Mundgod| ಬಿಸಿಊಟ ಸೇವಿಸಿ 22 ವಿದ್ಯಾರ್ಥಿಗಳು ಅಸ್ವಸ್ತ

Mundgod: 22 students of a model school were hospitalized after consuming the midday meal contaminated with rat droppings. Around 400 students had eaten the meal; symptoms included vomiting and stomach pain
mundgod.news mundgod.news

Mundgod| ಬಿಸಿಊಟ ಸೇವಿಸಿ 22 ವಿದ್ಯಾರ್ಥಿಗಳು ಅಸ್ವಸ್ತ

ಕಾರವಾರ :- ಶಾಲೆಯ ಬಿಸಿಯೂಟ ಸೇವಿಸಿ 22 ವಿದ್ಯಾರ್ಥಿಗಳು ಅಸ್ವಸ್ತರಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ನಡೆದಿದೆ.

ಮುಂಡಗೋಡ(mundgod) ಪಟ್ಟಣದ ಮಾದರಿ ಶಾಲೆಯ ಸುಮಾರು 22 ವಿದ್ಯಾರ್ಥಿಗಳು ಬಿಸಿಯೂಟ ಸೇವಿಸಿ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಿಸಿಯೂಟದಲ್ಲಿ ಇಲಿಯ ಹಿಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಊಟ ಸೇವಿಸಿದ ಸುಮಾರು 400 ವಿದ್ಯಾರ್ಥಿಗಳಗಳಲ್ಲಿ  22 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು ಚಿಕಿತ್ಸೆಗೆ ದಾಖಲಾಗಿದ್ದಾರೆ.

Advertisement

Mundgod| ಟಿಬೇಟಿಯನ್ ಗೆ ಮಾರಾಟ ಮಾಡುತಿದ್ದ 8 ಲಕ್ಷ ಮೌಲ್ಯದ ಚರಸ್ ವಶಕ್ಕೆ 

ಎಂದಿನಂತೆ ಶುಕ್ರವಾರ ಮಧ್ಯಹ್ನ ಶಾಲೆಯಲ್ಲಿ ಬಿಸಿಯೂಟ ಸೇವಿಸಿದ್ದಾರೆ. ಊಟದ ವೇಳೆ ಇಲಿಯ ಹಿಕ್ಕೆ ಊಟದಲ್ಲಿ ಕಂಡು ಬಂದಿದೆ. ಹೀಗಾಗಿ, ಅದನ್ನು ಸೇವಿಸಿದ ವಿದ್ಯಾರ್ಥಿಗಳು ವಾಂತಿ ಹಾಗೂ ಹೊಟ್ಟೆನೋವಿನಿಂದ ಬಳಲಿದ್ದಾರೆ. ಹೀಗಾಗಿ ತಕ್ಷಣವೇ ತಾಲೂಕಾಸ್ಪತ್ರೆಗೆ ವಿದ್ಯಾರ್ಥಿಗಳನ್ನು ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

Uttara Kannada mundgodu students fal
ಅಸ್ವಸ್ತರಾದ ಮಕ್ಕಳು

ಪಿಐ ರಂಗನಾಥ್ ಸೇರಿ ಹಲವು ಅಧಿಕಾರಿಗಳ ತಂಡ ತಾಲೂಕಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇನ್ನು ತಾಲೂಕಾಸ್ಪತ್ರೆಯ ವೈದ್ಯರ ತಂಡ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡುತ್ತಿದ್ದು ಒಂದು ದಿನದ ನಿಗಾದಲ್ಲಿ ಚಿಕಿತ್ಸೆ ನೀಡುವುದಾಗಿ ತಿಳಿಸಿದ್ದು ,ಶಿಕ್ಷಣ ಇಲಾಖೆಯಿಂದಲೂ ತನಿಖೆ ಕೈಗೊಳ್ಳಲಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement