UttraKannada weather forecast weekly report Karnataka

ಹವಾಮಾನ ಮನ್ಸೂಚನೆ -ಮೂರು ದಿನ ಕರಾವಳಿಯಲ್ಲಿ ಹೆಚ್ಚಿನ ಮಳೆ.

81

ಕಾರವಾರ:- ಉತ್ತರ ಕನ್ನಡ ಜಿಲ್ಲೆಯಾಧ್ಯಾಂತ ಮಳೆಯ (Rain) ಅಬ್ವರ ಎರಡು ದಿನದಿಂದ ವೇಗ ಪಡೆದುಕೊಂಡಿದೆ. ಕರಾವಳಿಯಲ್ಲಿ (karavali) 38 ಡಿಗ್ರಿ ವರೆಗೆ ತಲುಪಿದ್ದ ಉಷ್ಣಾಂಶ ಇದೀದ 26 ಡಿಗ್ರಿಗೆ ಕುಸಿದಿದ್ದು ತಂಪಿನ ವಾತಾವರಣ (weather) ನಿರ್ಮಾಣವಾಗಿದೆ.

ಕರಾವಳಿಯಲ್ಲಿ ಇನ್ನೂ ಎರಡು ದಿನ ಹೆಚ್ಚಿನ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಜೂ.9 ರ ವರೆಗೂ ದಕ್ಷಿಣ ಒಳನಾಡಿನ ಭಾಗದಲ್ಲಿ ಅಧಿಕ ಮಳೆಯಾಗಲಿದ್ದು ರಾಜ್ಯಾಧ್ಯಾಂತ ಐದು ದಿನಗಳಲ್ಲಿ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಲಿದ್ದು ಗುಡುಗು ಸಹಿತ ಮಳೆಯಾಗುವ ಸೂಚನೆ ನೀಡಿದೆ.

ಇದನ್ನೂ ಓದಿ:-ಬಸ್ ಚಾಲನೆ ವೇಳೆ ಮಳೆಗೆ ಛತ್ರಿ ಹಿಡಿದ ಚಾಲಕ| ಮುಂದೇನಾಯ್ತು ಗೊತ್ತಾ?

ಇನ್ನು ಜೂ.11 ರ ವರೆಗೆ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಹೆಚ್ಚಿನ ಮಳೆಯಾಗುವ ( heavy rain) ಸೂಚನೆ ನೀಡಲಾಗಿದ್ದು ಈಗಾಗಲೇ ಮೀನುಗಾರಿಕೆ ಸಹ ಬಂದ್ ಮಾಡಲಾಗಿದ್ದು ಜಿಲ್ಲಾಡಳಿತ ಕರಾವಳಿ ತೀರ ಭಾಗಕ್ಕೆ ಪ್ರವಾಸಿಗರು ತೆರಳದಂತೆ ನಿಷೇಧ ಹೇರಲಾಗಿದ್ದು ಜಲಸಾಹಸ ಕ್ರೀಡೆಗೂ ನಿರ್ಬಂಧ ಹೇರಿದೆ‌.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!