BREAKING NEWS
Search

Karwar ನಗರಸಭೆ ನಿರ್ಲಕ್ಷ: ಕಡಲ ತೀರದ ಹೈಮಾಸ್ಕ್ ದೀಪದಲ್ಲಿ ಕರೆಂಟ್ ಶಾಖ್!

106

ಕಾರವಾರ :- ಕಾರವಾರ ನಗರದ ರವೀಂದ್ರ ನಾಥ ಠಾಗೋರ್ ಕಡಲ ತೀರಭಾಗದಲ್ಲಿ ( Ravindranath Tagore beach) ಕಾರವಾರ ನಗರಸಭೆಯಿಂದ ಹೈ ಮಾಸ್ಕ್ ದೀಪಗಳನ್ನು ಅಳವಡಿಸಲಾಗಿದೆ.ಆದ್ರೆ ನಗರಸಭೆ ಕಡಲ ತೀರವನ್ನು ಸೊಚ್ಛವಾಗಿಡುವುದಿರಲಿ, ತೀರ ಭಾಗದಲ್ಲಿ ಇರುವ ಹೈಮಾಸ್ಕ್ ದೀಪಗಳನ್ನು ಸಹ ಸುಸಜ್ಜಿತವಾಗಿ ನಿರ್ವಹಣೆ ಮಾಡುತ್ತಿಲ್ಲ. ಇದಕ್ಕೆ ನಿದರ್ಶನ ಎನ್ನುವಂತೆ ಕಡಲ ತೀರ ಭಾಗದ ಆಂಜನೇಯ ಮೂರ್ತಿ ಇರುವ ಭಾಗದಲ್ಲಿ ಹೈ ಮಾಸ್ಕ್ ದೀಪ ಆಳವಡಿಸಲಾಗಿದ್ದು ಕೆಳಭಾಗದಲ್ಲಿ ಹಾಳಾಗಿದ್ದರೂ ಸರಿ ಪಡಿಸದೇ ವಿದ್ಯುತ್ ವೈರ್ ಗಳನ್ನು ಹಾಗೆಯೇ ಬಿಟ್ಟಿದ್ದರಿಂದ ಅದರ ಬಳಿ ಬಂದ ಶ್ವಾನವೊಂದು ವಿದ್ಯುತ್ ಶಾಕ್ ನಿಂದ ಮೃತಪಟ್ಟಿದೆ.

ಈ ಭಾಗದಲ್ಲಿ ಪ್ರವಾಸಿಗರು,ವಾಯು ವಿಹಾರಕ್ಕೆ ತೆರಳುವವರು,ಮಕ್ಕಳು ಸಹ ಹೋಗುತ್ತಾರೆ. ಒಂದುವೇಳೆ ಮಕ್ಕಳು ಅಥವಾ ಜನರಿಗೆ ಶಾಖ್ ಹಿಡೆದಿದ್ದರೇ ನಗರಸಭೆ ನಿರ್ಲಕ್ಷಕ್ಕೆ ಪ್ರಾಣವೇ ಬಲಿಯಾಗುತಿತ್ತು.

ಹೈಮಾಸ್ಕ್ ದೀಪದ ಕಂಬದ ವಿದ್ಯುತ್ ಶಾಖ್ ಗೆ ಶ್ವಾನ ಮೃತಪಟ್ಟಿದೆ ಆದ್ರೆ ಮುಂದೊಂದು ದಿನ ಜನರು ಬಲಿಯಾಗುವುದರೊಳಗೇ ನಿದ್ದೆ ಯಲ್ಲಿ ಇರುವ ನಗರಸಭೆ ವಿದ್ಯುತ್ ತಂತಿಯನ್ನು ಸರಿಪಡಿಸಿ ಮುಂದಾಗುವ ದುರಂತ ತಪ್ಪಿಸಬೇಕಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!