BREAKING NEWS
Search

ಹಳಿಯಾಳದಲ್ಲಿ ಅನಾಮಧೇಯ ದಂಪತಿಗಳ ನಿಂಬೆ ಹಣ್ಣಿನ ಹಿಂದೆ ಬಿದ್ದ ಪೊಲೀಸರು! ಏನಿದು ಕಥೆ?

112

ಕಾರವಾರ,ಪೆಬ್ರವರಿ01:- ಉತ್ತರ ಕನ್ನಡ (uttrakannada) ಜಿಲ್ಲೆಯ ಹಳಿಯಾಳ(haliyala) ದಲ್ಲಿ ಅನಾಮದೇಯ ದಂಪತಿ ಗಳು ಅಂಗಡಿ ಮುಂದೆ ವಾಮಾಚಾರ ಮಾಡಿ ನಿಂಬೆಹಣ್ಣು ಎಸೆದುಹೋದ ಕುರಿತು ದೂರು ದಾಖಲಾಗಿದೆ.

ಹಳಿಯಾಳ ನಗರದ ಕುಂಬಾರಗಲ್ಲಿಯ ಬಸವರಾಜ್ ಎಂಬುವವರ ಅಂಗಡಿಗೆ ವಾಮಾಚಾರ ಮಾಡಿದ ಕುರಿತು ಜ24 ರಂದು ಹಳಿಯಾಳ ನಗರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಜ.21ರ ರಾತ್ರಿ ವೇಳೆ ಸ್ಕೂಟಿಯಲ್ಲಿ ಬಂದ ಅನಾಮದೇಯ ದಂಪತಿ ಮಳಿಗೆ ಮುಂದೆ ಮಂತ್ರಿಸಿದ ನಿಂಬೆಹಣ್ಣನ್ನು ಎಸೆದು ಹೋದ ವಿಡಿಯೋ ಸಿಸಿ ಕ್ಯಾಮರಾ ದಲ್ಲಿ ಸೆರೆಯಾಗಿತ್ತು. ಈ ಕುರಿತು ಸಿಸಿ ಟಿವಿ ವಿಡಿಯೋ ಆಧರಸಿ ಅಂಗಡಿ ಮಾಲೀಕ ಠಾಣೆಗೆ ದೂರು ನೀಡಿದ್ದು ಅಂಗಡಿ ಮುಂದೆ ಎಸೆಯಲಾದ
ನಿಂಬೆ ಹಣ್ಣಿಗೆ ಮೊಳೆ ಹೊಡೆದು ಕೆಂಪು ದಾರ ಸುತ್ತಿ ಎಸೆದು ವಾಮಾಚಾರ ( black magic) ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಕೇಖಿಸಲಾಗಿದ್ದು ಅವರನ್ನು ಬಂಧಿಸಿ ತನಿಖೆ ನಡೆಸುವಂತೆ ಕೋರಲಾಗಿದೆ.
ಒಟ್ಟಿನಲ್ಲಿ ಕಳ್ಳರನ್ನು ಹಿಡಿಯುವ ಪೊಲೀಸರಿಗೆ ನಿಂಬೆಹಣ್ಣು ಎಸೆದವರನ್ನು ಹಿಡಿಯಬೇಕಾದ ಸ್ಥಿತಿ ಎದುರಾಗಿದ್ದು ನಿಂಬೆ ಹಣ್ಣಿನ ಹಿಂದೆ ಬೀಳುವಂತೆ ಮಾಡಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!