ಬಸ್ ಚಾಲನೆ ವೇಳೆ ಮಳೆಗೆ ಛತ್ರಿ ಹಿಡಿದ ಚಾಲಕ| ಮುಂದೇನಾಯ್ತು ಗೊತ್ತಾ?

NWKSRTC bus driver NWKSRTC bus driver

ಧಾರವಾಡ:- ಕೆಲವೊಮ್ಮೆ ಅತೀ ರೇಕಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದುಮಾಡಿ ಕೊನೆಗೆ ಅದರ ಫಲಿತಾಂಶಗಳು ಅವರಿಗೇ ಕುತ್ತು ತರುತ್ತದೆ.

ಹೌದು ಧಾರವಾಡದಲ್ಲಿ (dharwad) 23-05-2024 ರಂದು ಉಪ್ಪಿನಬೆಟಗೇರಿಯಿಂದ ಧಾರವಾಡಕ್ಕೆ ಬಸ್ ಆಗಮಿಸುತ್ತಿದ್ದಾಗ ಮಳೆ ಬರುತ್ತಿತ್ತು. ಈ ವೇಳೆ ಚಾಲಕನು ಒಂದು ಕೈಯಲ್ಲಿ ಛತ್ರಿ (umbrella) ಹಿಡಿದು, ಮತ್ತೊಂದು ಕೈಯಲ್ಲಿ ಸ್ಟೇರಿಂಗ್ ಹಿಡಿದು ಬಸ್ ಚಲಾಯಿಸಿದ್ದನು.

ಇದನ್ನು ಅದೇ ಬಸ್ ನ ಕಂಡಕ್ಟರ್ ಮೊಬೈಲ್ ಪೋನ್ (mobile phone) ನಲ್ಲಿ ವೀಡಿಯೋ ಮಾಡಿಕೊಂಡಿದ್ದರು. ಸದರಿ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ (social media) ವೈರಲ್ ಆಗಿತ್ತು. ಸರ್ಕಾರಿ ಬಸ್ ( government bus) ಮೇಲ್ಛಾವಣಿ ಸೋರುತ್ತಿದೆ ಎಂದು ಜನ ಅಕ್ರೋಶ ಹೊರಹಾಕಿದ್ದರು.

Advertisement

ಇನ್ನು ಈ ಕುರಿತು ವಿಡಿಯೋ ವೈರಲ್ (video viral) ಆಗುತಿದ್ದಂತೆ ಅಧಿಕಾರಿಗಳು ಸಹ ಈ ಬಗ್ಗೆ ತನಿಖೆ ಕೈಗೊಂಡಾಗ ನಿಜ ಸ್ಥಿತಿಯಲ್ಲಿ ಬಸ್ ಸೋರುತ್ತಿರಲಿಲ್ಲ. ಇನ್ನು ತಮಾಷೆಗಾಗಿ ಈ ವಿಡಿಯೋ ಮಾಡಲಾಗಿತ್ತು.

ಇನ್ನು ಮನರಂಜನೆಗಾಗಿ ವಾಯುವ್ಯ ಸಾರಿಗೆ ಬಸ್ (ksrtc bus) ಚಾಲಕ ಚಾಲನೆ ಮಾಡುವ ವೇಳೆ ಒಂದು ಕೈಯಲ್ಲಿ ಛತ್ರಿ ಹಿಡಿದು ಬಸ್ ಓಡಿಸಿದ ಚಾಲಕ (driver) ಹಾಗೂ ಇದನ್ನು ವೀಡಿಯೋ ಮಾಡಿದ ಮಹಿಳಾ ಕಂಡಕ್ಟರ್ ನ್ನು (bus conductor) ಅಮಾನತ್ತುಗೊಳಿಸಲಾಗಿದೆ.

ಚಾಲಕ ಹನುಮಂತಪ್ಪ ಕಿಲ್ಲೇದಾರ್ ಹಾಗೂ ಕಂಡಕ್ಟರ್ (ನಿರ್ವಾಹಕಿ) ಅನಿತಾ ಅಮಾನತ್ತುಗೊಂಡ ಸಿಬ್ಬಂದಿಗಳಾಗಿದ್ದಾರೆ.

ಮಾಡಿದ ತಪ್ಪಿಗೆ ಇದೀಗ ಕಂಡಕ್ಟರ್ ಹಾಗೂ ಚಾಲಕ ಪಶ್ಚಾತಾಪ ಪಡುವಂತಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement