು ಲೈಫ್ ಜಾಕೇಟ್ ಹಾಕಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇನ್ನು ಘಟನೆ ಸಂಬಂಧ ಕರಾವಳಿ ಕಾವಲು ಪಡೆ ಸಿ.ಎಸ್.ಪಿ ರವರ ಗಮನಕ್ಕೆ ತರಲಾಗಿದ್ದು , ಅನಧಿಕೃತ ಬೋಟ್ ಗಳನ್ನು ನಾಳೆಯಿಂದಲೇ ಬಂದ್ ಮಾಡಿಸುವ ಭರವಸೆ ನೀಡಿದ್ದಾರೆ.

ಇನ್ನು ಅನಧಿಕೃತವಾಗಿ ಬೋಟ್ ಕೊಂಡೊಯ್ದ ಮಾಲೀಕನ ವಿರುದ್ಧ ಬೋಟ್ ನಲ್ಲಿ ಇದ್ದ ಯಾವೊಬ್ಬರೂ ದೂರು ನೀಡಲು ಮುಂದೆ ಬಂದಿಲ್ಲ. ಇದಲ್ಲದೇ ಅಳವೆ ಸಂಗಮದಲ್ಲಿ ಘಟನೆ ನಡೆದಿದ್ದರಿಂದ ಕರಾವಳಿ ಕಾವಲು ಪಡೆಗೋ ಅಥವಾ ಗೋಕರ್ಣ ಠಾಣೆಗೋ ಎಂಬ ಗೊಂದಲದಲ್ಲಿ ಪೊಲೀಸ್ ಇಲಾಖೆ ಇದೆ. ಇನ್ನು ಸೂಮೋಟೋ ಪ್ರಕರಣ ದಾಖಲಿಸಿಕೊಳ್ಳಬಹುದಾಗಿದ್ದರೂ ಈವರೆಗೂ ಪ್ರಕರಣ ದಾಖಲಾಗಿಲ್ಲ.

ಒಟ್ಟಿನಲ್ಲಿ ಪ್ರವಾಸಿಗರು ಲೈಫ್ ಜಾಕೇಟ್ ( life jacket) ಹಾಕಿಕೊಂಡಿದ್ದರಿಂದ ದೊಡ್ಡ ಸಾವು ನೋವಿನ ದುರಂತ ತಪ್ಪಿದಂತಾಗಿದೆ.

ಇನ್ನಾದರೂ ಪ್ರವಾಸೋದ್ಯಮ ಇಲಾಖೆ ಹಾಗೂ ಪೊಲೀಸ್ ಇಲಾಖೆ ಇಂತವರ ವಿರುದ್ಧ ಕಠಿಣ ಕ್ರ‌ಮ ಕೈಗೊಳ್ಳಬೇಕಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!