Mundgodu|ಬಿಸಿಯೂಟ ಸೇವನೆ-78 ಮಕ್ಕಳು ಅಸ್ವಸ್ತ
Mundgodu news (February 07):-ಮುಂಡಗೋಡು ತಾಲೂಕಿನ ಪಂಚವಟಿಯ ಪಿಎಂಶ್ರೀ ಜವಾಹರ ನವೋದಯ ವಿದ್ಯಾಲಯದ ಮಕ್ಕಳು ಮಧ್ಯಾಹ್ನದ ಊಟ ಸೇವಿಸಿ ಜ್ವರ, ವಾಂತಿ, ಭೇದಿ ಮತ್ತು ಹೊಟ್ಟೆನೋವಿನಿಂದ ಅಸ್ವಸ್ಥಗೊಂಡ ಘಟನೆ ಬೆಳಕಿಗೆ ಬಂದಿದೆ.
ವಾಂತಿ ಭೇದಿ ಹಾಗೂ ಜ್ವರದಿಂದ ಬಳಲುತ್ತಿದ್ದ ಒಟ್ಟು 78 ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲಾಗಿದೆ.

ಶಾಲೆಯಲ್ಲಿ ಒಟ್ಟು 518ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಫೆ.4ರಂದು ಮಧ್ಯಾಹ್ನದ ಬಿಸಿಯೂಟ ಸೇವಿಸಿ ವಾಂತಿಯಿಂದ ಬಳಲುತ್ತಿದ್ದ 6ಮಕ್ಕಳು ತಾಲೂಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಉಳಿದವರಿಗೆ ನಿಧಾನವಾಗಿ ಜ್ವರ ವಾಂತಿ ,ಹೊಟ್ಟೆನೋವು ಕಾಣಿಸಿಕೊಂಡಿದ್ದು
ಆರವತ್ತು ಮಕ್ಕಳು ಜ್ವರ, ಹತ್ತು ಮಕ್ಕಳಿಗೆ ಹೊಟ್ಟೆನೋವು ಹಾಗೂ ಭೇದಿಯಿಂದ ಬಳಲುತ್ತಿದ್ದು ಇಬ್ಬರು ಮಕ್ಕಳು ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.
ಶಾಲೆಯಲ್ಲಿ ವಾಂತಿ ಮತ್ತು ಹೊಟ್ಟೆನೋವು ಕಾಣಿಸಿಕೊಂಡ ಹಿನ್ನಲೆ ತಾಲೂಕ ಆರೋಗ್ಯಾಧಿಕಾರಿಗಳ ತಂಡ, ಮಳಗಿ ಪ್ರಾಥಮಿಕ ಆರೋಗ್ಯ ವೈದ್ಯಾಧಿಕಾರಿಗಳ ತಂಡ ಹಾಗೂ ಆರ್.ಬಿ.ಎಸ್.ಕೆ. ತಂಡ ಶಾಲೆಗೆ ಭೇಟಿ ನೀಡಿ ಆನಾರೋಗ್ಯದಿಂದ ಬಳಲುತ್ತಿದ್ದ ಮಕ್ಕಳಿಗೆ ಚಿಕಿತ್ಸೆ ನೀಡಿದ್ದಾರೆ.
ವೈದ್ಯರ ತಂಡ ಪರಿಶೀಲನೆ .

ಮುಂಡಗೋಡು (mundgodu) ತಾಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ್ ನೇತೃತ್ವದ ತಂಡ ಶಾಲೆಗೆ ಭೇಟಿ ನೀಡಿ ಅಡುಗೆ ಕೋಣೆ, ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಛತೆಯ ಕುರಿತು ಪರಿಶೀಲನೆ ನಡೆಸಿದ್ದಾರೆ.
ನಂತರ ಮುಖ್ಯ ಶಿಕ್ಷಕರು, ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿಗಳಿಂದ ಮಾಹಿತಿ ಪಡೆದುಕೊಂಡು ನೀರು ಮತ್ತು ಆಹಾರದ ಮಾದರಿಯನ್ನು ಸಂಗ್ರಹಿಸಿ ಬೆಳಗಾವಿಯ ಲ್ಯಾಬೋರೆಟರಿ ಪರೀಕ್ಷಾ ಕೇಂದ್ರಕ್ಕೆ ಕಳಿಸಲಾಗಿದೆ.
ಶಾಲಾ ಮಕ್ಕಳ ಆರೋಗ್ಯ ತಪಾಸಣೆಗಾಗಿ ಮಳಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ತಂಡ ಹಾಗೂ ಆರ್.ಬಿ.ಎಸ್.ಕೆ. ತಂಡ ನಿಯೋಜನೆ ಮಾಡಲಾಗಿದೆ. ವಿದ್ಯಾರ್ಥಿಗಳ ಆರೋಗ್ಯದಲ್ಲಿ ತೊಂದರೆ ಕಂಡುಬಂದರೆ ಕೂಡಲೇ ತಾಲೂಕ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ಮಕ್ಕಳನ್ನು ದಾಖಲಿಸುವಂತೆ ಮುಖ್ಯ ಶಿಕ್ಷಕರು ಹಾಗೂ ಪಾಲಕರಿಗೆ ಆರೋಗ್ಯಾಧಿಕಾರಿಗಳು ಸೂಚಿಸಿದ್ದಾರೆ.
Mundgod| ಬಿಸಿಊಟ ಸೇವಿಸಿ 22 ವಿದ್ಯಾರ್ಥಿಗಳು ಅಸ್ವಸ್ತ
ಹತ್ತನೇ ತರಗತಿಯ 60 ವಿದ್ಯಾರ್ಥಿನಿಯರಿಗೆ ಜ್ವರ ಇತ್ತು. ತಾಲೂಕು ಆರೋಗ್ಯ ಅಧಿಕಾರಿಗೆ ತಿಳಿಸಿದ ಕೂಡಲೇ ಅವರ ತಂಡ ಬಂದು ಚಿಕಿತ್ಸೆ ನೀಡಿದ್ದಾರೆ.ಶಾಲೆಯ ಪ್ರಾಂಶುಪಾಲೆ ರೇಖಾ ಅಶೋಕ್ ಮಾಹಿತಿ ನೀಡಿದ್ದಾರೆ.
ಈ ಹಿಂದೆ ಕಳಬರಕೆ ಆಹಾರ ಸೇವಿಸಿ ಮುಂಡಗೋಡು ಶಾಸಕರ ಮಾದರಿ ಶಾಲೆಯ 22ಕ್ಕೂ ಹೆಚ್ಚು ಮಕ್ಕಳು ಅಸ್ವಸ್ತರಾಗಿದ್ದರು. ಇದೀಗ ಇದೇ ರೀತಿ ಪ್ರಕರಣ ನವೋದಯ ಶಾಲೆಯಲ್ಲೂ ನಡೆದಿದ್ದು ತಾಲೂಕಿನ ಬಿಸಿಊಟ ಕ್ಕಾಗಿ ಸರಬರಾಜಾಗುವ ಆಹಾರ ಸಾಮಗ್ರಿಗಳ ಮೇಲೆ ದೊಡ್ಡ ಅನುಮಾನ ಮೂಡುವಂತಾಗಿದೆ.
