Mundgod| ನೀರಿಗೆ ಹಾಹಾಕಾರ ವಾರವಾದ್ರೂ ಸ್ನಾನ ಮಾಡಿಲ್ಲ ಅಂದ್ರು ಗ್ರಾಮಸ್ತರು.

Severe water crisis hits Ramapura village in Mundgod taluk of Uttara Kannada district. Villagers allege they have not bathed for a week due to irregular drinking water supply and dried-up wells.
file 0000000078ac7207a5aea48de95a67af file 0000000078ac7207a5aea48de95a67af

Mundgod| ನೀರಿಗೆ ಹಾಹಾಕಾರ ವಾರವಾದ್ರೂ ಸ್ನಾನ ಮಾಡಿಲ್ಲ ಅಂದ್ರು ಗ್ರಾಮಸ್ತರು.

 

ಕಾರವಾರ :- ಉತ್ತರ ಕನ್ನಡ (uttara kannada)ಜಿಲ್ಲೆಯ 41 ಗ್ರಾಮಗಳಲ್ಲಿ ಇದೀಗ ನೀರಿನ ಸಮಸ್ಯೆ ಉಲ್ಭಣಿಸಿದೆ. ಇವುಗಳಲ್ಲಿ 17 ಗ್ರಾಮಗಳಿಗೆ ಖಾಸಗಿ ಹಾಗೂ ಆಡಳಿತದ ವತಿಯಿಂದ ನೀರು ಸರಬರಾಜು ಮಾಡಲಾಗುತ್ತಿದೆ ಎಂಬುದು ಜಿಲ್ಲಾ ಪಂಚಾಯತ್ ಸಿಇಓ ಡಾ.ದಿಲೀಷ್ ಶಶಿ ರವರು ಮೊನ್ನೆ ನಡೆದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯಲ್ಲಿ ಹೇಳಿದ ಮಾತಿದು.

ಇದಲ್ಲದೇ ನೀರಿನ ಸಮಸ್ಯೆ ನೀಗಿಸಲು ಕುಡಿಯುವ ನೀರಿನ ಸರಬರಾಜು ಮಾಡಲು 98 ಖಾಸಗಿ ಬೋರ್‌ವೆಲ್‌ಗಳನ್ನು ಗುರುತಿಸಲಾಗಿದ್ದು, ಜಿಲ್ಲೆಯ ಯಾವುದೇ ಗ್ರಾಮದಲ್ಲಿ ಸಮಸ್ಯೆ ಕಂಡುಬಂದಲ್ಲಿ ತ್ವರಿತವಾಗಿ ಸ್ಪಂದಿಸಿ, ನೀರು ಒದಗಿಸುವಂತೆ ಸೂಚನೆ ನೀಡಿರುವುದಾಗಿ ಹೇಳಿದ್ದಾರೆ.

Advertisement

Mundgod- ಮೀಟರ್ ಬಡ್ಡಿದಂಧೆ ಕಿಂಗ್ ಪಿನ್ ಜಮೀರ್ ದರ್ಗಾವಾಲೆ ಹತ್ಯೆ ಆರೋಪಿ ಬಂಧನ

ಆದರೇ ಜಿಲ್ಲೆಯ ಮುಂಡಗೋಡು,ಯಲ್ಲಾಪುರ(yallapur) ,ಕುಮಟಾ ಹಾಗೂ ಹೊನ್ನಾವರ ಭಾಗದಲ್ಲಿ ನೀರಿನ ಸಮಸ್ಯೆ ಉಲ್ಭಣವಾಗಿದೆ. ಇನ್ನು ಮುಂಡಗೋಡು ತಾಲೂಕಿನ ಕೋಡಂಬಿ ಗ್ರಾಮಪಂಚಾಯ್ತಿ ವ್ಯಾಪ್ತಿಯ

ರಾಮಾಪುರದಲ್ಲಿ ಎರಡು ತಿಂಗಳ ಹಿಂದಿನಿಂದಲೇ ನೀರಿನ ಸಮಸ್ತೆ ಹೆಚ್ಚಾಗಿದ್ದು ,ಗ್ರಾಮದ ಬಾವಿಗಳು ಬತ್ತಿಹೋಗಿದೆ. ಅಂದಾಜು 800 ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ಇದೀಗ ಗ್ರಾಮಪಂಚಾಯ್ತಿಯಿಂದ ನೀಡುವ ಕುಡಿಯುವ ನೀರಿನ ಸರಬರಾಜೇ ಈ ಗ್ರಾಮದ ನೀರಿನ ದಾಹ ತೀರಿಸುವ ಮೂಲವಾಗಿದೆ. ಆದರೇ ಈ ಗ್ರಾಮದ ಕಾಲೋನಿಗೆ ವಾರಕ್ಕೊಮ್ಮೆ ನೀರು ಸರಬರಾಜಾಗುತಿದ್ದು ಇಲ್ಲಿರುವ ದಲಿತ ಕಾಲೋನಿಯಲ್ಲಿ ವಾರಕ್ಕೆ ಒಂದುಸಾರಿ ನೀರನ್ನ ತರಲಾಗುತಿದ್ದು ಒಂದು ಓಣಿಗೆ ಹತ್ತು ನಿಮಿಷಗಳು ಮಾತ್ರ ನೀರು ಬಿಡಲಾಗುತ್ತಿದೆ ಎಂಬುದು ಗ್ರಾಮದ ಜನರ ದೂರು.

Yallapur| ಕಾರಿನಲ್ಲೇ ಸುಟ್ಟು ಕರಕಲಾದ ಚಾಲಕ ಸಂಶಯಾಸ್ಪದ ಸಾವಿನ ಶಂಕೆ

ಇನ್ನು ನಾವು ಆಡಳಿತಕ್ಕೆ ಮನವಿ ನೀಡಿದ್ದೇವೆ ಕುಡಿಯುವ ನೀರಿನ ಸಮಸ್ಯೆಯಿದೆ. ಆದರೇ PDO ರವರು ಗ್ರಾಮಗಳ ಮನೆಯ ತೆರಿಗೆ ಕಟ್ಟಿಲ್ಲ ಹಾಗಾಗಿ ನೀರು ಕೊಡುವುದಿಲ್ಲ ಎಂದು ಹೇಳಿದ್ದು ತಹಶಿಲ್ದಾರ್ ರವರು ಸಹ ನೀವು ನೀರನ್ನ ಸರಿಯಾಗಿ ಉಪಯೋಗಿಸುತ್ತಿಲ್ಲ ಹೀಗಾಗಿ ನೀರು ಸರಬರಾಜು ವಿಳಂಬವಾಗಿದೆ ಎನ್ನುತ್ತಾರೆ ಎಂಬುದು ರಾಮಾಪುರ ಗ್ರಾಮದ ಜನರ ದೂರು.

ನೀರಿಲ್ಲದೇ ಸ್ನಾನ ಮಾಡದೇ ವಾರವಾಯ್ತು!?

Women carrying water pots in Ramapura village of Mundgod amid severe drinking water shortage in Uttara Kannada district.
ಮುಂಡಗೋಡು-ರಾಮಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ

ಇನ್ನು ಈ ಗ್ರಾಮದಲ್ಲಿ ಸಮರ್ಪಕ ಕುಡಿಯುವ ನೀರು ಸರಬರಾಜಾಗುತ್ತಿಲ್ಲ , ವಾರಕ್ಕೊಮ್ಮೆ ಸಿಗುವ ನೀರು ಕುಡಿಯಲು ಸಹ ಸಾಕಾಗೋದಿಲ್ಲ, ಹಸುಗಳಿಗೂ ನೀರು ಬೇಕು ಹೀಗಾಗಿ ಮೂರು ಕಿಲೋಮೀಟರ್ ದೂರದ ವರೆಗೆ ಹೋಗಿ ಕಂಡವರ ಮನೆಯ ಬೋರ್ವೆಲ್ ನಲ್ಲಿ ನೀರು ಹೊತ್ತು ತರುತಿದ್ದೇವೆ. ನೀರು ಸಿಗದೇ ಒಂದು ವಾರದಿಂದ ಸ್ನಾನ ಮಾಡಿಲ್ಲ , ಬಹಿರ್ದೆಸೆಗೆ ಬಯಲಿಗೆ ಹೋಗುತಿದ್ದೇವೆ ಎನ್ನುತ್ತಾರೆ ಗ್ರಾಮದ ಜನ.

Mundgodu|ಬಿಸಿಯೂಟ ಸೇವನೆ-78 ಮಕ್ಕಳು ಅಸ್ವಸ್ತ

ಇನ್ನು ಮಹಿಳೆಯರು ಕಾಲಿ ಕೊಡ ಹಿಡಿದು ಪ್ರತಿ ದಿನ ಕುಡಿಯುವ ನೀರಿಗಾಗಿ ಗ್ರಾಮದಿಂದ ಮೂರು ಕಿಲೋಮೀಟರ್ ದೂರದ ಖಾಸಗಿ ಜಮೀನಿನಲ್ಲಿ ಬೋರ್ ವೆಲ್ ಇರುವವರ ಬಳಿ ನೀರು ಕೇಳಿ ತರಬೇಕಾದ ಪರಿಸ್ಥಿತಿ ಇದೆ. ಪ್ರತಿದಿನದ ಈ ಸಮಸ್ಯೆಯಿಂದ ಮಹಿಳೆಯರು ರೋಷಿಹೋಗಿದ್ದಾರೆ. ರಾಮಾಪುರ ಕಾಲೋನಿಯಲ್ಲಿ ಐದಾರು ಕಾಲೋನಿಗಳಿದ್ದು ವಾರದಲ್ಲಿ ಒಂದು ಕಾಲೋನಿಗೆ ಮಾತ್ರ ನೀರು ಕೊಡುತ್ತಾರೆ. ಒಂದು ಕಾಲೋನಿಗೆ ಬಂದರೇ ಇನ್ನೊಂದು ಕಾಲೋನಿಗೆ ನೀರು ಬರುವುದಿಲ್ಲ. ಮನೆ ಯಜಮಾನರು ನೀರಿಗಾಗಿ ಕೂಲಿ ಕೆಲಸ ಬಿಟ್ಟು ಇಡೀ ದಿನ ನೀರು ತರುವುದಕ್ಕೆ ಹೋಗಬೇಕು. ಹೀಗೆ ಹೋದರೆ ದಿನದ ಕೂಲಿ ಯಾರು ಕೊಡುತ್ತಾರೆ ? ನಾವು ಬದುಕೋದು ಹೇಗೆ ಎನ್ನುತ್ತಾರೆ.

ಹೂಳು ತುಂಬಿ ಬತ್ತಿಹೋದ ಕೆರೆಗಳು.

ಇನ್ನು ಈ ಗ್ರಾಮದ ಸುತ್ತಾ ಮೂರು ಕೆರೆಗಳಿವೆ. ಒಂದು ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿದೆ.ಈ ಮೂರು ಕೆರೆಗಳು ಸಂಪೂರ್ಣ ಬತ್ತಿಹೋಗಿದ್ದು ಗದ್ದೆಯಂತಾಗಿದೆ. ನಮ್ಮೂರಿನ ಕೆರೆಯ ಹೂಳನ್ನಾದರೂ ತೆಗೆಯಿರಿ ,ಇಲ್ಲವೇ ಗ್ರಾಮಕ್ಕೊಂದು ಬೋರ್ವೆಲ್ ತೆಗೆಸಿ ಕೊಡಿ ಎಂಬುದು ಗ್ರಾಮಸ್ತರ ಆಗ್ರಹ.

ದಾರಿ ತಪ್ಪಿಸುವ PDO

ಇನ್ನು ಇಲ್ಲಿನ ಪಿಡಿಓ ಪ್ರಕಾರ ದಿನ ನೀರು ಕೊಡುತಿದ್ದಾರಂತೆ. ಇಲ್ಲಿ ಯಾವ ಸಮಸ್ಯೆಯೂ ಇಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಾರದಲ್ಲಿ ಒಂದು ದಿನ ನೀರು ಬರುತ್ತಿದ್ದರೂ ಒಂದು ಕಾಲೋನಿಯಲ್ಲಿ ಜನರ ಸಹಿ ತೆಗೆದುಕೊಂಡು ಎಲ್ಲಾ ಕಾಲೋನಿಗೆ ನೀರು ಕೊಡುತಿದ್ದೇವೆ ಎಂದು ಅಧಿಕಾರಿಗಳಿಗೆ ವರದಿ ಒಪ್ಪಿಸಿದ್ದಾರೆ. ಈ ವರದಿ ಇಟ್ಟುಕೊಂಡು ಜಿಲ್ಲಾಪಂಚಾಯ್ತಿ ಕಚೇರಿಯಲ್ಲು ಸಹ ಇದೇ ಮಾತನ್ನ ಪುನರುಚ್ಚರಿಸುತಿದ್ದು ಪ್ರತಿ ದಿನ ನೀರು ಕೊಡುತಿದ್ದೇವೆ ಎನ್ನುತಿದ್ದಾರೆ. ಕೇವಲ ದಾಖಲೆಯಲ್ಲಿ ಮಾತ್ರ ಪ್ರತಿ ದಿನ ನೀರು ಸರಬರಾಜಾಗುತ್ತಿದೆ ರಾಮಪುರಕ್ಕೆ . ಆದರೇ ಗ್ರೌಂಡ್ ರಿಯಾಲಿಟಿ ಬೇರೆಯೇ ಇದ್ದು ಜನ ಮಾತ್ರ ನೀರಿಗಾಗಿ ಪರಿತಪಿಸುವುದು ತಪ್ಪುತಿಲ್ಲ.

ಕೊನೆಪಕ್ಷ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಒಮ್ಮೆ ಭೇಟಿನೀಡಿ ಪರಿಶೀಲಿಸಿ ವಾರಕ್ಕೆ ಎರಡು ದಿನವಾದರೂ ನೀರನ್ನ ವ್ಯವಸ್ತೆ ಮಾಡಬೇಕಿದೆ.

ಎಲ್ಲೇ ಸಮಸ್ಯೆ ಇದ್ರೂ ತಕ್ಷಣ ಪರಿಹರಿಸುತ್ತೇವೆ ಎನ್ನುವ ಜಿಲ್ಲಾ ಪಂಚಾಯ್ತಿ ಸಿಇಓ ರವರು ಸಮಸ್ಯೆಗೆ ಸ್ಪಂದಿಸದೇ ಕುಳಿತಲ್ಲೇ ಕುಳಿತು ಅಧಿಕಾರಿಗಳ ವರದಿ ತರಿಸಿಕೊಂಡು ನೀರು ಕೊಟ್ಟಿದ್ದೇವೆ ಎಂದರೇ ಹೇಗೆ ಎನ್ನುವ ಪ್ರಶ್ನೆ ಏಳುವಂತೆ ಮಾಡಿದೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement