Sirsi- ಐದು ಲಕ್ಷ ಮೌಲ್ಯದ ಚಿನ್ನಾಭರಣ ಕದ್ದ ಕಳ್ಳಿಯರ ಬಂಧನ .

IMG 20260813 WA0007 IMG 20260813 WA0007

ಶಿರಸಿ- ಐದು ಲಕ್ಷ ಮೌಲ್ಯದ ಚಿನ್ನಾಭರಣ ಕದ್ದ ಕಳ್ಳಿಯರ ಬಂಧನ .

ಕಾರವಾರ:- ಶಿರಸಿಯಿಂದ (sirsi)ಚಂದ್ರಗುತ್ತಿಕಡೆ ಬಸ್ ನಲ್ಲಿ ಹೋಗುತಿದ್ದ ಹೊನ್ನಾವರ ಮೂಲದ ಮಹಿಳೆಯೋರ್ವಳ ಬ್ಯಾಗಿನಲ್ಲಿದ್ದ ಚಿನ್ನಾಭರಣ ಕದ್ದ ಕಳ್ಳಿಯರನ್ನ ಶಿರಸಿ ನಗರ ಠಾಣೆ ಪೊಲೀಸರು ಬಂಧಿಸಿ ಎಲ್ಲಾ ಸ್ವತ್ತುಗಳನ್ನ ವಶಕ್ಕೆ ಪಡೆದು ಶಿವಮೊಗ್ಗ ಹಾಗೂ ಧಾವಣಗೆರೆ ಮೂಲದ ಇಬ್ಬರು ಮಹಿಳೆಯರನ್ನ ಬಂಧಿಸಿದ್ದಾರೆ.

ಘಟನೆ ಏನು?

ಹೊನ್ನಾವರ ಮೂಲದ ಮಹಿಳೆಯೊಬ್ಬರು ಚಂದ್ರಗುತ್ತಿಗೆ ಹೋಗಲು ಶಿರಸಿ ಬಸ್ ನಿಲ್ದಾಣಕ್ಕೆ ಬಂದಿದ್ದು ಬಸ್ ಏರುವಾಗ  ವ್ಯಾನಿಟಿ ಬ್ಯಾಗಿನ ಜಿಪ್ ತೆಗೆದು ಬಾಕ್ಸನಲ್ಲಿ ಇಟ್ಟಿದ್ದ (1) ಅಂದಾಜು 18 ಗ್ರಾಂ ಬಂಗಾರದ ಶಾರ್ಟ ನಕ್ಲೀಸ್-01, (2) ಅಂದಾಜು 30 ಗ್ರಾಂ ಬಂಗಾರದ ಉದ್ದನೆ ಹಾರ-01, (3) ಅಂದಾಜು 02 ಗ್ರಾಂ ಬಂಗಾರದ ಉಂಗುರ-01, (4) ಅಂದಾಜು 10ಗ್ರಾಂ ಬೆಳ್ಳಿ ನಾಣ್ಯ-01 ಒಟ್ಟು ₹3,52,000/-  ಮೌಲ್ಯದ ಸ್ವತ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಶಿರಸಿ ನಗರ ಠಾಣೆಯಲ್ಲಿ  ದೂರು ನೀಡಿದ್ದು, ಈ ಬಗ್ಗೆ ಶಿರಸಿ ನಗರ ಠಾಣೆ ಗುನ್ನ ನಂ 52/2026 ಕಲಂ 303(2) ಬಿ.ಎನ್.ಎಸ್.ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದರು.

Advertisement

ಇದನ್ಬೂ ಓದಿ:-Sirsi KSRTC | ಶೌಚಾಲಯಕ್ಕೆ ನಿಗದಿಗಿಂತ ದುಪ್ಪಟ್ಟು ದರ! ಪ್ರಶ್ನಿಸಿದ ವಿದ್ಯಾರ್ಥಿಗೆ ಹಲ್ಲೆ | ಮೊಬೈಲ್ ಒಡೆದು ಗೂಂಡಾಗಿರಿ

ಸದ್ರಿ ಪ್ರಕರಣದ ಪತ್ತೆಯ ಕುರಿತು ಮೇಲಾಧಿಕಾರಿಗಳ ಆದೇಶದಂತೆ ಒಂದು ನುರಿತ ತಂಡವನ್ನು ರಚನೆ ಮಾಡಿದ್ದು, ಸದರ ತಂಡವು ಈ ಪ್ರಕರಣದಲ್ಲಿ ಹಲವು ಆಯಾಮಗಳಲ್ಲಿ ತನಿಖೆ ಕೈಗೊಂಡು ಕಾರ್ಯಾಚರಣೆ ನಡೆಸಿ ಕಳ್ಳತನ ಮಾಡಿಕೊಂಡು ಹೋಗಿದ್ದ ಆಪಾದಿತೆಯರನ್ನು ಪತ್ತೆ ಮಾಡಿ, ಅವರ ಪೈಕಿ ಶಿವಮೊಗ್ಗ ನಗರದ ಗೋಪಾಳದ ಸುಶೀಲಾ ಕೋಂ ಸುರೇಶ,(39 ),ದಾವಣಗೆರೆ ಜಿಲ್ಲೆಯ ಚನ್ನಗಿರಿಯ  ಸಾಯಿಲಕ್ಷ್ಮಿ ಕೋಂ ಪ್ರಭುದಾಸ(36 ) ಬಂಧಿಸಿದ್ದು,

ಕಳ್ಳತನ ಮಾಡಿಕೊಂಡು ಹೋಗಿದ್ದ ಸುಮಾರು 5,00000/- (ಐದು ಲಕ್ಷ) ರೂ ಮೌಲ್ಯದ 50ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಜಪ್ತ ಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ:-Sirsi|ಹತ್ಯೆ ಪ್ರಕರಣ ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಸೇರಿ ಏಳು ಜನ ಆರೋಪಿಗಳ ಜಾಮೀನು ನಿರಾಕರಣೆ.

ಸದ್ರಿ ಪ್ರಕರಣದ ಪತ್ತೆಗೆ ಮಾನ್ಯ ಎಸ್.ಪಿ. ದೀಪನ್  ರವರ ಮಾರ್ಗದರ್ಶನದಲ್ಲಿ,ಸಿ.ಪಿ.ಐ  ಸಂಪತ್ ಈ.ಸಿ ,ಪಿ.ಎಸ್.ಐ ನರಸಿಂಹಲು ,ಪಿ.ಎಸ್.ಐ.ನಾರಾಯಣ ರಾಠೋಡ ರವರ  ನೇತೃತ್ವದಲ್ಲಿ ಅಪರಾಧ ವಿಭಾಗದ ಸಿಬ್ಬಂದಿಗಳಾದ ಬಸವರಾಜ ಹಗರಿ, ಕೊಟೇಶ ನಾಗರವಳ್ಳಿ, ರಾಮಯ್ಯ ಪೂಜಾರಿ, ಹನುಮಂತ ಮಾಕಾಪೂರ, ಸದ್ದಾಂ ಹುಸೇನ್, ರಾಜು.ಎಂ, ಹನುಮಂತ ಕಬಾಡಿ, ಚನ್ನಬಸಪ್ಪ, ಶೋಭಾ ಹಾಗೂ ಕಾರವಾರ ಟೆಕ್ನಿಕಲ್ ಸೆಲ್ ನ ಉದಯ ಗುನಗಾ, ಬಬನ ಕದಂ ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿ ಆರೋಪಿತನನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement