BREAKING NEWS
Search

ದಿನಭವಿಷ್ಯ |Daily Astrology

129

ನಿತ್ಯಪಂಚಾಂಗ(Nithya panchanga)

ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ನಿಜ ಶ್ರಾವಣ, ಪಕ್ಷ: ಶುಕ್ಲ, ವಾರ: ಬುಧವಾರ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ವಿಶಾಖಾ, ಯೋಗ: ಬ್ರಹ್ಮ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 20 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 49 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:43 ರಿಂದ 02:16ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:54 ರಿಂದ 09:28ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 11:01 ರಿಂದ 12:35ರ ವರೆಗೆ.

ಮೇಷ: ಆರೋಗ್ಯ ಮಧ್ಯಮ,ವ್ಯಾಪಾರದಲ್ಲಿ ಏರಿಳಿತ,ಹಿತಶತ್ರು ಕಾಟ,ಹಣ ವ್ಯಯ,ಮಿತ್ರರೊಡನೆ ವಿವಾದ, ಅಧಿಕ ತಿರುಗಾಟ, ಉತ್ತಮ ಕಾರ್ಯದಲ್ಲಿ ಭಾಗಿ,ವ್ಯಾಪಾರದಲ್ಲಿ ಮಧ್ಯಮ ಲಾಭ.

ವೃಷಭ: ಈ ದಿನ ಮಿಶ್ರ ಫಲ,ಸ್ವಲ್ಪ ಪ್ರಯತ್ನ ಪಟ್ಟರೆ ಉತ್ತಮ ಫಲ, ಕುಟುಂಬ ಸೌಖ್ಯ, ಮನ ಶಾಂತಿ, ಸುಖ ಭೋಜನ, ವಿವಾಹ ಯೋಗ.

ಮಿಥುನ: ಪರಸ್ತ್ರೀಯಿಂದ ತೊಂದರೆ, ಅಧಿಕ ಕೆಲಸದಿಂದ ವಿಶ್ರಾಂತಿ, ಚೋರ ಭಯ, ಅಧಿಕ ನಷ್ಟ, ದೃಷ್ಟಿ ದೋಷ.
ಇದನ್ನೂ ಓದಿ:-ಅಂಕೋಲ|ಸರ್ಕಾರಿ ವೈದ್ಯನಿಗೆ ಬೆತ್ತಲೆಯಾಗಿ ನೋಡುವ ಕನ್ನಡಕದ ಆಸೆ! ಆರ್ಡರ್ ಮಾಡಿ ಕಳೆದುಕೊಂಡ ಲಕ್ಷ! ಯಾರೀತ ಗೊತ್ತಾ?

ಕಟಕ: ಕೆಲಸಕಾರ್ಯಗಳಲ್ಲಿ ಪ್ರಗತಿ, ಕೊಟ್ಟ ಹಣ ಬರುವುದು ಕಷ್ಟ, ಪ್ರಭಾವಿ ವ್ಯಕ್ತಿಗಳ ಬೇಟಿ.

ಸಿಂಹ : ಅನಾವಶ್ಯಕ ಖರ್ಚಿನಿಂದ ದೂರವಿರಿ, ಮಾತಾ ಪಿತ್ರರಲ್ಲಿ ಪ್ರೀತಿ ವಾತ್ಸಲ್ಯ, ವೈರಿಗಳಿಂದ ದೂರವಿರಿ.

ಕನ್ಯಾ: ಉದ್ಯಮಿಗಳಿಗೆ ಯಶಸ್ಸು, ವ್ಯಾಪಾರಿಗಳಿಗೆ ಧನ ಲಾಭ, ವಿದೇಶ ಪ್ರಯಾಣ, ಯತ್ನ ಕಾರ್ಯಾನುಕೂಲ, ದಾಂಪತ್ಯದಲ್ಲಿ ಪ್ರೀತಿ.

ತುಲಾ: ಮಾತಿನಲ್ಲಿ ಹಿಡಿತವಿರಲಿ, ಅನಿರೀಕ್ಷಿತ ಖರ್ಚು, ಚಂಚಲ ಮನಸ್ಸು, ನೆಮ್ಮದಿ ಇಲ್ಲದ ಜೀವನ.

ವೃಶ್ಚಿಕ: ವೈವಾಹಿಕ ಜೀವನದಲ್ಲಿ ತೊಂದರೆ, ಗುಪ್ತಾಂಗ ರೋಗಗಳು, ಅಕಾಲ ಭೋಜನ, ಮನಸ್ಸು ಪಾಪದ ಕೆಲಸಗಳಿಗೆ ಪ್ರಚೋದಿಸುವುದು.

ಧನಸ್ಸು: ವ್ಯಾಪಾರ ವಹಿವಾಟು ಉತ್ತಮ, ಕಾರ್ಯಕ್ಷೇತ್ರದಲ್ಲಿ ಒತ್ತಡ, ಶತ್ರು ಭಾದೆ, ಪರಸ್ಥಳ ವಾಸ, ತೀರ್ಥಯಾತ್ರೆ,ಮನಶಾಂತಿ.

ಮಕರ: ಅಧಿಕ ಕೋಪ, ಶರೀರದಲ್ಲಿ ತಳಮಳ, ಅವಾಚ್ಯ ಶಬ್ದಗಳಿಂದ ನಿಂದನೆ, ಕುಟುಂಬದಲ್ಲಿ ಅನರ್ಥ, ಮನಸ್ಸಿಗೆ ಚಿಂತೆ.

ಕುಂಭ: ಹಣದ ತೊಂದರೆ, ಅತಿಯಾದ ಭಯ, ಮಾತಿನಲ್ಲಿ ಹಿಡಿತವಿರಲಿ, ಕೃಷಿಕರಿಗೆ ಅಲ್ಪ ಲಾಭ, ಆರೋಗ್ಯದಲ್ಲಿ ಏರುಪೇರು.

ಮೀನ: ರಾಜ ಭಯ, ಮೂಗಿನ ಮೇಲೆ ಕೋಪ, ವಾಹನದಿಂದ ಕಂಟಕ, ಸ್ನೇಹಿತರಿಂದ ನೆರವು, ದಾಂಪತ್ಯದಲ್ಲಿ ಪ್ರೀತಿ.

ಇದನ್ನೂ ಓದಿ:-ಪೊಲೀಸರಿಗೆ ಸೀಮೆಯೆಣ್ಣೆ ಎರಚಿ ಬೆಂಕಿಹಚ್ಚಲು ಯತ್ನಿಸಿದ ಫೈರ್ ಲೇಡಿ!
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!