Dandeli | ಕಾಳಿ ನದಿಯಲ್ಲಿ ಕರಗದೇ ಉಳಿದ ಪಿ.ಓ.ಪಿ ಗಣಪತಿಗಳು -ಕಲುಷಿತವಾಯ್ತಿ ನದಿ

POP Ganapati idols remain undissolved in Kali River at Dandeli, causing water pollution POP Ganapati idols remain undissolved in Kali River at Dandeli, causing water pollution
POP Ganapati idols remain undissolved in Kali River at Dandeli, causing water pollution

ಸುದ್ದಿಯ ಕೊನೆಯಲ್ಲಿ ವಿಡಿಯೋ ನೋಡಿ

ಕಾರವಾರ/ದಾಂಡೇಲಿ :- ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ (dandeli)ನಗರದಲ್ಲಿ ಹಾದುಹೋಗುವ ಕಾಳಿ ನದಿಯಲ್ಲಿ ವಿಸರ್ಜನೆ ಮಾಡಿದ ನೂರಾರು ಗಣಪತಿಗಳು ನೀರಿನಲ್ಲಿ ಕರಗದೇ ತೀರ ಪ್ರದೇಶದಲ್ಲಿ ಬಂದು ನಿಂತಿದ್ದು ನದಿಯನ್ನ ಕಲುಷಿತಗೊಳಿಸುತ್ತಿದೆ.

ಗಣಪತಿ ಮೂರ್ತಿ ತಯಾರಕರು ಕುಂಬಾರಮಣ್ಣಿನ ಜೊತೆ ಪಿ.ಓಪಿ ಬಳಸಿ ಮೂರ್ತಿ ನಿರ್ಮಿಸಿರುವ ಸಂಶಯ ವ್ಯಕ್ತವಾಗಿದ್ದು , ನದಿಯಲ್ಲಿರುವ ಕರಗದೇ ಉಳಿದ ಗಣಪತಿಗಳು ಪಿ.ಓಪಿಯದ್ದು ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ.

ರಾಜ್ಯ ಸರ್ಕಾರ ಪರಿಸರಕ್ಕೆ ಹಾನಿಯಾಗದಂತಹ ಮಣ್ಣಿನ ಗಣಪ ನಿರ್ಮಾಣಮಾಡಬೇಕು,ಕೆಮಿಕಲ್ ಯುಕ್ತ ಬಣ್ಣ ಬಳಸಬಾರದು ಎಂಬ ನಿಯಮ ಮಾಡಿದೆ. ಇದಲ್ಲದೇ ಜಿಲ್ಲಾಡಳಿತ ಕೂಡ ಈಬಗ್ಗೆ ಜಾಗೃತಿ ಮೂಡಿಸುವ ಜೊತೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರು.

Advertisement

ಜಿಲ್ಲೆಯಲ್ಲಿ  ಈವರ್ಷ  1492 ಕಡೆ ಸಾರ್ವಜನಿಕ ಗಣೇಶ ಮೂರ್ತಿಯನ್ನು ಸ್ಥಾಪನೆಗೆ ಅವಕಾಶ ನೀಡಲಾಗಿತ್ತು.ಕಾಳಿ ನದಿ ಹರಿಯುವ ಜೋಯಿಡಾ,ದಾಂಡೇಲಿ,ಹಳಿಯಾಳ ಭಾಗದಲ್ಲಿ ಒಟ್ಟು 301 ಸಾರ್ವಜನಿಕ ಗಣಪತಿ ಪ್ರತಿಷ್ಟಾಪನೆ ಮಾಡಲಾಗಿತ್ತು.ಇದರ ಜೊತೆ ಮನೆಗಳಲ್ಲೇ ಅಂದಾಜು 10 ಸಾವಿರದಷ್ಟು ಈ ಮೂರು ತಾಲೂಕುಗಳಿಂದ ಗಣಪತಿ ಪ್ರತಿಷ್ಟಾಪನೆ ಹಾಗೂ ವಿಸರ್ಜನೆ ನಡೆಯುತ್ತದೆ. ಹಲವರು ಕೆರೆ,ಬಾವಿಗಳಲ್ಲಿ ವಿಸರ್ಜನೆ ಮಾಡಿದರೇ ಸಾರ್ವಜನಿಕವಾಗಿ ಕೂರಿಸಿದ ಗಣಪತಿಗಳನ್ನ ಕಾಳಿ ನದಿಯಲ್ಲಿ ವಿಸರ್ಜನೆ ಮಾಡುತಿದ್ದಾರೆ.

ಆದರೇ ಹಲವು ಗಣಪತಿಗಳು ಪಿಓಪಿ ಯಿಂದ ನಿರ್ಮಾಣ ಮಾಡಿದ್ದು ಇದೀಗ ನದಿಯಲ್ಲಿ ಕರಗದೇ ಮೂರ್ತಿ ಹಾಗೆಯೇ ಉಳಿದಿದೆ. ಇದರಿಂದ ದಾಂಡೇಲಿಯ ಕಾಳಿ ನದಿ ನೀರು ಹರಿಯುವ ಹಳೆ ಬ್ರಿಡ್ಜ್ ಬಳಿ ದೊಡ್ಡ ದೊಡ್ಡ ಮೂರ್ತಿಗಳು ಸಿಲುಕಿಕೊಂಡು ನದಿ ಪರಿಸರವನ್ನ ಹಾಳು ಮಾಡುತ್ತಿದೆ. ಇದನ್ನೂ ಓದಿ:-Dandeli|ಅಂಬೇವಾಡಿ ಜನವಸತಿ ಪ್ರದೇಶದಲ್ಲಿ ಮೊಸಳೆ ಪ್ರತ್ಯಕ್ಷ; ಸ್ಥಳೀಯರಲ್ಲಿ ಆತಂಕ

ಜಿಲ್ಲಾಡಳಿತ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯವರು ಪಿ.ಓಪಿ ಗಣಪತಿ ನಿರ್ಮಿಸಿದ ಹಾಗೂ ವಿಸರ್ಜನೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪರಿಸರವಾದಿಗಳು ಆಗ್ರಹಿಸಿದ್ದಾರೆ.

ವಿಡಿಯೋ ನೋಡಿ:-

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement