
ಚಂದ್ರನು ಮಕರ ರಾಶಿಯಿಂದ ಸೋಮವಾರ ರಾತ್ರಿ 11:57 ಕ್ಕೆ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ.ಇದರಿಂದ ಹಲವು ರಾಶಿಗಳಲ್ಲಿ ಬದಲಾವಣೆ ಇರಲಿದೆ. ಹಾಗಿದ್ರೆ ಇಂದಿನ ದಿನದ ನಿಮ್ಮ ರಾಶಿಗಳಿಗೆ ಏನು ಫಲ ತಿಳಿಯಿರಿ.
ಶ್ರೀ ಶಕೇ 1945, ಶೋಭಕೃತ (ಶೋಭನ) ನಾಮ ಸಂವತ್ಸರ, ದಕ್ಷಿಣಾಯಣ,ವರ್ಷ ಋತು, ಅಧಿಕ ಶ್ರಾವಣ ಮಾಸ, ಶುಕ್ಲ ಪಕ್ಷ.ತಿಥಿ: ತ್ರಯೋದಶಿ 07:26/ ಚತುರ್ದಶಿ 27:51 ವಾರ:ಸೋಮವಾರ
ನಕ್ಷತ್ರ: ಪೂರ್ವಷಾಢ 18:57 ಯೋಗ: ವಿಷ್ಕುಂಭ 23:03 ಕರಣ: ತೈತುಲ 07:26 ಅಮೃತ ಕಾಲ: ಮಧ್ಯಾಹ್ನ 02:41 ರಿಂದ ಸಂಜೆ 04:07ರ ವರೆಗೆ
ಸೂರ್ಯೋದಯ : 05:55 ಸೂರ್ಯಾಸ್ತ: 07:10
ರಾಹುಕಾಲ : ಬೆಳಗ್ಗೆ 7.30 ರಿಂದ 9.00 ಗುಳಿಕಕಾಲ: ಬೆಳಗ್ಗೆ 7.30 ರಿಂದ 9.00 ಯಮಗಂಡಕಾಲ: ಬೆಳಗ್ಗೆ 10.30 ರಿಂದ 12.00
ದಿನ ಭವಿಷ್ಯ. (Kannada Dina Bhavishya)
ಮೇಷ: ಆರೋಗ್ಯ ಉತ್ತಮ,ಉದ್ಯೋಗದಲ್ಲಿ ಬಡ್ತಿ, ಹಿತ ಶತ್ರು ಭಾದೆ, ಚಂಚಲ ಮನಸ್ಸು, ವ್ಯಾಪಾರದಲ್ಲಿ ಉತ್ತಮ ವಹಿವಾಟು ಇಂದು ಶುಭ ಘಟನೆಗಳು ಜರುಗಲಿದೆ.
ವೃಷಭ: ಹಣವ್ಯಯ ಹೆಚ್ಚಿರುವುದರಿಂದ ಯೋಚಿಸಿ ಕರ್ಚು ಮಾಡಿ,ಅಲ್ಪ ಆದಾಯ ಅಧಿಕ ಖರ್ಚು, ಮಾನಸಿಕ ಒತ್ತಡ, ಅಪಕೀರ್ತಿ, ವಾಹನ ಅಪಘಾತ ಎಚ್ಚರದಿಂದಿರಿ.
ಮಿಥುನ:ಉದ್ಯೋಗದಲ್ಲಿ ತೊಂದರೆ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಷೇರು ವ್ಯವಹಾರಗಳಲ್ಲಿ ನಷ್ಟ, ಶತ್ರು ಭಾದೆ,ಕಾರ್ಯ ಹಾನಿ.
ಕಟಕ: ವ್ಯಾಪಾರದಲ್ಲಿ ಮಧ್ಯಮ ಅಭಿವೃದ್ಧಿ, ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ, ಚೋರ ಭಯ, ಮನಕ್ಲೇಶ, ಆಪ್ತ ಸ್ನೇಹಿತರ ಭೇಟಿ,ಕುಟುಂಬ ಸೌಖ್ಯ,ಆರೋಗ್ಯ ಮಧ್ಯಮ.
ಇದನ್ನೂ ಓದಿ:- ಹವಾಮಾನ ವರದಿ|ರಾಜ್ಯದಲ್ಲಿ ಮುಂದುವರೆಯಲಿದೆ ಮಳೆ.(ಫೋಟೊದ ಮೇಲೆ ಕ್ಲಿಕ್ ಮಾಡಿ)

ಸಿಂಹ: ವಾಹನ ಯೋಗ, ಕುಟುಂಬ ಸೌಖ್ಯ, ದಾಂಪತ್ಯದಲ್ಲಿ ಪ್ರೀತಿ, ಮನಶಾಂತಿ, ಸ್ವಂತ ಉದ್ಯಮದವರಿಗೆ ಅಧಿಕ ಲಾಭ.
ಕನ್ಯಾ: ತಾಳ್ಮೆ ಅಗತ್ಯ, ಹೆಚ್ಚು ಶ್ರಮ ಅಲ್ಪ ಲಾಭ, ವಿದೇಶ ಯಾನ, ಸುಖ ಭೋಜನ, ಆರ್ಥಿಕ ಪರಿಸ್ಥಿತಿ ಉತ್ತಮ.
ತುಲಾ: ವೈದ್ಯ ವೃತ್ತಿಯವರಿಗೆ ತೊಂದರೆ, ನೆಮ್ಮದಿ ಇರುವುದಿಲ್ಲ, ವೈಯಕ್ತಿಕ ಕೆಲಸಗಳಲ್ಲಿ ನಿಗಾ ವಹಿಸಿ.
ವೃಶ್ಚಿಕ: ಮೂಗಿನ ಮೇಲೆ ಕೋಪ, ವ್ಯಾಸಂಗದಲ್ಲಿ ಪ್ರಗತಿ, ಸಾಲಬಾಧೆ, ಸಲ್ಲದ ಅಪವಾದ, ಅಕಾಲ ಭೋಜನ.
ಧನಸ್ಸು: ಅಧಿಕ ತಿರುಗಾಟ, ವ್ಯಾಪಾರದಲ್ಲಿ ಲಾಭ, ಶ್ರಮಕ್ಕೆ ತಕ್ಕ ಫಲ, ಪುಣ್ಯಕ್ಷೇತ್ರ ದರ್ಶನ, ಯತ್ನ ಕಾರ್ಯಗಳಲ್ಲಿ ಜಯ.
ಮಕರ: ವಿರೋಧಿಗಳಿಂದ ಕಿರುಕುಳ, ದುಷ್ಟಬುದ್ಧಿ, ಚರ್ಮ ವ್ಯಾದಿ, ವ್ಯರ್ಥ ಧನ ಹಾನಿ, ಪರಸ್ಥಳ ವಾಸ.
ಕುಂಭ: ಶ್ರಮವಿಲ್ಲದೆ ಏನು ನಡೆಯುವುದಿಲ್ಲ, ಕೋಪ ಜಾಸ್ತಿ, ದ್ರವ್ಯ ಲಾಭ, ಅನ್ಯಾಯ ದಬ್ಬಾಳಿಕೆಗಳನ್ನು ವಿರೋಧಿಸುವಿರಿ.
ಮೀನ: ನಿರೀಕ್ಷಿತ ಆದಾಯ, ಸರ್ಕಾರಿ ಕಾರ್ಯಗಳಲ್ಲಿ ವಿಳಂಬ, ಮಾತಿನ ಚಕಮುಖಿ, ಶೀತ ಸಂಬಂಧ ರೋಗ, ಅಕಾಲ ಭೋಜನ.