ಫಟಾಫಟ್ ಸುದ್ದಿ@ ಉತ್ತರ ಕನ್ನಡ

74

ಹಣ ಬಿಡುಗಡೆಯಾದ್ರೂ ಅಪೂರ್ಣ ಕಾಮಗಾರಿ-ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ.

ಕಾರವಾರ: ಕಾರವಾರ ಇಳಕಲ್ ರಸ್ತೆ ನಗರದ ಗೀತಾಂಜಲಿ ಚಿತ್ರಮಂದಿರದಿಂದ ಹಬ್ಬುವಾಡ ರಸ್ತೆಯೂ ಕಾರವಾರ ಅಂಕೋಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಸಂತೋಷ ನಾಯ್ಕರವರ ಅವಧಿಯಲ್ಲಿ 5 ಕೋಟಿ ರೂ.ರಸ್ತೆ ಕಾಮಗಾರಿ ಸೆಂಕ್ಷನ್ ಆಗಿ ಕಾಮಗಾರಿ ಆರಂಭವಾಗಿ ಸಿಮೆಂಟ್ ರಸ್ತೆ ಪೂರ್ಣ ಗೊಂಡಿತ್ತು ಅದರ ಮುಂದಿನ ಕಾಮಗಾರಿ ಡಿವೈಡರ್ ,ಸ್ಲಾಬ್ ಹಾಕುವುದು ಮತ್ತು ವಿದ್ಯುದ್ದೀಪ ಅಳವಡಿಸುವುದು ಬಾಕಿ ಉಳಿದಿತ್ತು. ಆದರೆ ಈಗ ಒಂದು ವರ್ಷ ಮುಗಿಯುತ್ತಾ ಬಂದರೂ ಕಾಮಗಾರಿ ಆರಂಭಿಸದೆ ನಿರ್ಲಕ್ಷಿಸಿ ರುತ್ತಿರುವುದ್ದನ್ನು ಖಂಡಿಸಿ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದರು ಅದಕ್ಕೆ ಇಂದು ಸಂಬಂಧಿಸಿದ ಗುತ್ತಿಗೆದಾರರು ಮತ್ತು ಇಲಾಖೆಯ ಅಧಿಕಾರಿಗಳು ಡಿವೈಡರ್ ಹಾಕುವ ಮಧ್ಯದಲ್ಲಿ ಸಿಮೆಂಟ್ ಲೆಪ ಹಾಕಿಸಿ ಮುಚ್ಚುತ್ತಿರುವುದನ್ನು ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ರೂಪಾಲಿ ಸಂತೋಷ್ ನಾಯ್ಕ್ ರವರು ಹಾಗೂ ಸಾರ್ವಜನಿಕರು ನಗರಸಭೆಯ ಸದಸ್ಯರು,ನಡೆಯುತ್ತಿರುವ ಕೆಲಸವನ್ನು ನಿಲ್ಲಿಸಿ ಪ್ರತಿಭಟನೆ ನಡೆಸಿದರು, ದಿವೈಡರ್ ವಿದ್ಯುದ್ದೀಪ ಹಾಗೂ ಚರಂಡಿ ನಿರ್ಮಾಣ ಕಾರ್ಯವನ್ನು ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಿ ಜನತೆಗೆ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸದಿದ್ದಲ್ಲಿ ಮತ್ತೊಮ್ಮೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ಎಸ್‌. ನಾಯ್ಕ ಎಚ್ಚರಿಕೆ ನೀಡಿದ್ದರು.

ರಸ್ತೆ ನಿರ್ಮಾಣ ಕಾರ್ಯ ಮುಕ್ತಾಯವಾದರೂ ಚರಂಡಿಗೆ ಸ್ಯಾಬ್ ಹಾಕಿ ಮುಚ್ಚುವುದು, ಡಿವೈಡ‌ರ್ ನಿರ್ಮಾಣ, ವಿದ್ಯುದ್ದೀಪ ಅಳವಡಿಸುವ ಕಾಮಗಾರಿ ವಿಳಂಬವಾಗಿದ್ದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಆಗುತ್ತಿದೆ.

ಹಬ್ಬುವಾಡ ರಸ್ತೆಯ ಡಿವೈಡರ್ ನಲ್ಲಿ ವಿದ್ಯುತ್‌ ದೀಪ ಅಳವಡಿಸಲು ಒಟ್ಟೂ 3 ಕೋಟಿ ರೂ.ಗಳ ರಸ್ತೆಯಲ್ಲಿ 27 ಲಕ್ಷ ರೂ. ಇಡಲಾಗಿದೆ.
ಹಬ್ಬುವಾಡ ರಸ್ತೆಯ ಚರಂಡಿ
ನಿರ್ಮಾಣಕ್ಕೆ ಅಗತ್ಯ ಹಣ ಇದ್ದರೂ ಈ ಕಾಮಗಾರಿ ವೇಗವಾಗಿ ನಡೆಯುತ್ತಿಲ್ಲ.
ಚರಂಡಿಗೆ ಸಿಮೆಂಟ್ ಹಲಗೆಯನ್ನು ಶೀಘ್ರದಲ್ಲಿ ಮುಚ್ಚುವ ಅವಶ್ಯಕತೆ
ಇದೆ. ಚಿಕ್ಕಮಕ್ಕಳು, ಮಹಿಳೆಯರು,
ಜನತೆಗೆ ಸುರಕ್ಷಿತ ಓಡಾಟ-
ಕ್ಕೆ ಅವಕಾಶ ಒದಗಿಸಬೇಕಾಗಿದೆ.
ಈ ರಸ್ತೆಯ ಪಕ್ಕದಲ್ಲಿ 300 ಮೀ.ಚರಂಡಿ ನಿರ್ಮಾಣ ಆಗಿದೆ.ಆದರೆ
ಸ್ಲಾಬ್ ಹಾಕುವ ಕಾರ್ಯ ಬಾಕಿ
ಉಳಿದಿದೆ. ಚರಂಡಿನಿರ್ಮಾಣಕ್ಕೆ1
ಕೋಟಿ ರೂ. ಹಣ ಸಹ ಬಿಡುಗ-
ಡೆಯಾಗಿದೆ. ಈ ಕೂಡಲೇ ಈ ಎಲ್ಲ ಕಾಮಗಾರಿ ಪೂರ್ಣಗೊಳಿಸುವಂತೆ
ಹಾಗೂ ಮುಂದೆ ಎಪಿಎಂಸಿ ತನಕರಸ್ತೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ರೂಪಾಲಿ ಎಸ್.ನಾಯ್ಕ ಆಗ್ರಹಿಸಿದ್ದಾರೆ.

ಪ್ರತಿಭಟನೆಯಲ್ಲಿ ಕಾರವಾರದ ನಗರಸಭೆಯ ಸಾಯಿ ಸಮಿತಿ ಅಧ್ಯಕ್ಷ ಹಾಗೂ ನಗರ ಸಭೆಯ ಸದಸ್ಯರು, ಬಿಜೆಪಿ ನಗರದ ಅಧ್ಯಕ್ಷರು,ಪದಾಧಿಕಾರಿಗಳು,ಪ್ರಮುಖರು,ನಾಗರಿಕರು ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಹಸಿ ಮೇವಿಗೆ ವಿಘ್ನ-ಶಿರಸಿ ರೈತರಿಗೆ ಕೈಕೊಟ್ಟ ಮೇವು.

ಬರದ ವೇಳೆ ಜಾನುವಾರುಗಳ ಆಹಾರ ಭದ್ರತೆ ಹಿನ್ನೆಲೆಯಲ್ಲಿ ಸರ್ಕಾರದಿಂದ ರೈತರಿಗೆ ಉಚಿತವಾಗಿ ಹಸಿ ಮೇವು ಬೀಜದ ಕಿಟ್ ವಿತರಿಸಲಾಗಿತ್ತಾದರೂ ನೀರಿನ ಕೊರತೆ ಕಾರಣಕ್ಕೆ ನಾಟಿ ಮಾಡಿದ ಬೀಜಗಳು ಸಸಿಯಾಗುತ್ತಿಲ್ಲ. ಕೆಲವೆಡೆ ಗಿಡಗಳು ಉತ್ತಮವಾದರೂ ವನ್ಯಜೀವಿಗಳ ಲೂಟಿ ಹೆಚ್ಚಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.

ಪ್ರಸಕ್ತ ವರ್ಷ ಬರಪೀಡಿತ ತಾಲ್ಲೂಕಾಗಿರುವ ಶಿರಸಿಯಲ್ಲಿ (sirsi)ನೀರಿನ ಕೊರತೆ ಸಾಕಷ್ಟಿದೆ. ಬೇಸಿಗೆಯಲ್ಲಿ ಮೇವಿನ ಕೊರತೆ ಎದುರಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಪಶು ಸಂಗೋಪನಾ ಇಲಾಖೆಯು ಸಣ್ಣ, ಅತಿಸಣ್ಣ ರೈತರಿಗೆ ಜಾನುವಾರುಗಳ ಮೇವಿಗಾಗಿ ಮೇವಿನ ಬೀಜದ ಮಿನಿ ಕಿಟ್ ವಿತರಿಸಿದೆ. 1,215 ರೈತರಿಗೆ 2,127 ಮೇವಿನ ಕಿಟ್ ವಿತರಿಸಲಾಗಿದ್ದು ಅವರು ಸುಮಾರು 300 ಹೆಕ್ಟೇರ್ ಪ್ರದೇಶದಲ್ಲಿ ಸರಗಂ, ಅಲಸಂದೆ, ಬಾಜ್ರಾ, ಆಫ್ರಿಕನ್ ಟಾಲ್ ಹಸಿ ಮೇವು ಬೀಜ ಬಿತ್ತನೆ ಪೂರ್ಣಗೊಳಿಸಿದ್ದಾರೆ.

ಬಹುತೇಕ ಕಡೆ ಸಣ್ಣ ಗಿಡಗಳು ಮೊಳಕೆಯೊಡೆದು ಬೆಳೆಯಲಾರಂಭಿಸಿವೆ. ಆದರೆ, ವಾರದಿಂದೀಚೆಗೆ ಬಿಸಿಲ ತಾಪ ಹೆಚ್ಚಿದೆ. ವಾತಾವರಣದಲ್ಲಿ ಉಷ್ಣಾಂಶ ಏರಿಕೆಯಾಗಿದೆ. ನೀರಿನ ಕೊರತೆಯೂ ಕಾಡತೊಡಗಿದೆ. ಇದರಿಂದ ಸಣ್ಣ ಸಸಿಗಳು ಒಣಗುತ್ತಿವೆ. ಗಿಡಗಳಿಗೆ ಬೇಕಾದಷ್ಟು ನೀರು ಪೂರೈಕೆ ಕಷ್ಟವಾದ ಕಾರಣ ಇಂಥ ಸಮಸ್ಯೆ ಎದುರಾಗಿದೆ.

ಉತ್ತರಕನ್ನಡಸನ್ಯಾಸ‌ದೀಕ್ಷೆ‌ ; ಸ್ವರ್ಣವಲ್ಲೀ‌ ಮಹಾ‌ಸಂಸ್ಥಾನದಲ್ಲಿ‌ ಶ್ರೀ ನಾಗರಾಜ್ ಭಟ್ಟರಿಗೆ ಸ್ವಾಗತ.

ಶಿರಸಿ: ಶ್ರೀ ಸೋಂದಾ‌ ಸ್ವರ್ಣವಲ್ಲೀ‌ ಮಹಾ‌ಸಂಸ್ಥಾನದಲ್ಲಿ‌ (swarnavali sonnda mata) ಸನ್ಯಾಸ‌ದೀಕ್ಷೆ‌ ಸ್ವೀಕರಿಸಲು ಆಗಮಿಸುತ್ತಿರುವ ಯಲ್ಲಾಪುರ ತಾಲೂಕಿನ‌ ಈರಾಪುರ ಗಂಗೇಮನೆಯ ಶ್ರೀ ನಾಗರಾಜ್ ಭಟ್ಟ ಅವರನ್ನು ಶ್ರೀಮಠಕ್ಕೆ ಬರ ಮಾಡಿಕೊಳ್ಳುವ ಕಾರ್ಯಕ್ರಮ‌ ಮಂಗಳವಾರ ನಡೆಯಲಿದೆ.

ಇದನ್ನೂ ಓದಿ:-ಶಿರಸಿಯಲ್ಲಿ ಮತಾಂತರಕ್ಕೆ ಯತ್ನ -ಆರು ಜನರ ಬಂಧನ

ಮಾ.18 ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ, ಸಮಾರಂಭ ನಡೆಯಲಿದ್ದು, 22 ಕ್ಕೆ ಶಿಷ್ಯ ಸ್ವೀಕಾರ ಕಾರ್ಯಕ್ರಮ, ಧರ್ಮಸಭೆ ನಡೆಯಲಿದೆ.

ಸ್ವರ್ಣವಲ್ಲೀ ಮಠದ ರಥಬೀದಿಯಲ್ಲಿ‌ ಪೂರ್ಣಕುಂಭ ಸ್ವಾಗತ, ಡೊಳ್ಳು ‌ಕುಣಿತ, ಪಂಚ ವಾದ್ಯಗಳ ‌ಮೂಲಕ ಸಂಜೆ 4-30ಕ್ಕೆ ಶ್ರೀಮಠಕ್ಕೆ ಬರ ಮಾಡಿಕೊಳ್ಳಲಾಗುತ್ತಿದೆ. ಬಳಿಕ‌ ಮಠದ ಎಲ್ಲ ದೇವರಿಗೆ ಫಲ‌ ಸಮರ್ಪಿಸಿ ನಿಯೋಜಿತ ಶಿಷ್ಯರಾದ ನಾಗರಾಜ ಭಟ್ಟ ಅವರು ಪ್ರಾರ್ಥಿಸಲಿದ್ದಾರೆ.
ಯಲ್ಲಾಪುರದಿಂದ 150 ಕ್ಕೂ ಅಧಿಕ ಕಾರು ಪರವಾನಗಿ ಪಡೆದಿದ್ದು, ಶೋಭಾಯತ್ರೆಯ ಮಾದರಿಯಲ್ಲಿ ಸ್ವರ್ಣವಲ್ಲೀಯ ತನಕ ಮೆರವಣಿಗೆ‌ ನಡೆಯಲಿದೆ. ನಡು‌‌ ನಡುವೆ‌ ಶಿಷ್ಯ ಭಕ್ತರು ತಳಿರು ತೋರಣಗಳಿಂದ‌ ಸಿಂಗರಸಿ ಬರಮಾಡಿಕೊಳ್ಳಲಿದ್ದಾರೆ.

ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು-ರಾಹುಲ್ ಪ್ರಧಾನಿಯಾಗಲು ಸಾಧ್ಯವಿಲ್ಲ-ಚಕ್ರವರ್ತಿ ಸೂಲಿಬೆಲೆ

ದಾಂಡೇಲಿ : ಕೇವಲ ಉಚಿತವಾಗಿ ನೀಡುವಂತಹ ವಸ್ತುಗಳ ಆಸೆಯಿಂದ ಜನಪ್ರತಿನಿಧಿಗಳ ಆಯ್ಕೆ ಮಾಡುತ್ತಿರುವುದು ದುರ್ದೈವದ ಸಂಗತಿ ಕರ್ನಾಟಕ ಸರಕಾರದ ಬಿಟ್ಟಿ ಭಾಗ್ಯದಿಂದ ರಾಜ್ಯದ ಆರ್ಥಿಕ ಸ್ಥಿತಿ ತೀವ್ರ ಕಂಗೆಟ್ಟಿದೆ. ರೈಲಿನಲ್ಲಿ ಉಚಿತ ಪ್ರಯಾಣ ಎಂಬ ಬಿಟ್ಟಿಭಾಗ್ಯದ ಆಸೆಯನ್ನು ತೋರಿಸಿದರೂ ರಾಹುಲ್ ಪ್ರಧಾನಿಯಾಗಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿಯವರನ್ನು ಈ ದೇಶದ ಜನತೆ ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲಿದ್ದಾರೆ.

ಮೋದಿ (modi) ಮತ್ತೊಮ್ಮೆ ಪ್ರಧಾನಿ ಆಗಬೇಕೆಂಬ ಸಂಕಲ್ಪದಡಿ ನಮೋ ಭಾರತ್ ಅಭಿಯಾನವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ನಮೋ ಭಾರತ್ 2.0 ಅಭಿಯಾನದ ರೂವಾರಿ ಚಕ್ರವರ್ತಿ ಸೂಲಿಬೆಲೆಯವರು( chakravarthi sulibele) ಹೇಳಿದರು.


ಅವರು ಸೋಮವಾರ ನಗರದ ಕುಳಗಿ ರಸ್ತೆಯಲ್ಲಿರುವ ಶ್ರೀ.ವಿದ್ಯಾಧಿರಾಜ ಸಭಾ ಭವನದಲ್ಲಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಜನರನ್ನು ಜಾಗೃತಗೊಳಿಸಿ ರಾಷ್ಟ್ರದಲ್ಲಿ ಮೋದಿ ಸರಕಾರದ ಮೊದಲಿನ ಭಾರತಕ್ಕೂ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಈಗಿನ ಭಾರತದ ನಡುವಿನ ವ್ಯತ್ಯಾಸವನ್ನು ಜನತೆಗೆ ಮನದಟ್ಟು ಮಾಡುವ ನಿಟ್ಟಿನಲ್ಲಿ ಅಭಿಯಾನವನ್ನು ನಡೆಸಲಾಗುತ್ತಿದೆ.

ಇದನ್ನೂ ಓದಿ:-ಹಳಿಯಾಳದಲ್ಲಿ ಅನಾಮಧೇಯ ದಂಪತಿಗಳ ನಿಂಬೆ ಹಣ್ಣಿನ ಹಿಂದೆ ಬಿದ್ದ ಪೊಲೀಸರು! ಏನಿದು ಕಥೆ?

ಕೋಟಿ ಕೋಟಿ ಹಿಂದೂಗಳ ಮಹೋನ್ನತ ಕನಸಾಗಿದ್ದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣವು ಬಿಜೆಪಿಯ ಪ್ರಯತ್ನದಿಂದ ಸಾಧ್ಯವಾಗಿದೆ. ನಮ್ಮ ದೇಶವನ್ನು ಕಡೆಗಣಿಸುತ್ತಿದ್ದ ಜಗತ್ತಿನ ರಾಷ್ಟ್ರಗಳು ಮೋದಿಯವರ ಸಮರ್ಥ ನಾಯಕತ್ವದ ಪರಿಣಾಮದಿಂದಾಗಿ ಇಂದು ರಾಜ ಮರ್ಯಾದೆಯನ್ನು ನೀಡುವಂತಾಗಿದೆ. ಬರಲಿರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಮೋದಿ ಎಂದು ಮತ ಹಾಕಿ ಮೋದಿಯವರನ್ನು ಗೆಲ್ಲಿಸಿ ಭಾರತವನ್ನು ವಿಶ್ವ ಗುರು ಸ್ಥಾನದಲ್ಲಿ ನಿಲ್ಲಿಸುವ ಮಹತ್ವದ ಸಂಕಲ್ಪ ನಮ್ಮೆಲ್ಲರದ್ದಾಗಬೇಕೆಂದು ಕರೆ ನೀಡಿದರು.
ಹಿಂದೂ ಸಮಾಜೋತ್ಸವ ಸಮಿತಿಯ ಅಧ್ಯಕ್ಷರಾದ ವಾಸುದೇವ ಪ್ರಭು ಅವರು ಸ್ವಾಗತಿಸಿ, ವಂದಿಸಿದರು

ಇದನ್ನೂ ಓದಿ:-ಫಟಾಫಟ್ ಸುದ್ದಿ @ Uttrakannada
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!