Ankola| Instagram ಪೋಸ್ಟ್ ನಲ್ಲಿ ಹಿಂದುಗಳ ಅವಹೇಳನ ಠಾಣೆಗೆ ಮುತ್ತಿಗೆ ಹಾಕಿದ ಹಿಂದೂ ಕಾರ್ಯಕರ್ತರು!

116

ಕಾರವಾರ,ಜನವರಿ 24:-ರಾಮಮಂದಿರ (Ramamandira) ಉದ್ಘಾಟನೆ ಬೆನ್ನಲ್ಲೇ ಹಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ (social media )ವಹೇಳನಕಾರಿ ಪೋಸ್ಟ್ ಹಾಕುತಿದ್ದು ,ಉತ್ತರ ಕನ್ನಡ ಜಿಲ್ಲೆಯ ಅಂಕೋಲ ಪಟ್ಟಣದ ಹುಲಿದೇವರವಾಡ ನಿವಾಸಿಯಾಗಿರುವ ಪದವಿ ವಿದ್ಯಾರ್ಥಿ ಜಾಫರ್ ಎಂಬಾತ ತನ್ನ Instagram ಖಾತೆಯಲ್ಲಿ “ಸಬರ್ ಜಬ್ ವಕ್ತ್ ಹಮಾರಾ ಆಯೇಗಾ ತಬ್ ಸಿರ್ ದಡ್ ಸೇ ಅಲಗ್ ಕಿಯೇ ಜಾಯೆಂಗೆ” ಎಂಬ ಪೋಸ್ಟ್ ಹಾಕಿದ್ದಾನೆ.

ಇದನ್ನೂ ಓದಿ:-ಶಿರಸಿ ಬಿಜೆಪಿ ಸಭೆಯಲ್ಲಿ ಒಟ್ಟಾದ ಕಾಗೇರಿ ,ಅನಂತಕುಮಾರ್ ಹೆಗಡೆ! ಕೈಕೊಟ್ಟ ಜಿಲ್ಲಾ ನಾಯಕರು-ಚರ್ಚೆಯಾಗಿದ್ದೇನು?

ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ವೈರಲ್ (post viral )ಆಗುತಿದ್ದಂತೆ ಹಿಂದೂಪರ ಕಾರ್ಯಕರ್ತರು ಠಾಣೆಗೆ ತೆರಳಿ ಪ್ರತಿಭಟನೆ ನಡೆಸಿದ್ದಾರೆ.

ತಕ್ಷಣದಲ್ಲೇ ಯುವಕನನ್ನು ಬಂಧಿಸುವಂತೆ ಆಗ್ರಹಿಸಿದ್ದು ಕೆಲವು ಸಮಯ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.

ಇದನ್ನೂ ಓದಿ:-Exclusive-ಅಂಕೋಲ ಕಡಲತೀರದಲ್ಲಿ ನಾಗ ಚೈತನ್ಯ, ಸಾಯಿ ಪಲ್ಲವಿ ‘ತಾಂಡೇಲ್’ ಚಿತ್ರೀಕರಣ

ಈ ನಡುವೆ ಠಾಣೆಗೆ ಯುವಕನ ಕುಟುಂಬಸ್ತರು ಹಾಗೂ ಮುಖಂಡರು ಆಗಮಿಸಿ ಹಿಂದೂ ಕಾರ್ಯಕರ್ತರ ಮನವೊಲಿಸುವ ಪ್ರಯತ್ನ ನಡೆಸಿದರು.ಆದರೇ ಬಹಿರಂಗವಾಗಿ ಯುವಕ ಕ್ಷಮೆ ಕೇಳಬೇಕು ಹಾಗೂ ಈತನ ವಿರುದ್ಧ ಅಂಕೋಲ ಠಾಣೆ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಲು ಒತ್ತಾಯಿಸಿದ್ದು ,ಪ್ರಕರಣ ದಾಖಲಾಗಬೇಕಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!