Dandeli|ಕನ್ನಡವಾಣಿ ವರದಿ ಫಲಶೃತಿ-ಸ್ವಚ್ಛವಾದ ಕಾಳಿ ನದಿ ತೀರ ಪ್ರದೇಶ- ವಿಡಿಯೋ ಕೊನೆಯಲ್ಲಿದೆ ನೋಡಿ.

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ (dandeli)ನಗರದಲ್ಲಿ ಹಾದುಹೋಗುವ ಕಾಳಿ ನದಿಯಲ್ಲಿ ವಿಸರ್ಜನೆ ಮಾಡಿದ ನೂರಾರು ಗಣಪತಿಗಳು ನೀರಿನಲ್ಲಿ ಕರಗದೇ ತೀರ ಪ್ರದೇಶದಲ್ಲಿ ಬಂದು ನಿಂತಿದ್ದು ನದಿಯನ್ನ ಕಲುಷಿತಗೊಳಿಸುತ್ತಿದ್ದ ಕುರಿತು ಕನ್ನಡವಾಣಿ.ನ್ಯೂಸ್ ವಿಡಿಯೋ ಸಮೇತ ವರದಿ ಪ್ರಸಾರ ಮಾಡಿತ್ತು . ಇದನ್ನೂ ಓದಿ:-Dandeli | ಕಾಳಿ ನದಿಯಲ್ಲಿ ಕರಗದೇ ಉಳಿದ ಪಿ.ಓ.ಪಿ ಗಣಪತಿಗಳು -ಕಲುಷಿತವಾಯ್ತಿ ನದಿ
ಗಣಪತಿ ಮೂರ್ತಿ ತಯಾರಕರು ಕುಂಬಾರಮಣ್ಣಿನ ಜೊತೆ ಪಿ.ಓಪಿ ಬಳಸಿ ಮೂರ್ತಿ ನಿರ್ಮಿಸಿರುವ ಸಂಶಯ ವ್ಯಕ್ತವಾಗಿದ್ದು , ನದಿಯಲ್ಲಿರುವ ಕರಗದೇ ಉಳಿದ ಗಣಪತಿಗಳು ಪಿ.ಓಪಿಯದ್ದು ಎಂದು ಪರಿಸರವಾದಿಗಳು ಆರೋಪಿಸಿದ್ದರು. ಆದರೇ ಇದೀಗ ವರದಿ ಪ್ರಕಟವಾದ ಬೆನ್ನಲ್ಲೇ ಮಾಲಿನ್ಯ ನಿಯಂತ್ರಣಮಂಡಳಿ ಕ್ರಮ ಕೈಗೊಂಡಿತ್ತು.
ಇನ್ನು ದಾಂಡೇಲಿ ನಗರಸಭೆ ಕೂಡ ನದಿಯಲ್ಲಿ ಕರಗದೇ ಉಳಿದ ಗಣಪತಿಗಳನ್ನ ನದಿ ಭಾಗದಿಂದ ತೆಗೆದು ಸ್ವಚ್ಛ ಗೊಳಿಸಿದೆ. ಈ ಮೂಲಕ ಪರಿಸರಕ್ಕೆ ಹಾನಿಯಾಗುತಿದ್ದ ಪಿಓಪಿ ಗಣಪತಿಯನ್ನ ನದಿಯಿಂದ ತೆರವು ಮಾಡಲಾಗಿದೆ.
ಇನ್ನು ಈ ಬಗ್ಗೆ ತನಿಖೆ ಕೈಗೊಂಡ ಮಾಲಿನ್ಯ ನಿಯಂತ್ರಣಮಂಡಳಿ ಮಣ್ಣಿನ ಗಣಪತಿಯ ಮೇಲ್ಭಾಗದಲ್ಲಿ ಪಿ.ಓ.ಪಿ ಗಳ ಲೇಪನ ಮಾಡಿರುವುದನ್ನ ಪತ್ತೆ ಹಚ್ಚಿದ್ದಾರೆ.
ವಿಡಿಯೋ ನೋಡಿ:-
