Dandeli police news theft

Dandeli|ಈ ಕಳ್ಳರ ಹಿನ್ನಲೆ ಕೇಳಿ ಪೊಲೀಸರೇ ಸುಸ್ತು! ಯಾರೀ ಕಿರಾತಕರು ಗೊತ್ತಾ?

168

Dandeli news:– ಪೊಲೀಸರು (police) ಕೆಲವೊಮ್ಮೆ ಕಳ್ಳರನ್ನು ಹಿಡಿದರೇ ಅವರನ್ನು ತನಿಖೆ ಮಾಡುವಾಗ ಸಿಗುವ ಮಾಹಿತಿ ,ಕೆಲವು ಪ್ರಕರಣಗಳು ಹೊರಬರುತ್ತದೆ. ಹೌದು ದಾಂಡೇಲಿ ನಗರದ ವನಶ್ರೀ ನಗರದ ಮನೆ ಕಳ್ಳತನದಲ್ಲಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ದಾಂಡೇಲಿ ನಗರದ ಮಾರುತಿ ನಗರದ ನಿವಾಸಿಗಳಾದ ಅಶೋಕ ಗುರವ, ಫೈರೋಜ್ ಅಬ್ದುಲ್ ಸತ್ತಾರ್ ದೌಲತ್ತಿ ಹಾಗೂ ಗಾಂಧಿನಗರದ ನಿವಾಸಿ ಮೈಕಲ್ ಬನ್ನಿ ಅಪ್ಪು ಕಕ್ಕೇರಿ ಎನ್ನುವವರನ್ನು ಬಂಧಿಸಿದ್ದಾರೆ.

ಈ ಪ್ರಕರಣದಲ್ಲಿ ಪೊಲೀಸರು ತನಿಖೆ ಕೈಗೊಂಡಾಗ
ಮೈಕಲ್ ಬನ್ನಿ ಎಂಬಾತ ಕಳ್ಳತನ,ಹೊಡೆದಾಟ ಸೇರಿದಂತೆ 13 ಪ್ರಕರಣಗಳು ಈತನ ಮೇಲಿದ್ದು ಉತ್ತರ ಕನ್ನಡ ಜಿಲ್ಲೆಯಲ್ಲಿ ಅಲ್ಲದೇ ಇತರೆ ಭಾಗದಲ್ಲಿ ಸಹ ಕಳ್ಳತನ ಮಾಡಿದ ಪ್ರಕರಣ ಈತನ ಮೇಲಿರುವುದು ಬೆಳಕಿಗೆ ಬಂದರೇ ,ಫೈರೋಜ್ ಮೇಲೆ ಕಳ್ಳತನ ,ದರೋಡೆಯ 10 ಪ್ರಕರಣ, ಅಶೋಕ್ ಗುರುವ ಮೇಲೆ 5 ಕಳ್ಳತನದ ಪ್ರಕರಣಗಳಿದ್ದು ಜಿಲ್ಲೆಯ ವಿವಿಧ ಕಡೆ ಕಳ್ಳತನ ನಡೆಸಿದ್ದು ಹೊರ ಭಾಗದಲ್ಲಿ ಸಹ ಕಳ್ಳತನ ನಡೆಸಿರುವ ಪ್ರಕರಣದ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ.

ಇನ್ನು ಬಂಧಿತ ಆರೋಪಿಗಳಿಂದ ಬಂಗಾರದ ಉಂಗುರ -2, ಬೆಳ್ಳಿಯ ಕಾಲು ಚೈನ್ -6 ಜೊತೆ, ಬೆಳ್ಳಿಯ ಕೈಬಳೆ- 4, ವಾಚ್- 3, ಬೆಳ್ಳಿಯ ದೀಪ ಹಚ್ಚುವ ಹಣತೆ -1, ಸಣ್ಣ ಡಬ್ಬಾ-1 ಮತ್ತು ನಗದು ₹3,650 ಹಾಗೂ ಕಳ್ಳತನಕ್ಕೆ ಬಳಸಲಾದ ದ್ವಿಚಕ್ರ ವಾಹನ ಕೆಎ:65, ಕೆ: 2945 ನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣ ಭೇದಿಸುವಲ್ಲಿ ದಾಂಡೇಲಿ ಠಾಣೆಯ (Dandeli police station) ಡಿವೈಎಸ್ಪಿ ಶಿವಾನಂದ ಮದರಖಂಡಿ ರವರ ಮಾರ್ಗದರ್ಶನದಲ್ಲಿ ಸಿಪಿಐ ಭೀಮಣ್ಣ ಎಂಸೂರಿ ಅವರ ನೇತೃತ್ವದಲ್ಲಿ ಪಿಎಸ್ಐ ಗಳಾದ ಐ.ಆರ್.ಗಡ್ಡೆಕರ್ ಮತ್ತು ರವೀಂದ್ರ ಬಿರಾದರ್, ಎ.ಎಸ್.ಐಗಳಾದ ಬಸವರಾಜ ಒಕ್ಕುಂದ, ನಾರಾಯಣ ರಾಥೋಡ್ ಮತ್ತು ಪೊಲೀಸ್ ಸಿಬ್ಬಂದಿಗಳು ಹಾಗೂ ಜಿಲ್ಲಾ ಕೇಂದ್ರದ ಸಿಡಿಆರ್ ವಿಭಾಗದ ಸಿಬ್ಬಂದಿಗಳಾದ ಉದಯ ಗುನಗ, ರಮೇಶ್ ನಾಯ್ಕ ಅವರನ್ನು ಒಳಗೊಂಡ ತಂಡಗಳು ಭಾಗಿಯಾಗಿದ್ದವು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!