Karwar| ಕಾರವಾರ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಗಡಿಪಾರು |ಕಾರಣವೇನು ಗೊತ್ತಾ?

file 000000005074821195ee3ef2d50d3b2c file 000000005074821195ee3ef2d50d3b2c

Karwar| ಕಾರವಾರ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಗಡಿಪಾರು |ಕಾರಣವೇನು ಗೊತ್ತಾ?.

ಕಾರವಾರ :-12 ಕ್ಕೂ ಹೆಚ್ಚು  ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿರುವ ಕಾರವಾರ(karwar) ತಾಲೂಕಿನ ಕಿನ್ನರದ ನಿವಾಸಿ ಹಾಗೂ ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷ  ಪ್ರಶಾಂತ ಗೋವೆಕರ್ ಎಂಬಾತನನ್ನು ಉತ್ತರ ಕನ್ನಡ  ಜಿಲ್ಲಾ ಪೊಲೀಸ್ ಇಲಾಖೆ ವಿಜಯನಗರ ಜಿಲ್ಲೆಯ ಹೊಸಪೇಟೆಗೆ ಆರು ತಿಂಗಳುಗಳ ಕಾಲ ಗಡಿಪಾರು ಮಾಡಿದೆ.

ಇದನ್ಬೂ ಓದಿ:-Ankola | ಒಂದೇ ಅಂಗಡಿಗೆ 5 ಬಾರಿ ಕಳ್ಳತನ! ಶಟರ್‌ಗೆ ಕರೆಂಟ್ ಹರಿಸಿ ಪರಾರಿಯಾಗುವ ಖತರ್ನಾಕ್ ಕಳ್ಳ -ವಿಡಿಯೋ ನೋಡಿ

Advertisement

ಪ್ರಶಾಂತ ಗೋವೆಕರ್  ಈ ಹಿಂದೆ ಕಾರವಾರ ತಾಲೂಕು ಪಂಚಾಯತ ಸದಸ್ಯರಾಗಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಇವರ ವಿರುದ್ಧ ಕಾರವಾರ ಶಹರ, ಗ್ರಾಮೀಣ, ಮಹಿಳಾ ಹಾಗೂ ಚಿತ್ತಾಕುಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಒಟ್ಟು 12 ಪ್ರಕರಣಗಳು ದಾಖಲಾಗಿವೆ. ಹೀಗಿದ್ದರೂ ವಸೂಲಿ,ಬೆದರಿಕೆ ಆರೋಪ ಇವರ ಮೇಲೆದ್ದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ರೌಡಿಶೀಟ್ ತೆರೆಯಲಾಗಿತ್ತು.

ಇದನ್ನೂ ಓದಿ:-Karwar- ಗಾಂಜಾ ಮಾರಾಟ ಯತ್ನ -ಸದಾಶಿವ ಘಡದ ಇಬ್ಬರ ಬಂಧನ

ಪದೇಪದೇ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಶಾಂತಿ, ನೆಮ್ಮದಿ, ಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆಯನ್ನು ಪರಿಗಣಿಸಿ ಗಡಿಪಾರು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

Karwar| ಕಾರವಾರ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಗಡಿಪಾರು |ಕಾರಣವೇನು ಗೊತ್ತಾ?
ಗಡಿಪಾರಾದ ಪ್ರಶಾಂತ್

ಜಿಲ್ಲಾ ಪೊಲೀಸ್ ಇಲಾಖೆಯ ಆದೇಶದಂತೆ ಪ್ರಶಾಂತ ಗೋವೆಕರ್ ಅವರನ್ನು ಉತ್ತರ ಕನ್ನಡ ಜಿಲ್ಲೆಯಿಂದ ವಿಜಯನಗರ ಜಿಲ್ಲೆಯ ಹೊಸಪೇಟೆಗೆ ಆರು ತಿಂಗಳಕಾಲ ಗಡಿಪಾರು ಮಾಡಲಾಗಿದೆ. ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ನಿಹಾಲ್ ಖಾನ್ ಅವರು ಅವರನ್ನು ಹೊಸಪೇಟೆವರೆಗೆ ಕರೆದೊಯ್ದು ಗಡಿಪಾರು ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ.

ಇದನ್ನೂ ಓದಿ:-Karwar |ಹೋರಿಗುದ್ದಾಟದ ನಡುವೆ ಸಿಕ್ಕಿದ ಮಹಿಳೆ ಸಾವು

ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವು ಜನರು ಕೋಮು ಸಂಘರ್ಷ, ವಸೂಲಿ ದಂಧೆ ಸೇರಿದಂತೆ ಹಲವು ಪ್ರಕರಣ ಎದುರಿಸುತಿದ್ದು ,ಸಮಾಜದಲ್ಲಿ ತಾವು ಸಮಾಜ ಸೇವಕರು ಎಂಬಂತೆ ಮುಖವಾಡ ಧರಿಸಿದ್ದರು.ಈ ಹಿನ್ನಲೆಯಲ್ಲಿ ಇಂತಹ ವ್ಯಕ್ತಿಗಳಿಂದ ಸಮಾಜಕ್ಕೆ ಆಗುತ್ತಿರುವ ಹಾನಿ ತಪ್ಪಿಸಲು ಎಸ್.ಪಿ ದೀಪನ್, ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ರವರ ತಂಡ ಕಾರ್ಯಪ್ರವೃತರಾಗಿದ್ದು ,ಈಗಾಗಲೇ ಎಂಟಕ್ಕೂ ಹೆಚ್ಚು ಜನರನ್ನ ಗಡಿಪಾರು ಮಾಡಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement