Yallapur| ಗಟಾರದಲ್ಲಿ ಪತ್ತೆಯಾಯ್ತು ಹತ್ಯೆಯಾದವನ ಶವ!

Point Blur Aug132026 211429 Point Blur Aug132026 211429

Yallapur| ಗಟಾರದಲ್ಲಿ ಪತ್ತೆಯಾಯ್ತು ಹತ್ಯೆಯಾದವನ ಶವ!

ಕಾರವಾರ:-ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ(yallapur) ತಾಲೂಕಿನ ಅರಬೈಲ್ ಘಟ್ಟದ ರಾಷ್ಟೀಯ ಹೆದ್ದಾರಿ 52 ರ ಮೂಲೆಪಾಲ ವ್ಯಾಪ್ತಿಯಲ್ಲಿ ಹೆದ್ದಾರಿ ಪಕ್ಕದ ಗಟಾರದಲ್ಲಿ ಸುಮಾರು 22ರಿಂದ 26 ವರ್ಷ ವಯಸ್ಸಿನ ಯುವಕನ ಮೃತದೇಹ ಪತ್ತೆಯಾಗಿದೆ.

ಮೃತನು ಮಹಾರಾಷ್ಟ್ರ ಮೂಲದ ಅಕ್ಷಯ್ ಎಂದು ತಿಳಿದು ಬಂದಿದ್ದು ,ಹತ್ಯೆ ಮಾಡಿ ದೇಹವನ್ನು ಎಸೆದುಹೋಗಿರುವ ಸಂಶಯ ವ್ಯಕ್ತವಾಗಿದೆ.

Advertisement

ಇದನ್ನೂ ಓದಿ:-Yallapur| ದುಮ್ಮಿಕ್ಕಿ ಹರಿವ ಪ್ರಕೃತಿ ಸೊಬಗಿನ ಮಾಗೋಡು ಜಲಪಾತ -ವಿಡಿಯೋ ನೋಡಿ

 ಮೃತದೇಹ ನೋಡಿದ ಕುರಿತು ಕೊಡ್ಲಗದ್ದೆಯ ರವಿ ಸಿದ್ದಿ ಪೊಲಿಸ್ ಠಾಣೆಯಲ್ಲಿ ದೂರು ನೀಡಿದ್ದು, ತಾನು ಬಸ್ಸಿನಲ್ಲಿ ಬರುತ್ತಿರುವಾಗ ಗಟಾರದಲ್ಲಿ ಯುವಕನೊರ್ವ ಬಿದ್ದಿರುವುದು ಕಂಡು ಬಂದಿದೆ. ಬಸ್ಸಿನಿಂದ ಇಳಿದು ಹೋಗಿ ನೋಡಿದಾಗ ಬಲ ಮಗ್ಗುಲಾಗಿ ಬಿದ್ದಿದ್ದು ಎದೆ, ಹೊಟ್ಟೆಯ ಭಾಗದಲ್ಲಿ ಚರ್ಮ ಕಿತ್ತು,ಹೊಟ್ಟೆಯ ಎಡ ಭಾಗದಲ್ಲಿ 3 ರಕ್ತ ಗಾಯಗಳು ಇದ್ದು ಯಾವುದೋ ಬಿರುಸಾದ ವಸ್ತುವಿನಿಂದ ಹೊಡೆದು, ಚುಚ್ಚಿದ ರೀತಿಯಲ್ಲಿ ಕಂಡು ಬಂದಿದ್ದು ಅಲ್ಲದೇ ಮೂಗಿನಿಂದ ರಕ್ತ ಬಂದಿರುವುದು, ಎಡ ಪಕ್ಕೆಲುಬಿನ ಹತ್ತಿರ ಯಾವುದೋ ಬಿರುಸಾದ ವಸ್ತುವಿನಿಂದ ಹೊಡೆದ ಗಾಯಗಳು ಪತ್ತೆಯಾಗಿದೆ.ಈ ಕುರಿತು ಮೃತದೇಹ ನೋಡಿದ ಪ್ರತ್ಯಕ್ಷ ದರ್ಶಿ ಮಾಹಿತಿ ನೀಡಿದ್ದು ,ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ:-Sirsi- ಐದು ಲಕ್ಷ ಮೌಲ್ಯದ ಚಿನ್ನಾಭರಣ ಕದ್ದ ಕಳ್ಳಿಯರ ಬಂಧನ .

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement