BREAKING NEWS
Search

ಶಂಕಿತ ಉಗ್ರನ ಜೊತೆ ಭಟ್ಕಳದ ವಿಚ್ಛೇದಿತ ಮಹಿಳೆ ಲಿಂಕ್ -ಲವ್ ಕಹಾನಿ ಹಿಂದಿತ್ತು ಕರಾಳ ಮುಖ!

115

ಕಾರವಾರ,ಜನವರಿ26:-ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ವಿಚ್ಛೇದಿತ ಮಹಿಳೆಯೊಬ್ಬಳು ಭಯೋತ್ಪಾದಕನೊಂದಿಗೆ ಸಂಪರ್ಕ ಬೆಳಸಿ ಹಣ ನೀಡಿದ ಕುರಿತು ಮುಂಬೈ ನ ಭಯೋತ್ಪಾದನಾ ನಿಗ್ರಹ ದಳ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಆಜಾದ್ ನಗರದ ಮೂರನೇ ರಸ್ತೆಯ ನಿವಾಸಿಯಾಗಿರುವ ವಿಚ್ಛೇದಿತ ಮಹಿಳೆಯೊಬ್ಬರನ್ನು ವಿಚಾರಣೆ ನಡೆಸಿದೆ.

ಇದನ್ನೂ ಓದಿ:-Loksabha election2024 – ಉತ್ತರ ಕನ್ನಡ ಜಿಲ್ಲೆಯಲ್ಲಿ ಮತದಾರರ ಸಂಖ್ಯೆ ಹೆಚ್ಚಳ-ಯಾವ ಕ್ಷೇತ್ರದಲ್ಲಿ ಎಷ್ಟು ಮತದಾರರು ವಿವರ ನೋಡಿ.

ಕಳೆದ ಎರಡು ದಿನಗಳ ಹಿಂದೆ ಮುಂಬೈ ನಲ್ಲಿ ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿಗಳು ಐಸಿಸ್ ಸಂಘಟನೆಗೆ ಹಣ ವರ್ಗಾವಣೆ ಮಾಡುತ್ತಿದ್ದ ಇಂಜಿನಿಯರ್ ಹುಸೇನ್ ಅಬ್ದುಲ್ ಅಜೀಜ್ ಶೇಖ್ (32) ಎಂಬಾತನನ್ನು ನಾಸಿಕ್‌ನ ಟಿಡ್ಕೆ ಕಾಲೋನಿಯಲ್ಲಿ ಬಂಧಿಸಿದ್ದರು.

ಫೋಟೊದ ಮೇಲೆ ಕ್ಲಿಕ್ ಮಾಡಿ.

ಈ ಸಂದರ್ಭದಲ್ಲಿ ಹುಸೇನ್ ಅಬ್ದುಲ್ ಅಜೀಜ್ ಶೇಖ್ ಮನೆಯಲ್ಲಿ ಸಿಮ್ ಕಾರ್ಡ್ಸ್, ಮೊಬೈಲ್ ಫೋನ್‌ಗಳು, ಪೆನ್‌ಡ್ರೈವ್‌‌ಗಳು, ಲ್ಯಾಪ್‌ಟಾಪ್ ಪತ್ತೆಯಾಗಿತ್ತು. ಇವುಗಳನ್ನು ತಪಾಸಣೆ ನಡೆಸಿದಾಗ, ಹುಸೇನ್ ಅಬ್ದುಲ್ ಅಜೀಜ್ ಶೇಖ್ ಜೊತೆ ಭಟ್ಕಳದ ಮಹಿಳೆ ಸಂಪರ್ಕವಿರುವುದು ಪತ್ತೆಯಾಗಿದೆ. ಈ ಮಹಿಳೆ ಆರೋಪಿ ಹುಸೇನ್ ಅಬ್ದುಲ್ ಅಜೀಜ್ ಶೇಖ್ ನನ್ನು ಪ್ರೀತಿ ಮಾಡುತ್ತಿದ್ದಳು ಎಂಬ ವಿಚಾರವು ತಿಳಿದುಬಂದಿದೆ.

ಜನವರಿ 24 ರಂದು ಭಟ್ಕಳಕ್ಕೆ ಆಗಮಿಸಿದ್ದ ಭಯೋತ್ಪಾದನಾ ನಿಗ್ರಹ ದಳ ಅಧಿಕಾರಿಗಳು ಭಟ್ಕಳ ಪೊಲೀಸರ ಸಹಾಯ ಪಡೆದು, ಶಂಕಿತ ಉಗ್ರನ ಜೊತೆ ಸಂಪರ್ಕವಿದ್ದ ಮಹಿಳೆಯ ಮನೆಗೆ ತೆರಳಿ ಎರಡು ದಿನಗಳ ಕಾಲ ವಿಚಾರಣೆ ನಡೆಸಿದ್ದಾರೆ.

ಅಧಿಕಾರಿಗಳು ಮಹಿಳೆಯಿಂದ ಸಾಕಷ್ಟು ಮಾಹಿತಿ ಕಲೆ ಹಾಕಿ, ಗುರುವಾರ ತೆರಳಿದ್ದಾರೆ. ಈ ಮಹಿಳೆ ಭಟ್ಕಳದಲ್ಲಿ ಆನ್‌ಲೈನ್ ಅರೇಬಿಕ್ ಕ್ಲಾಸ್ ನಡೆಸುವ ಜೊತೆ ಮದರಸಾದ ಶಿಕ್ಷಕಿಯಾಗಿದ್ದು ತಂದೆ ಭಟ್ಕಳದಲ್ಲಿ ಐಸ್ ಕ್ರೀಮ್ ಪಾರ್ಲರ್ ನಡೆಸುತಿದ್ದಾರೆ.

ಈಗೆ ಮೊದಲ ಗಂಡನಿಂದ ವಿಚ್ಛೇದನ ಪಡೆದ ಬಳಿಕ ತಂದೆಯ ಕುಟುಂಬದೊಂದಿಗೆ ವಾಸವಾಗಿದ್ದಳು. ತಂದೆ ಐಸ್ ಕ್ರೀಮ್ ಹಾಗೂ ಕೇಕ್ ಗಳ ಮಾರಾಟದ ಅಂಗಡಿ ಇಟ್ಟುಕೊಂಡಿದ್ದರೇ ಈಕೆ ಮದರಸಾದಲ್ಲಿ ಮಕ್ಕಳಿಗೆ ಪಾಠ ಮಾಡುವ ಜೊತೆ ಆನ್ ಲೈನ್ ಕ್ಲಾಸ್ ಸಹ ಮಾಡುತಿದ್ದಳು. ಸಾಮಾಜಿಕ ಜಾಲತಾಣದ ಮೂಲಕ ಹುಸೇನ್ ಅಬ್ದುಲ್ ಅಜೀಜ್ ಶೇಖ್ ಪರಿಚಯ ಆಗಿದ್ದು ,ಈ ಪರಿಚಯ ಒಂಟಿಯಾಗಿದ್ದ ಈಕೆಗೆ ಪ್ರೀತಿ ಹುಟ್ಟಿಸುವಂತೆ ಮಾಡಿದೆ. ಹೀಗಾಗಿ ವಾಟ್ಸ್ ಅಪ್ ಮತ್ತು ಇತರೆ ಮಾಧ್ಯಮದಲ್ಲಿ ಲೈವ್ ಚಾಟ್ ಮಾಡುತಿದ್ದ ಇಬ್ಬರೂ ಅತೀ ಆತ್ಮೀಯತೆ “ಸೆಕ್ಸ್ ಚಾಟ್ ” ಮಾಡುವಂತೆ ಮಾಡಿತ್ತು. ನಂತರ ಈಕೆ ಆರೋಪಿಗೆ ಹಂತಹಂತವಾಗಿ ನಾಲ್ಕರಿಂದ ಐದು ಲಕ್ಷದ ವರೆಗೆ ಹಣ ಸಹ ತನ್ನ ಅಕೌಂಟ್ ನಿಂದ ನೀಡಿದ್ದಾಳೆ.

ಫೋಟೋದ ಮೇಲೆ ಕ್ಲಿಕ್ ಮಾಡಿ.

ಇನ್ನು ಈಕೆ ಜ.17ರಂದು ಆರೋಪಿ ಹುಸೇನ್ ಅಬ್ದುಲ್ ಅಜೀಜ್ ಶೇಖ್ ನನ್ನು ಭಟ್ಕಳದ ಲಾಡ್ಜ್‌ವೊಂದರಲ್ಲಿ ಭೇಟಿಯಾಗಿ ಸರಸ ಸಲ್ಲಾಪ ಸಹ ನಡೆಸಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದಿದೆ.ಈ ಹಿನ್ನೆಲೆಯಲ್ಲಿ ಭಟ್ಕಳದ ಮಹಿಳೆಯನ್ನು ತನಿಖೆ ಮಾಡಲಾಗಿದೆ.

ಯಾರು ಈ ಹುಸೇನ್ ಅಬ್ದುಲ್ ಅಜೀಜ್ ಶೇಖ್ ?

ನಿಷೇಧಿತ ಭಯೋತ್ಪಾದಕ ಸಂಘಟನೆ ಐಸಿಸ್‌ಗೆ ಬೆಂಬಲ ಮತ್ತು ಧನಸಹಾಯ ಮಾಡಿದ ಆರೋಪದ ಮೇಲೆ ಇಂಜಿನಿಯರ್​ (engineer )ಆಗಿರುವ ಹುಸೇನ್ ಅಬ್ದುಲ್ ಅಜೀಜ್ ಶೇಖ್​ನನ್ನ ಮುಂಬೈನ ಭಯೋತ್ಪಾದನಾ ನಿಗ್ರಹ ದಳ ಅಧಿಕಾರಿಗಳು ಬಂಧಿಸಿದ್ದರು. ಈತ ಐಸಿಸ್(ICS) ಭಯೋತ್ಪಾದಕ ಸಂಘಟನೆಗೆ ಮೂರು ಬಾರಿ ಹಣ ವರ್ಗಾವಣೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಎಟಿಎಸ್ ಅಧಿಕಾರಿಗಳು ತಿಳಿಸಿದ್ದರು. ಸದ್ಯ ಎಂಜಿನಿಯರ್ ಜೊತೆಗಿದ್ದವರು ,ಸಂಪರ್ಕದಲ್ಲಿದ್ದವರನ್ನೂ ವಿಚಾರಣೆ ನಡೆಸಲಾಗುತ್ತಿದ್ದು ಇದರ ಒಂದು ಭಾಗವಾಗಿ ಭಟ್ಕಳದಲ್ಲಿ ಸಹ ತನಿಖೆ ಕೈಗೊಳ್ಳಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!