ಕಾರವಾರದಲ್ಲಿ ಕೋವಿಡ್ ಲ್ಯಾಬ್ ಕಾರ್ಯ ಸ್ಥಗಿತ!

2565

ಕಾರವಾರ:- ಇಡೀ ಜಿಲ್ಲೆಯಲ್ಲಿ ಕರೋನಾ ಸೋಂಕಿತರ ಪರೀಕ್ಷೆ ನಡೆಸಿ ವರದಿ ನೀಡುತಿದ್ದ ಜಿಲ್ಲೆಯ ಏಕೈಕಾ ಲ್ಯಾಬ್ ಒಂದು ದಿನಗಳ ಕಾಲ ಕಾರ್ಯ ಸ್ಥಗಿತ ಮಾಡಲಿದೆ.

ಮೈಕ್ರೋಬಯಾಲಜಿ ತಜ್ಞರ ಅಭಿಪ್ರಾಯದಂತೆ ಕಾರವಾರ ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆಯ ಆರ್.ಟಿ.ಪಿ.ಸಿ.ಆರ್ ಮತ್ತು TRUE NAT ಕೋವಿಡ್-19 ಲ್ಯಾಬ್‌ಗಳಲ್ಲಿ FUMIGATION ಮಾಡುತ್ತಿರುವ ಹಿನ್ನಲೆಯಲ್ಲಿ ಮೇ. 17 ರಿಂದ 18 ರಂದು ಬೆಳಿಗ್ಗೆ 8 ರವರೆಗೆ ಲ್ಯಾಬ್‌ಗಳ ಸೇವೆ ಸ್ಥಗಿತವಾಗಿರುತ್ತದೆ ಎಂದು ಕ್ರಿಮ್ಸ್‌ನ ನಿರ್ದೇಶಕ ಡಾ. ಗಜಾನನ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏಪ್ರಿಲ್ ತಿಂಗಳಲ್ಲಿ ಕೋವಿಡ್-19 ಲ್ಯಾಬ್‌ಗಳಲ್ಲಿ FUMIGATIONನ್ನು ಮಾಡಿದ್ದು, ಮತ್ತೆ ಕೋವಿಡ್-19 ಲ್ಯಾಬ್‌ಗಳಲ್ಲಿ FUMIGATION ಮಾಡುವ ಅವಶ್ಯಕತೆಯಿದೆ ಎಂದು ಮೈಕ್ರೋಬಯಾಲಜಿ ತಜ್ಞರ ಅಭಿಪ್ರಾಯಪಟ್ಟಿದ್ದಾರೆ.

ಆದ್ದರಿಂದ ಸೇವೆ ಸ್ಥಗಿತಗೊಳಿಸಲಾಗುತ್ತಿದ್ದು, ಮೇ. 18 ರಂದು ಬೆಳಿಗ್ಗೆ 8:30 ರಿಂದ ಎಂದಿನಂತೆ ಲ್ಯಾಬ್‌ನ್ನು ಪ್ರಾರಂಭಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!